ಮುಂಬೈ:ಬಾಲಿವುಡ್​ ನಟ ಅಮಿತಾಬ್ ಬಚ್ಚನ್ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ಕೌನ್​ ಬನೇಗಾ ಕರೋಡ್​​ ಪತಿ ಕಾರ್ಯಕ್ರಮ 16ನೇ ಸೀಸನ್ ಮೊನ್ನೆಯಿಂದ ಶುರುವಾಗಿದೆ. ಈ ಬಾರಿ ಕಾರ್ಯಕ್ರಮದ ಮೊದಲ ಎಪಿಸೋಡ್‌ನಲ್ಲಿ ಹಾಟ್ ಸೀಟ್ ಮೇಲೆ ಬೆಂಗಳೂರು ಮೂಲದ ಉತ್ಕರ್ಷ್  ಕುಳಿತಿದ್ದರು. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​  ಆಗಿದೆ.

ಕಂಪನಿಯೊಂದರಲ್ಲಿ ಹೆಚ್.ಆರ್. ಆಗಿರುವ ಉತ್ಕರ್ಷ್, ಅಮಿತಾಬ್ ಕೇಳಿದ ಪ್ರಶ್ನೆಗಳಿಗೆ ನಿಖರ ಉತ್ತರ ಕೊಡುತ್ತಿದ್ದರು. 12.50 ಲಕ್ಷವನ್ನು ಗಳಿಸಿದ್ದರು. ಆ ನಂತರ 25 ಲಕ್ಷ ರೂಪಾಯಿಗಳಿಗೆ ಉತ್ಕರ್ಷ್ ಅವರಿಗೆ ಮಹಾಭಾರತದ ಪ್ರಶ್ನೆಯನ್ನು ಬಚ್ಚನ್ ಕೇಳಿದ್ದರು.

ಮಹಾಭಾರತದ ಪ್ರಕಾರ ಅಂಬಾಗೆ ಮಾಲೆಯನ್ನು ಉಡುಗೊರೆಯಾಗಿ ನೀಡಿದ ಮತ್ತು ಅದನ್ನು ಧರಿಸಿದವರು ಭೀಷ್ಮನನ್ನು ಕೊಲ್ಲುತ್ತಾರೆ ಎಂದು ಹೇಳಿದ ದೇವರು ಯಾರು? ಉತ್ತರಿಸಿ ಎಂದು ಭಗವಾನ್ ಶಿವ, ಭಗವಾನ್ ಕಾರ್ತಿಕೇಯ, ಭಗವಾನ್ ಇಂದ್ರ ಮತ್ತು ಭಗವಾನ್ ವಾಯು ಹೀಗೆ ಯಥಾಪ್ರಕಾರ ನಾಲ್ಕು ಆಯ್ಕೆಗಳನ್ನು ನೀಡಿದರು.
ಲೈಫ್ ಲೈನ್ ಮೊರೆ ಹೋದ ಉತ್ಕರ್ಷ್, ವಿಡಿಯೋ ಕಾಲ್ ಎ ಫ್ರೆಂಡ್ ಬಳಿಸಿದರು.ಇದಕ್ಕೆ ಅವರ ಸ್ನೇಹಿತ ಉತ್ತರ ಭಗವಾನ್ ಶಿವ ಎಂದು ಹೇಳಿದರು. ಡಬಲ್ ಡಿಪ್ ಲೈಫ್‌ ಲೈನ್‌ನ್ನೂ ಕೂಡ ಉತ್ಕರ್ಷ್ ಉಪಯೋಗಿಸಿದರು. ಸ್ನೇಹಿತ ಹೇಳಿದ್ದ ಭಗವಾನ್ ಶಿವ ಉತ್ತರವನ್ನು ನೀಡಿದ ಉತ್ಕರ್ಷ ಅದು ತಪ್ಪೆಂದು ಗೊತ್ತಾದ ನಂತರ ಎರಡನೇ ಉತ್ತರವಾಗಿ ಭಗವಾನ್ ವಾಯು ಹೆಸರು ಹೇಳಿದರು. ಆದರೆ, ಉತ್ಕರ್ಷ್ ದುರಾದೃಷ್ಟ ಈ ಉತ್ತರವೂ ಕೂಡ ತಪ್ಪಾಗಿತ್ತು. ಸರಿ ಉತ್ತರ ಭಗವಾನ್ ಶಿವ ಮತ್ತು ಭಗವಾನ್ ವಾಯು ಆಗಿರಲಿಲ್ಲ. ಬದಲಿಗೆ ಭಾಗವಾನ್ ಕಾರ್ತಿಕೇಯ ಆಗಿತ್ತು.
A post shared by Sony Entertainment Television (@sonytvofficial)

ಒಂದು ವೇಳೆ ಉತ್ಕರ್ಷ್ ಈ ಪ್ರಶ್ನೆಗೆ ಉತ್ತರ ನೀಡದೇ ಆಟ ಬಿಟ್ಟಿದ್ದರೆ 12.5 ಲಕ್ಷದ ಜೊತೆ ಉತ್ಕರ್ಷ್ ಮನೆಗೆ ಮರಳುತ್ತಿದ್ದರು. ಆದರೆ 25 ಲಕ್ಷ ರೂಪಾಯಿಯ ಆಸೆ ಇವರನ್ನು 3.5 ಲಕ್ಷ ಪಡೆದುಕೊಂಡಿದ್ದಾರೆ. ಈ ಕಾರ್ಯಕ್ರಮದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.
ರಾಜ್ ಜತೆ ಲವ್​​​ನಲ್ಲಿ ಬಿದ್ರು ಸಮಂತಾ! ನಾಗ ಚೈತನ್ಯ ನಿಶ್ಚಿತಾರ್ಥ ಆಗ್ತಿದ್ದಂತೆ ಹೊರ ಬಿತ್ತು ಹೊಸ ಸುದ್ದಿ

ಶಿಕ್ಷಕನಾಗುವ ಕನಸು ಬಿಟ್ಟು ಕತ್ತೆ ಹಾಲು ಮಾರಾಟಕ್ಕಿಳಿದ; ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡ್ತಾನೆ ಈ ರೈತ

ಕಾಫಿ ಶಾಪ್​​ನಲ್ಲಿ ಕೆಲಸ ಮಾಡ್ತಿದ್ದವಳು ಈಗ ಸ್ಟಾರ್​ ನಟಿ, 120 ಕೋಟಿ ಒಡತಿ

ಐಶ್ವರ್ಯಾ ರೈ ಫಿಲ್ಮಂ ಕೆರಿಯರ್​​ ಹಾಳು ಮಾಡಿದ್ದೇ ಅಭಿಷೇಕ್ ಬಚ್ಚನ್ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + eighteen =
Remember me
