ವಿಧಾನಸಭಾ ಚುನಾವಣೆಗೆ ಪಕ್ಷಗಳು ಹಂತಹಂತವಾಗಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಪ್ರಸ್ತುತ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಸುತ್ತಿದ್ದರೆ ಬಿಜೆಪಿ ‘ಜನಾಭಿಪ್ರಾಯ’ ರೂಪಿಸುವ ನಿಟ್ಟಿನಲ್ಲಿ ತನ್ನಲ್ಲಿರುವ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಕಾಂಗ್ರೆಸ್​ನಲ್ಲಿ ಟಿಕೆಟ್ ಆಕಾಂಕ್ಷಿಗಳ ಒತ್ತಡಕ್ಕೆ ಪಕ್ಷದ ಮುಂಚೂಣಿ ನಾಯಕರು ಹೈರಾಣಾಗಿದ್ದಾರೆ. ಕೆಲವು ಕಡೆ ಗುಂಪುಗಾರಿಕೆ ವಿಪರೀತವಾಗಿದ್ದು, ಟಿಕೆಟ್ ಘೋಷಣೆ ಬಳಿಕ ತಿಕ್ಕಾಟ ತೀವ್ರಗೊಳ್ಳುವ ಲಕ್ಷಣ ಕಾಣಿಸಿದೆ. ಬಿಜೆಪಿ ವಿಚಾರಕ್ಕೆ ಬಂದರೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಪಕ್ಷದ ರಾಜ್ಯ ನಾಯಕರೆದುರು ತಮ್ಮ ಅಪೇಕ್ಷೆ ಹೊರಗೆಡಹಿ, ತಕ್ಷಣದಿಂದಲೇ ಬೂತ್ ಮಟ್ಟದಲ್ಲಿ ಚಟುವಟಿಕೆ ಚುರುಕುಗೊಳಿಸಲು ಟಾಸ್ಕ್ ನೀಡಿದ್ದಾರೆ. ಜೆಡಿಎಸ್ ಮಾತ್ರ ಪಂಚರತ್ನ ಯಾತ್ರೆ ಮೂಲಕ ತನ್ನ ಉತ್ಸಾಹ ದಾಖಲಿಸುತ್ತ ಸಾಗಿದೆ.
ಬೆಂಗಳೂರು:ಬಿಜೆಪಿ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಹೊಂದಾಣಿಕೆ ರಾಜಕಾರಣದಿಂದ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಬಿಜೆಪಿ, ಮುಂಬರುವ ಚುನಾವಣೆಯಲ್ಲಿ ಅಡ್ಜಸ್ಟ್​ಮೆಂಟ್ ರಾಜಕಾರಣಕ್ಕೆ ಬ್ರೇಕ್ ಹಾಕುವ ಸ್ಪಷ್ಟ ಸುಳಿವು ನೀಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಪಕ್ಷದ ರಾಜ್ಯ ಪ್ರಮುಖರೊಂದಿಗೆ ನಡೆಸಿದ ಸಭೆಯಲ್ಲಿ ಸ್ಪಷ್ಟ ಸೂಚನೆಯನ್ನು ನೀಡಿದ್ದು, ಹಲವು ನಾಯಕರು ಎದá-ರಾಳಿ ಪಕ್ಷದ ನಾಯಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಅವರಿಗೂ ಅನá-ಕೂಲ ಮಾಡಿಕೊಡುವ ಉದಾಹರಣೆಗಳಿವೆ. ಇದನ್ನು ಸಹಿಸುವುದಿಲ್ಲ ಎಂದು ಸೂಚ್ಯವಾಗಿ ಹೇಳಿದ್ದಾರೆ. ಇನ್ನು 150 ಕ್ಷೇತ್ರ ಗೆಲ್ಲುವ ಗುರಿಯನ್ನು ರಾಜ್ಯ ನಾಯಕರ ಹೆಗಲಿಗೆ ಹಾಕಿದ್ದಾರೆ. ಈ ಮೂಲಕ ತಾವು ಹಾಗೂ ನರೇಂದ್ರ ಮೋದಿಯವರ ಪ್ರಯತ್ನದಿಂದ ಚುನಾವಣೆ ಗೆಲ್ಲುವ ಆಸೆ ಇಟ್ಟುಕೊಳ್ಳುವ ಬದಲು ಸ್ವಯಂ ಪ್ರಯತ್ನದಿಂದ ಚುನಾವಣೆ ಗೆಲ್ಲಬೇಕು, ನೀವೇ ಗೆಲ್ಲಿಸುವ ಸಾಮರ್ಥ್ಯ ಪಡೆದುಕೊಳ್ಳಬೇಕು.
ನಾಯಕರಿಗೆ ಮಾರ್ಗದರ್ಶನ ಹಾಗೂ ಕಾರ್ಯಕರ್ತರಿಗೆ ಹಿತೋಪದೇಶ ನೀಡುವುದಕ್ಕೆ ಎರಡು ದಿನಗಳ ಪ್ರವಾಸ ಸೀಮಿತವಾದಂತಿದ್ದು, ಅಗತ್ಯವಿರುವೆಡೆ ಮಾತ್ರ ತಮ್ಮ ಪ್ರವೇಶದ ಮುನ್ಸೂಚನೆ ನೀಡಿದ್ದಾರೆ. ಇನ್ನೆಷ್ಟು ವರ್ಷ ದೆಹಲಿ ನಾಯಕತ್ವ ಚುನಾವಣೆ ಗೆಲ್ಲಿಸಬೇಕೆಂದು ಬಿಸಿ ಮುಟ್ಟಿದ್ದಾರೆ. ಕರ್ನಾಟಕದ್ದೇ ಒಂದು ಮಾದರಿ ಹಾಕಿಕೊಳ್ಳಬೇಕೆಂದು ಸಂದೇಶ ಬಿಟ್ಟುಹೋಗಿದ್ದಾರೆ.
ಹೊಸ ಪ್ರಯೋಗಕ್ಕೆ ಸಜ್ಜಾದ ಬಿಜೆಪಿ: ಹಳೇ ಮೈಸೂರು ಭಾಗದತ್ತ ವಿಶೇಷ ಒಲವು ತೋರಿಸಿದ್ದು, ಹೊಸ ಪ್ರಯೋಗ ನಿಚ್ಚಳವಾಗಿದೆ. ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು, ಕಾಂಗ್ರೆಸ್ ಮತ್ತು ಜೆಡಿಎಸ್​ನ ಅಸಮಾಧಾನಿತ ಪ್ರಭಾವಿಗಳಿಗೆ ಮಣೆ ಹಾಕುವುದು, ಬೂತ್ ಮಟ್ಟದಲ್ಲಿ ಶೇ.50ರಷ್ಟು ಮತ ಪಡೆಯಲು ಪ್ರಯತ್ನ ಮಾಡುವುದು, ಪ್ರಭಾವಿಗಳನ್ನು ವಿಶ್ವಾಸಕ್ಕೆ ಪಡೆದು ಸಂದೇಶ ಕಳಿಸುವುದು, ಹತ್ತಾರು ಪ್ರಯತ್ನದ ಸಂಬಂಧ ಮಾಸ್ಟರ್ ಪ್ಲಾನ್ ಸಿದ್ಧಮಾಡಲೂ ಅಮಿತ್ ಷಾ ಸೂಚನೆ ನೀಡಿದ್ದಾರೆಂದು ಗೊತ್ತಾಗಿದೆ.
ಸಹಜ ಇಳುವರಿ, ರಸಗೊಬ್ಬರ ಬಳುವಳಿ!
ಮೂರು ವಿಧದಲ್ಲಿ ಗೆಲುವಿನ ಫಸಲು ಪಡೆಯುವುದು ದೆಹಲಿ ನಾಯಕರ ಯೋಚನೆ. ಸಹಜ ಇಳುವರಿ (ರಾಜ್ಯ ನಾಯಕತ್ವ, ವೈಯಕ್ತಿಕ ವರ್ಚಸ್ಸು), ‘ರಸಗೊಬ್ಬರ’ದ ಬಳುವಳಿ (ಕಾಂಗ್ರೆಸ್/ಜೆಡಿಎಸ್ ವಿರೋಧದ ಲಾಭ) ಮತ್ತು ‘ಉನ್ನತ ತಂತ್ರಜ್ಞಾನ’ದ ಬೆಂಬಲದ (ವರಿಷ್ಠರ ಮಧ್ಯ ಪ್ರವೇಶ) ಮೂಲಕ ಚುನಾವಣೆ ಗೆಲ್ಲುವ ತಂತ್ರವಾಗಿದೆ. ಈ ಸೂತ್ರದ ಪ್ರಕಾರ ಮೊದಲ ವಿಧಾನದಲ್ಲಿ 65 ಸ್ಥಾನಗಳನ್ನು ಗೆಲ್ಲಲು ಕ್ಷೇತ್ರ ಗುರುತಿಸುವುದು, ಎರಡನೇ ಹಾದಿಯಲ್ಲಿ 40 ಸ್ಥಾನಗಳಿಗೆ ಗುರಿ ನಿಗದಿ ಮಾಡಿಕೊಳ್ಳುವುದು ಹಾಗೂ ಮೂರನೇ ವಿಧಾನದಲ್ಲಿ 20-25 ಸ್ಥಾನಗಳ ಲಾಭ ಮಾಡಿಕೊಳ್ಳುವ ನೀಲಿನಕ್ಷೆ ಸಿದ್ಧಪಡಿಸಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + sixteen =
Remember me
