ಸಿದ್ಧ ಉಡುಪು, ನೇಕಾರರ ಸಾಲಮನ್ನಾ, ಸೂಕ್ತ ಮಾರುಕಟ್ಟೆ ಹೀಗೆ ಹಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಜವಳಿಗೆ ಸಂಬಂಧಿಸಿದಂತೆ ಈ ಬಾರಿ ಬಜೆಟ್ ಮಂಡಿಸಲಾಗಿದೆ. ಗಾರ್ವೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ‘ವನಿತಾ ಸಂಗಾತಿ’ ಎಂಬ ಯೋಜನೆಯಡಿ ಮಾಸಿಕ ಬಸ್ ಪಾಸ್ ಕಲ್ಪಿಸಿರುವುದು ವಿಶೇಷ. ಈ ಯೋಜನೆಗಾಗಿ 2020-21ನೇ ಸಾಲಿನಲ್ಲಿ 25 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಪ್ರಮುಖ ಘೋಷಣೆಗಳು:ರಾಜ್ಯದಲ್ಲಿ ವಿದ್ಯುತ್ ಮಗ್ಗ ಹೆಚ್ಚಿರುವ ಇರುವ ಎರಡು ಕೇಂದ್ರಗಳಲ್ಲಿ ನೂಲಿನ ಘಟಕ ಸ್ಥಾಪಿಸಲು ಕೇಂದ್ರ ಸರ್ಕಾರದ ‘ಪವರ್​ಟೆಕ್ಸ್ ಇಂಡಿಯಾದ ನೂಲು ನಿಧಿ ಯೋಜನೆ’ ಜತೆಗೆ ರಾಜ್ಯ ಸರ್ಕಾರದಿಂದ ಗರಿಷ್ಠ 50 ಲಕ್ಷ ರೂ. ಸಹಾಯನಿಧಿ.
ಹೊಸ ಜವಳಿ ಮತ್ತು ಸಿದ್ಧ ಉಡುಪು ನೀತಿ 2019-2024ರಡಿಯಲ್ಲಿ ಪ್ರೋತ್ಸಾಹಕ ಕ್ರಮ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಿದ್ಧ ಉಡುಪು ವಲಯದ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿರುವುದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಈ ವ್ಯಾಪ್ತಿಗೆ ಸೇರ್ಪಡೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನೂತನ ಜವಳಿ ಪಾರ್ಕ್ ಪ್ರಾರಂಭ. ಇದರಿಂದ 3000 ಉದ್ಯೋಗ ಸೃಷ್ಟಿ ಭರವಸೆ.
ಕೈಮಗ್ಗ ನೇಕಾರಿಕೆ ಕರಕುಶಲತೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ರಾಜ್ಯಕ್ಕೆ ಸೀಮಿತವಾದ ಜಿ.ಐ. ಟ್ಯಾಗ್ ಹೊಂದಿರುವ ಕೈಮಗ್ಗ ಬಟ್ಟೆ ಉತ್ಪನ್ನಗಳಿಗೆೆ ರಾಜ್ಯದ ಪ್ರತಿಷ್ಠಿತ ‘ಪ್ರಿಯದರ್ಶಿನಿ’ ಬ್ರಾಂಡ್ ಮೂಲಕ ಸೂಕ್ತ ಮಾರುಕಟ್ಟೆಯ ಭರವಸೆ.
ನೇಕಾರರ ಸಾಲ ಮನ್ನಾ ಯೋಜನೆಯನ್ನು 2020-21ರಲ್ಲಿ ಪೂರ್ಣಗೊಳಿಸಲು 79.57 ಕೋಟಿ ರೂ. ಅನುದಾನ.
ಪ್ರವಾಹ ಸಮಯದಲ್ಲಿ ಹಾನಿಗೊಳಗಾದ ನೇಕಾರರ ಉಪಕರಣಗಳಿಗೆ ಪರಿಹಾರವಾಗಿ 25 ಸಾವಿರ ರೂ. ನೀಡಿಕೆ.
ಸರ್ಕಾರದ ವಿವಿಧ ಯೋಜನೆ ಅಥವಾ ಸೇವೆಗಳಿಗಾಗಿ ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಇ-ಆಡಳಿತ ಕಡೆ ಗಮನ ಹರಿಸಿದೆ. ಸೇವೆಗಳನ್ನು ಆನ್​ಲೈನ್ ಮೂಲಕ ಒದಗಿಸುವುದರಿಂದ ಸಕಾಲದಲ್ಲಿ ಸೇವೆ ಪಡೆಯಬಹುದಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ದೂರು ಸ್ವೀಕಾರ, ಕುಂದುಕೊರತೆ ನಿವಾರಿಸಲು ಸಹಕಾರಿಯಾಗು ವುದರಿಂದ ನಾಗರಿಕಸ್ನೇಹಿ ಸೇವೆ ಒದಗಿಸಲು ಸರ್ಕಾರ ಮುಂದಾಗಿದೆ.
ಗ್ರಾಮಗಳಿಗೆ ಹೈಟೆಕ್ ಸ್ಪರ್ಶ
್ಝಾಲತಾಣದ ಮೂಲಕ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಲು ಮತ್ತು ಮಾಹಿತಿ ಪಡೆಯಲು ಸಾಧ್ಯವಾಗುವ ನಿಟ್ಟಿನಲ್ಲಿ ‘ಮಾಹಿತಿ ಕಣಜ’ ತಂತ್ರಾಂಶ ಅಭಿವೃದ್ಧಿ ಪಡಿಸಿ ಏಕರೂಪ ತಂತ್ರಾಂಶಗಳನ್ನು ಎಲ್ಲ ಇಲಾಖೆ/ಸಂಸ್ಥೆಗಳಿಗೆ ವಿಸ್ತರಿಸಲಾಗಿದೆ. ಸರ್ಕಾರದ ಕಾರ್ಯಕ್ರಮಗಳನ್ನು ನವಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಲುಪಿಸಲು ಡಿಜಿಟಲ್ ಮಾಧ್ಯಮ ಜಾಹೀರಾತು ನೀತಿ ರೂಪಿಸಲಾಗುವುದು. ಹಿರಿಯ ಪತ್ರಕರ್ತ, ಸಾಹಿತಿ ಡಾ.ಡಿ.ವಿ.ಗುಂಡಪ್ಪ ಅವರ ಹೆಸರಿನಲ್ಲಿ ನಿಧಿ ಸ್ಥಾಪನೆ. ಕರ್ನಾಟಕ ಬೆಳವಣಿಗೆಗೆ ಪ್ರಮುಖವಾಗಿ ವಿವಿಧ ವಲಯಗಳಲ್ಲಿರುವ ತಾಂತ್ರಿಕ ಸವಾಲುಗಳನ್ನು ಎದುರಿಸಲು ಎಸ್​ಟಿಪಿಐ ಸಂಸ್ಥೆ ಸಹಭಾಗಿತ್ವದಲ್ಲಿ ಉ್ಛ್ಚಛ್ಞಿ್ಚ ಅಜಞಛ್ಞಿಠಿಚಠಿಜಿಟ್ಞ ಕುರಿತು ಉತ್ಕೃ್ಟತಾ ಕೇಂದ ಸ್ಥಾಪನೆಗೆ 30 ಕೋಟಿ ರೂ. ಮೀಸಲು. ತಂತ್ರಜ್ಞಾನ ಆಧಾರಿತ ಆಡಳಿತದ ಪ್ರಾತ್ಯಕ್ಷಿಕೆ, ದತ್ತಾಂಶಗಳ ಬಳಕೆ ಆಧಾರಿತ ನೀತಿ, ನಿರೂಪಣೆ ಮತ್ತು ದತ್ತಾಂಶಗಳ ಮುಕ್ತ ಉಪಯೋಗಕ್ಕೆ ಪೂರಕವಾಗಿ ‘ಕರ್ನಾಟಕ ನಗರ ವೀಕ್ಷಣಾಲಯ’ದ ಸ್ಥಾಪನೆಗೆ ಯೋಜನಾ ವರದಿ ಸಿದ್ಧ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ /ಆರೋಗ್ಯ ಕ್ಷೇಮ ಕೇಂದ್ರಗಳಲ್ಲಿ ಟೆಲಿಮೆಡಿಸನ್ ಸೇವೆ ಒದಗಿಸಲು 19 ಕೋಟಿ ರೂ. ಮೀಸಲು. ರಾಜ್ಯದ ಎಲ್ಲ ನಾವಿನ್ಯತಾ ಚಟವಟಿಕೆಗಳನ್ನು ಕ್ರೋಢೀಕರಿಸಿ ಸಂಯೋಜಿಸಲು ‘ಇನ್ನೋವೇಷನ್ ಹಬ್’ ಅನ್ನು 4 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ.
ಸಣ್ಣ ಕೈಗಾರಿಕೆಗೆ ಪ್ರೋತ್ಸಾಹ
ಜವಳಿ ಮತ್ತು ಕೈಮಗ್ಗ ಕ್ಷೇತ್ರಕ್ಕೆ ವೆಚ್ಚವನ್ನು ಕಳೆದ ಬಜೆಟ್​ನ 100 ಕೋಟಿ ರೂ.ಗಳಿಂದ 200 ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿದೆ. ಸಣ್ಣ ಕೈಗಾರಿಕೆಗಳಿಗೆ 251 ಕೋಟಿ ರೂ.ನಿಂದ 271 ಕೋಟಿ ರೂ., ಕೈಮಗ್ಗ ಉದ್ಯಮಗಳಿಗೆ 146 ಕೋಟಿ ರೂ.ನಿಂದ 172 ಕೋಟಿ ರೂ., ಕರಕುಶಲ ಉದ್ಯಮಕ್ಕೆ 50 ಲಕ್ಷ ರೂ.ನಿಂದ 2 ಕೋಟಿ ರೂ., ನಾರಿನ ಉದ್ಯಮಗಳಿಗೆ 15 ಕೋಟಿ ರೂ.ನಿಂದ 25 ಕೋಟಿ ರೂ. ಸೇರಿ ಒಟ್ಟಾರೆ ಗ್ರಾಮೀಣ ಮತ್ತು ಸಣ್ಣ ಉದ್ಯಮಗಳಿಗೆ ಕಳೆದ ವರ್ಷ ನೀಡಿದ್ದ 475 ಕೋಟಿ ರೂ. ವೆಚ್ಚವನ್ನು 534 ಕೋಟಿ ರೂ.ಗೆ ಹೆಚ್ಚಳ ಮಾಡಲು ಪ್ರಸ್ತಾಪಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
