ಬೆಂಗಳೂರು:ಕರ್ನಾಟಕದಲ್ಲಿ ಸಹಕಾರ ಇಲಾಖೆ 100ಕ್ಕೂ ಹೆಚ್ಚ ವರರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ. ಸಹಕಾರ ಇಲಾಖೆಯ ಎಲ್ಲಾ ಫಲಾನುಭವಿಗಳಿಗೆ ನನ್ನ ನಮನಗಳು. ಗದಗದಲ್ಲಿ ಆರಂಭವಾದ ಮೊದಲ ಸಹಕಾರ ಸಂಘ ಇಂದು ವಿಶ್ವದ ಮುಂದೆ ಸಧೃಡವಾಗಿ ನಿಂತಿದೆ. ಕರ್ನಾಟಕದಲ್ಲಿ ಸಹಕಾರಿ ರಂಗ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.
ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ ಸಹಕಾರ ಸಮ್ಮೇಳನದಲ್ಲಿ ಅಮಿತ್ ಷಾ ಮಾತನಾಡುತ್ತಾ, ಸಹಕಾರಿ ಕ್ಷೇತ್ರದಿಂದ ದೇಶದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಮುಖ್ಯವಾಗಿ ಅವರ ಖಾತೆಗೆ ನೇರವಾಗಿ ಹಣ ಹೋಗುತ್ತಿದೆ. ಪ್ರಧಾನಿ ಮೋದಿ ಸಹಕಾರ ಆಂದೋಲನವನ್ನು ಮುಂದುವರೆಸಲು ಸಹಕಾರಿ ಸಚಿವಾಲಯ ಆರಂಭಿಸಿದ್ದಾರೆ. ಇದರಿಂದ ಸಹಕಾರಿ ಸಂಘಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇದಕ್ಕಾಗಿ ಮೋದಿ ಅವರಿಗೆ ಧನ್ಯವಾದ ಹೇಳಬೇಕು ಎಂದರು.
ಕೃಷಿ ಕ್ಷೇತ್ರದಲ್ಲಿ ಸಹಕಾರಿ ರಂಗ ಸಂಪೂರ್ಣವಾಗಿ ಆವರಿಸಿಕೊಂಡಿದೆ. ರೈತರ ಖಾತೆಗೆ ಸರ್ಕಾರದಿಂದ ನೇರವಾಗಿ ಹಣ ಜಮೆ ಮಾಡಲಾಗುತ್ತಿದೆ. ರಾಸಾಯನಿಕಗಳು, ಭಿತ್ತನೆ ಬೀಜ, ಇವೆಲ್ಲದರ ಉತ್ಪಾದನೆ ಸಹಕಾರ ಸಂಘದ ಮೂಲಕ ಸಾಧ್ಯವಾಗುತ್ತಿದೆ.
ನಮ್ಮ ಸರ್ಕಾರದ ಆಡಳಿತದಲ್ಲಿ ಸಹಕಾರಿ ರಂಗ ಹೊಸ ಆಯಾಮವನ್ನು ಪಡೆದುಕೊಳ್ಳಲಿದೆ. ಸಧ್ಯದಲ್ಲೇ ಸಹಕಾರ ವಿಶ್ವವಿದ್ಯಾಲಯ ತೆರೆಯುವ ಯೋಜನೆ ಜಾರಿಯಾಗಲಿದೆ. ಇದರೊಂದಿಗೆ ದೇಶದ ಸಂಪೂರ್ಣ ಮಾಹಿತಿ ಇರುವ ಸಹಕಾರಿ ಡೇಟಾ ಬೇಸ್ ಮಾಡುವ ಅಲೋಚನೆ ಮಾಡಲಾಗುವುದು ಎಂದು ಅಮಿತ್ ಷಾ ಭರವಸೆ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
