ಬೆಂಗಳೂರು:ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ ನೀಡಿದ್ದು ಈ ಸಂದರ್ಭ ಅಮಿತ್​ ಷಾ ಹಾಗೂ ಡಾ. ಸುಧಾಕರ್​ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಕೆಪಿಸಿಸಿ ಕಛೇರಿಯಲ್ಲಿ ಮಾತನಾಡಿದ ವೀರಪ್ಪ ಮೋಯ್ಲಿ, “ಬಿಜೆಪಿಯ ಅನೇಕ ಜನ ಸ್ಥಳೀಯ ನಾಯಕತ್ವಕ್ಕೆ‌ ಬೇಸತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಿ ಬಿಜೆಪಿಗೆ ಸೇರಿದಂತ ಡಾ.ಸುಧಾಕರ್ ವಿರುದ್ಧ ಬಿರುಗಾಳಿ ರೀತಿಯ ವಾತಾವರಣ ಇದೆ. ಅವರು ಬಿರುಗಾಳಿಯಲ್ಲಿ ಕೊಚ್ಚಿಹೋಗುವ ಬಗ್ಗೆ ಅನುಮಾನ ಇಲ್ಲ. ಅನೇಕರು ಬಿಜೆಪಿ ನಾಯಕರ,ಸುಧಾಕರ್ ವರ್ತನೆಗೆ ರೋಸಿ ಹೋಗಿದ್ದು ಜಿಗುಪ್ಸೆಯಿಂದ ನಮ್ಮಲ್ಲಿಗೆ ಬಂದಿದ್ದಾರೆ.
ಸುಧಾಕರ್​ಗೆ ಟಿಕೆಟ್ ಕೊಟ್ಟಾಗ ಭಾಷಣ ಮಾಡೋಕೆ ಗೊತ್ತಿರಲಿಲ್ಲ. ನಮ್ಮ ಒಳ್ಳೆಯ ಅಭ್ಯರ್ಥಿ ಕೊಟ್ಟಿದ್ದೇವೆ. ಈ‌ ಅಭ್ಯರ್ಥಿ ಒಳ್ಳೆಯ ಭಾಷಣಗಾರ. ಡಾ.ಸುಧಾಕರ್ ಸೋಲುವುದು ಖಚಿತ. ನರೇಂದ್ರ ಮೋದಿ,ಅಮಿತ್​ ಷಾ 20 ಸಾರಿ‌ ಬರ್ತಾರೆ.
18 ರಾಜ್ಯಗಳಿಗೆ ಇದೇ ರೀತಿ ಹೋದಾಗ ಶೂನ್ಯ ಸಿಕ್ಕಿದ್ದು ಕೇರಳಕ್ಕೆ ಹೋದ್ರು ಬರಲಿಲ್ಲ, ತಮಿಳುನಾಡಿಗೆ ಹೋದ್ರು ಬರಲಿಲ್ಲ, ತೆಲಂಗಾಣಕ್ಕೆ ಹೋದ್ರು ಅಲ್ಲಿಯೂ ಬಿಜೆಪಿ ಬರಲಿಲ್ಲ. ಆಂದ್ರ ಪ್ರದೇಶ, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳಕ್ಕೆ 1000 ಸಾರಿ ಹೋಗಿದ್ದಾರೆ. ಅಲ್ಲಿ ಅಧಿಕಾರಕ್ಕೆ ಬರಲಿಲ್ಲ.
ಗೋವಾಕ್ಕೆ ಹೋದ್ರೂ ಅಲ್ಲಿ ಬಿಜೆಪಿ ಬರಲಿಲ್ಲ. ಅಲ್ಲಿ ವಾಮಮಾರ್ಗದಲ್ಲಿ ಅಧಿಕಾರ ಹಿಡಿದರು. ಮಹಾರಾಷ್ಟ್ರದಲ್ಲಿಯೂ ಕೂಡಾ ವಾಮಮಾರ್ಗದಲ್ಲಿ ಅಧಿಕಾರ ಹಿಡಿದರು. ಮಣಿಪುರ,ತ್ರಿಪುರ ದಲ್ಲಿಯೂ ಹಾಗೆ ಮಾಡಿದ್ರು. ಬಿಜೆಪಿ ನೇರವಾಗಿ ಬರಲ್ಲ. ಅಡ್ಡದಾರಿಯಲ್ಲಿ ಬಂದು ಅಧಿಕಾರ‌‌ ಹಿಡಿಯುತ್ತಾರೆ. ಅಮಿತ್ ಷಾ ಯಾವ ಮನುಷ್ಯ ಎನು ಅಂತ‌ ನಿಮಗೆ ಗೊತ್ತಿದೆ
ಅಮಿತ್ ಷಾ ತಮ್ಮ ರಾಜ್ಯದಿಂದಲೇ ಗಡಿಪಾರು ಆಗಿದ್ದರು. ಈಗ ರಾಷ್ಟ್ರದಿಂದ ಗಡಿಪಾರು ಆಗೋದು ಬಾಕಿ ಇದೆ. ವೀರಪ್ಪ ಮೊಯ್ಲಿ ಹೇಳಿಕೆ. ಅಮಿತ್ ಷಾ ಇವತ್ತು ಕಾನೂನು ಸುವ್ಯವಸ್ಥೆ ಕಾಪಾಡ್ತಾ ಇದ್ದಾರೆ. ಅಮಿತ್ ಷಾ ಮಾಡಿರುವ ದೌರ್ಜನ್ಯದಿಂದ ಅಮೆರಿಕಾ ಸರ್ಕಾರ ವೀಸಾ ನೀಡಿಲ್ಲ” ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
