ಬೆಂಗಳೂರು:ಮಿಷನ್​ 150ರ ಗುರಿ ಸಾಧಿಸುವುದಕ್ಕೆ ಬೇಕಾದ ಟಾಸ್ಕ್​ ನೀಡದೆ, ರ್ನಿದಿಷ್ಟ ಸಂದೇಶವನ್ನೂ ಕೊಡದೆ ಬಿಜೆಪಿ ವರಿಷ್ಠ, ಕೇಂದ್ರ ಗೃಹ ಸಚಿವ ಅಮಿತ್​ ಷಾ ಕುತೂಹಲ ಉಳಿಸಿ ದೆಹಲಿಗೆ ಮರಳಿದ್ದಾರೆ. ಇದರೊಂದಿಗೆ ನಾಯಕತ್ವದ ಬದಲಾವಣೆ, ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಕುರಿತ ಚರ್ಚೆಗೆ ಅಲ್ಪ ವಿರಾಮ ಬಿದ್ದು, ಮುಂದಿನ ಚುನಾವಣೆಗಾಗಿ ಸರ್ಕಾರ ಮತ್ತು ಪಕ್ಷಕ್ಕೆ ರ್ನಿದಿಷ್ಟ ಹೊಣೆ ನಿಗದಿಪಡಿಸಲಿದ್ದಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.
ಅಧಿಕೃತ ಕಾರ್ಯಕ್ರಮಗಳ ಜತೆಗೆ ಅಮಿತ್​ ಷಾ ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಭೋಜನ ಕೂಟಕ್ಕೆ ಒಂದು ತಾಸು ಮೀಸಲು, ನಂತರ ಖಾಸಗಿ ಹೋಟೆಲ್​ನಲ್ಲಿ ವಿಶೇಷ ಸಭೆಗೆ ಎರಡು ತಾಸು ಗೊತ್ತುಪಡಿಸಿದ್ದು ಅನೇಕ ಲೆಕ್ಕಾಚಾರಗಳಿಗೆ ಪುಷ್ಠಿ ನೀಡಿತ್ತು. ಷಾ ಬೆಂಗಳೂರಿಗೆ ಆಗಮನವಾದ ಬೆನ್ನಲ್ಲೇ ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಮೇ 10 ರೊಳಗೆ ಸಿಎಂ ಬದಲಾವಣೆ ನಿಶ್ಚಿತವೆಂದದ್ದು ಚರ್ಚೆಗೆ ಕಾವೇರಿಸಿತು. ಆದರೆ, ಷಾ ಅಧಿಕೃತ ಕಾರ್ಯಕ್ರಮಗಳಿಗೆ ನಿಗದಿಯಾದಷ್ಟೇ ಕಾಲಾವಕಾಶವನ್ನು ನೀಡಿದರು. ಸಿಎಂ ನಿವಾಸದ ಔತಣ ಕೂಟದಲ್ಲಿ 15&20 ನಿಮಿಷಗಳಷ್ಟೇ ಇದ್ದರು. ನಂತರ ನಿಗದಿಯಾಗಿದ್ದ ಸಭೆ ರದ್ದಾಯಿತು. ಕೋರ್​ ಕಮಿಟಿ ಸದಸ್ಯರ ಜತೆಗೆ ಚರ್ಚಿಸಲಿದ್ದಾರೆ ಎನ್ನುವುದೂ ಹುಸಿಯಾಯಿತು.
ಸಿಎಂ ಮನೆಯಲ್ಲಿ ಊಟಕ್ಕೂ ಮುನ್ನ ಕೆಲವರನ್ನು ಪರಿಚಯಿಸಿದಾಗ ಷಾ ಮುಗುಳ್ನಗೆ ಬೀರಿದರು. ನಂತರ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಬಿಜೆಪಿ ಅಧ್ಯಕ್ಷರೊಂದಿಗೆ ಷಾ ಕುಳಿತು ಊಟ ಮಾಡುವಾಗ ಔಪಚಾರಿಕವಾಗಿ ಚರ್ಚಿಸಿದರು. ನಂತರ ಸಂ ಪರಿವಾರದ ಹಿರಿಯ ಸದಸ್ಯ ಸೀತಾರಾಮ ಜಿಂದಾಲ್​ ಅವರ ಸೌಜನ್ಯದ ಭೇಟಿಗೆ ತೆರಳಿದರು.ಸಿಎಂ ಜತೆಗೆ ಖಾಸಗಿ ಹೋಟೆಲ್​ಗೆ ಮರಳಿದ ಅವರು ಖೇಲೋ ಇಂಡಿಯಾ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು ರಾತ್ರಿ ನಿಗದಿತ ಅವಧಿಗಿಂತ ಒಂದು ತಾಸು ತಡವಾಗಿ ವಿಶೇಷ ವಿಮಾನದಲ್ಲಿ ದೆಹಲಿಗೆ ಮರಳಿದರು.
ಸಚಿವರಾದ ಡಾ.ಕೆ. ಸುಧಾಕರ್​, ಬಿ.ಸಿ. ಪಾಟೀಲ್​, ಮುರುಗೇಶ್​ ನಿರಾಣಿ, ಬಾಲಚಂದ್ರ ಜಾರಕಿಹೊಳಿ ಸೇರಿ ಹಲವು ಸಂಸದ&ಶಾಸಕರ ಗೈರುಹಾಜರಿ ಎದ್ದುಕಂಡಿತು. ಔತಣಕೂಟದ ಬಗ್ಗೆ ತಡವಾಗಿ ಮಾಹಿತಿ ರವಾನೆ ದೂರದ ಊರಿನವರು ಬರಲಾಗಿಲ್ಲ. ಬಸವ ಜಯಂತಿ ಮತ್ತು ರಂಜಾನ್​ ಹಬ್ಬವೂ ಮತ್ತೊಂದು ಕಾರಣ. ಸಚಿವರು, ಸಂಸದ&ಶಾಸಕರು, ವಿಧಾನ ಪರಿಷತ್​ ಸದಸ್ಯರು ಸೇರಿ 80ಕ್ಕೂ ಹೆಚ್ಚು ಜನರು ಭೋಜನಕೂಟದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
ಮುಖಾಮುಖಿ ಚರ್ಚೆಸಿಎಂ ಬೊಮ್ಮಾಯಿ ಜತೆ ಅಮಿತ್​ ಷಾ ಮುಖಾಮುಖಿ ಚರ್ಚೆ ನಡೆಸಿ, ಆಡಳಿತ ಮತ್ತು ಅಭಿವೃದ್ಧಿಗೆ ಇನ್ನಷ್ಟು ವೇಗ ನೀಡಬೇಕೆಂಬ ಸಲಹೆ ನೀಡಿದರು ಎನ್ನಲಾಗಿದೆ. ಸೋಮವಾರ ಮಧ್ಯರಾತ್ರಿ ಬೆಂಗಳೂರಿಗೆ ಬಂದಿಳಿದ ಷಾ ಅವರು ತಂಗಿದ್ದ ಹೋಟೆಲ್​ನಲ್ಲಿಯೇ ಬೊಮ್ಮಾಯಿ ಜತೆಗೆ ಸಮಾಲೋಚಿಸಿದರು ಎಂದು ಮೂಲಗಳು ತಿಳಿಸಿವೆ. ಸಚಿವ ಸಂಪುಟ ಇನ್ನಿತರ ರಾಜಕೀಯ ನಿರ್ಧಾರಗಳ ಬಗ್ಗೆ ಹೆಚ್ಚು ಚಿಂತಿಸುವುದು ಬೇಡ. ಅಭಿವೃದ್ಧಿ ಅಜೆಂಡಾದ ಮೇಲೆ ಮುಂದಿನ ಚುನಾವಣೆ ಎದುರಿಸುವುದು ಪಕ್ಷದ ದೃಢ ನಿಲುವು. ಪಂಚರಾಜ್ಯಗಳ ಚುನಾವಣೆಯಲ್ಲಿ ಇದೇ ತಂತ್ರಗಾರಿಕೆ ಹೆಣೆದು ಸಲವಾಗಿದ್ದೇವೆ. ಕರ್ನಾಟಕದಲ್ಲಿ ಅಭಿವೃದ್ಧಿಯೇ ಪ್ರಧಾನ ಕಾರ್ಯಸೂಚಿಯಾಗಿರಲಿದೆ. ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಇನ್ನಷ್ಟು ಚುರುಕುಗೊಳಿಸಬೇಕು. ಜನರ ವಿಶ್ವಾಸ ಮತ್ತು ಪರವಾದ ಅಭಿಪ್ರಾಯ ರೂಪಿಸಬಲ್ಲ ಇನ್ನಷ್ಟು ಹೊಸ ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೂ ವೇಗದ ಸ್ಪರ್ಶ ನೀಡಬೇಕು ಎಂದು ಷಾ ಕಿವಿಮಾತು ಹೇಳಿದ್ದಾರೆ.
ರಹಸ್ಯದ ತಿರುವುವಿಶೇಷ ಸಭೆ, ಪ್ರಮುಖರ ಜತೆಗೆ ಚರ್ಚೆ ಕೈಬಿಟ್ಟದ್ದಲ್ಲದೆ, ರಾಜಕೀಯ ವಿಚಾರಗಳಲ್ಲಿ ಷಾ ಮೌನಕ್ಕೆ ಶರಣಾದದ್ದು ರಾಜ್ಯ ನಾಯಕರ ತಳಮಳ ಹೆಚ್ಚಿಸಿದೆ. ಸಂಪುಟ ಪುನಾರಚನೆ ಇಲ್ಲವೇ ವಿಸ್ತರಣೆ ಕುರಿತು ಗೊಂದಲಗಳು ರಹಸ್ಯದ ತಿರುವು ಪಡೆದಿದ್ದು, ದೆಹಲಿ ನಾಯಕರು ಏನೂ ಮಾತನಾಡಲಿಲ್ಲವೆಂದು ಮುಂದೇನೋ ಕಾದಿದೆ ಎಂದೂ ಅರ್ಥೈಸಬಹುದು ಅಥವಾ ಅಂತಹದ್ದೇನೂ ಇಲ್ಲವೆಂದು ವ್ಯಾಖ್ಯಾನಿಸಬಹುದು ಎಂದು ಪಕ್ಷದ ಉನ್ನತ ಮೂಲಗಳು ಹೇಳುತ್ತವೆ. ಮಹತ್ವದ ಬದಲಾವಣೆ, ನಿರ್ಧಾರಗಳು ಏನೇ ಇದ್ದರೂ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಅಂತಿಮವಾಗಲಿದ್ದು, ಷಾ ಬೆಂಗಳೂರು ಭೇಟಿ ಮತ್ತು ಏನನ್ನೂ ಹೇಳದೆ ಹೋಗಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.
ಯತ್ನಾಳ್​ಗೆ ಎಚ್ಚರಿಕೆ!ನಾಯಕತ್ವ ಬದಲಾವಣೆ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಅವರಿಗೆ ಎಚ್ಚರಿಕೆ ಸಂದೇಶ ರವಾನೆ ಯಾಗಿರುವುದಾಗಿ ತಿಳಿದುಬಂದಿದೆ. ಮುಜುಗರ ಉಂಟು ಮಾಡುವ ಹೇಳಿಕೆ ನೀಡದಂತೆ ಯತ್ನಾಳ್​ಗೆ ತಾಕೀತು ಮಾಡಬೇಕು ಎಂದು ಪಕ್ಷದ ರಾಜ್ಯ ನಾಯಕರಿಗೆ ಅಮಿತ್​ ಷಾ ಸೂಚಿಸಿದ್ದು, ಇದಾದ ನಂತರ ರಾಜ್ಯ ಬಿಜೆಪಿಅಧ್ಯಕ್ಷರು ಖಡಕ್​ ಹೇಳಿಕೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಸಿಂಗ್​ ವಿರುದ್ಧ ಸಿಡಿಮಿಡಿ?ನಾಯಕತ್ವ, ಸಚಿವ ಸಂಪುಟದ ಕುರಿತು ಪಕ್ಷದ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ನೀಡಿದ ಹೇಳಿಕೆ ಬಗ್ಗೆ ಅಮಿತ್​ ಷಾ ಸಿಡಿಮಿಡಿ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ. ಈ ಕಾರಣಕ್ಕೆ ಸಿಎಂ ನಿವಾಸದಲ್ಲಿ ಔತಣ ಕೂಟದಲ್ಲಿ ಪಾಲ್ಗೊಂಡ ಬಳಿಕ ಷಾ ತೆರಳುವ ಮುನ್ನವೇ ಅರುಣ್​ ಸಿಂಗ್​ ದೆಹಲಿಗೆ ಪ್ರಯಾಣ ಬೆಳೆಸಿದರು ಎಂದು ಹೇಳಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − fourteen =
Remember me
