ಬೆಂಗಳೂರು:ಆಡಳಿತಾರೂಢ ಬಿಜೆಪಿಯ ‘ಮಾಸ್ಟರ್​ವೆುೖಂಡ್’ ಎಂದೇ ಗುರುತಿಸಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಸೋಮವಾರ ರಾತ್ರಿಯಿಂದ 21 ತಾಸು ಬೆಂಗಳೂರಿನಲ್ಲಿ ಮೊಕ್ಕಾಂ ಹೂಡಲಿದ್ದು, ರಾಜಕೀಯ ಬದಲಾವಣೆಗಳ ಕುತೂಹಲ ಗರಿಗೆದರಿದೆ. ಅಧಿಕೃತ, ಖಾಸಗಿ ಕಾರ್ಯಕ್ರಮಗಳ ಜತೆಗೆ ಭೋಜನ ಕೂಟದ ಹೆಸರಲ್ಲಿ ಔಪಚಾರಿಕ ಮಾತುಕತೆ, ಆಯ್ದ ಪ್ರಮುಖರೊಂದಿಗೆ ವಿಶೇಷ ಸಂವಾದ ನಡೆಸಲಿರುವುದು ಗಮನಸೆಳೆದಿದೆ.
ಅಮಿತ್ ಷಾ ನೀಡಲಿರುವ ‘ಸಂದೇಶ’, ಯಾವೆಲ್ಲ ಸಂಗತಿ ಅವಲೋಕಿಸಲಿದ್ದಾರೆ ಎನ್ನುವುದರ ಕಡೆಗೆ ಆಡಳಿತ ಮತ್ತು ಪಕ್ಷದ ರಾಜ್ಯ ನಾಯಕತ್ವದ ಚಿತ್ತ ನೆಟ್ಟಿದೆ. ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿಗೆ ಪದೇ ಪದೆ ಎದುರಾಗುತ್ತಿರುವ ಅಡಚಣೆ, ರಾಜ್ಯದ ಇತ್ತೀಚಿನ ರಾಜಕೀಯ ವಿದ್ಯಮಾನಗಳ ಮಾಹಿತಿ ಸಂಗ್ರಹಿಸುವ ಸಾಧ್ಯತೆಗಳಿವೆ.
ತೊಳಲಾಟ:ಅಮಿತ್ ಷಾ ಬರುತ್ತಾರೆಂದರೆ ಸ್ಪಷ್ಟ ನೀಲನಕ್ಷೆ ಜತೆಗಿರುತ್ತದೆ. ಪ್ರಮುಖ ಬೆಳವಣಿಗೆಯಾಗಲಿದೆ ಎಂಬ ಬಹಿರಂಗ ಚರ್ಚೆ, ತರಹೇವಾರಿ ಆಂತರಿಕ ತರ್ಕಗಳು ಕಾವು ಪಡೆದುಕೊಂಡಿವೆ. ಅಚ್ಚರಿಯ ನಡೆಯಿಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಷಾ ನಿಸ್ಸೀಮರು ಎಂಬ ಬಲ್ಲವರ ಅಭಿಪ್ರಾಯಗಳು ನಿಗೂಢತೆ ಹೆಚ್ಚಿಸಿದೆ. ಇದರ ಭಾರದಿಂದ ಪಕ್ಷದ ಹಲವು ಮುಖಂಡರು ತೊಳಲಾಡುತ್ತಿದ್ದಾರೆ. ಸಚಿವ ಸಂಪುಟದ ಹಲವು ಸಹೋದ್ಯೋಗಿಗಳು, ಕೆಲವು ನಾಯಕರು ನಿಸ್ತೇಜವಾಗಿದ್ದರೆ, ಇನ್ನೂ ಕೆಲವು ಮುಖಂಡರು ಹೆಚ್ಚು ಲವಲವಿಕೆಯಿಂದ ಇರುವುದಕ್ಕೆ ಪರಿಸ್ಥಿತಿಯನ್ನು ತಾಳೆ ಹಾಕಿ ಅನೇಕರು ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾರಂಭಿಸಿದ್ದಾರೆ.
ಷಾ ಕಾರ್ಯಕ್ರಮ ಪಟ್ಟಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 18 =
Remember me
