ಹುಬ್ಬಳ್ಳಿ:ಅಮಿತ್ ಶಾ ಭೇಟಿ ಹಿನ್ನೆಲೆ ಕುಂದಗೋಳದಲ್ಲಿ ಸಂಭ್ರಮದ ವಾತಾವರಣ ಉಂಟಾಗಿದ್ದು ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳಿಸೋ ಕಸರತ್ತನ್ನು ಷಾ ಮಾಡಲಿದ್ದಾರೆ. ಈಗಾಗಲೇ ರೋಡ್​ ಶೋ ಪ್ರಾರಂಭವಾಗಿದ್ದು ರಸ್ತೆಯ ಇಕ್ಕೆಲದಲ್ಲಿ ಜನಸಾಗರವೇ ಸೇರಿದೆ.
ಕುಂದಗೋಳಕ್ಕೆ ಹೆಲಿಕಾಪ್ಟರ್​ ಮೂಲಕ ಆಗಮಿಸಿದ ಅಮಿತ್ ಷಾ ಅವರನ್ನು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಎಂ.ಆರ್. ಪಾಟೀಲ ಮತ್ತು ಎಸ್.ಐ ಚಿಕ್ಕನಗೌಡರು ಶಾಲು ಹೊದಿಸಿ, ಮಾಲೆ ಹಾಕಿ ಸ್ವಾಗತಿಸಿದ್ದಾರೆ.
ಇದೀಗ ಚಾಣಕ್ಯ ಎಂದೇ ಹೆಸರಾಗಿರುವ ಅಮಿತ್​ ಷಾ ರಣಕಹಳೆ ಮೊಳಗಿಸಲಿದ್ದು ಅವರು ರೋಡ್ ಶೋ ಮೂಲಕ ಆಗಮಿಸುತ್ತಿದ್ದಾರೆ. ರಸ್ತೆಯುದ್ದಕ್ಕೂ ಅಬ್ಬರದ ಸ್ವಾಗತ ಕೋರಲು ಕುಂದಗೋಳ‌ ಜನ ಸಿದ್ಧರಾಗಿ ನಿಂತಿದ್ದಾರೆ. ಇದೇ ಸಂದರ್ಭದಲ್ಲಿ ಗೋಡೆ ಬರಹಕ್ಕೂ ಅಮಿತ್ ಶಾ ಚಾಲನೆ ನೀಡಲಿದ್ದು ಕುಂದಗೋಳ ಪಟ್ಟಣದ ಬಸವರಾಜ ಹಂಚಿನಮನಿ ಅವರ ಮನೆಗೆ ಗೋಡೆ ಬರಹಕ್ಕೆ ಸಿದ್ಧತೆ ನಡೆಸಲಾಗಿದೆ.
ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದು ಪಟ್ಟಣದಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಗೃಹಮಂತ್ರಿ ಅಮಿತ್ ಷಾಗೆ ರೋಡ್​ ಶೋನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್,‌ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲು ಸೇರಿದಂತೆ ಅನೇಕ ನಾಯಕರು ಸಾಥ್​ ನೀಡುತ್ತಿದ್ದಾರೆ.
ರೋಡ್ ಶೋ ಮೂಲಕ ಆಗಮಿಸಿದ ಅಮಿತ್ ಷಾ ಆಗಮಿಸುತ್ತಿದ್ದಂತೆಯೇ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಜಯಘೋಷ ಹಾಕಿದ್ದು ರಸ್ತೆಯುದ್ದಕ್ಕೂ ಅಮೀತ್ ಷಾಗೆ ಕುಂದಗೋಳ‌ ಜನ ಅಬ್ಬರದ ಸ್ವಾಗತ ಕೋರಿದ್ದಾರೆ.
ಗಾಳಿ ಮಾರೆಮ್ಮ ದೇವಸ್ಥಾನದವರೆಗೂ ಬೃಹತ್ ರೋಡ್ ಶೋ ಹೋಗಲಿದ್ದು ನಂತರ ಗೋಡೆ ಬರಹಕ್ಕೆ ಅಮಿತ್ ಷಾ ಚಾಲನೆ ನೀಡಲಿದ್ದಾರೆ. ಅಮಿತ್ ಷಾ, ಬಸವರಾಜ ಹಂಚಿನಮನಿ ಎಂಬುವವರ ಮನೆಗೆ ಗೋಡೆಬರಹ ಬರೆಯಲಿದ್ದು ಕಮಲದ ಚಿತ್ರಕ್ಕೆ ಬಣ್ಣ ಬಳಿಯುವ ಮೂಲಕ ವಿಜಯ ಸಂಕಲ್ಪ ಅಭಿಯಾನ ಮಾಡಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − nine =
Remember me
