|ಮಂಜು ಎಂ. ಹೊಸಳ್ಳಿಅಜ್ಜಂಪುರ
ಕನ್ನಡ ನಾಡಿನ ಅಸ್ಮಿತೆಯೂ ಆಗಿರುವ ಅಮೃತ್ ಮಹಲ್ ಅಸ್ತಿತ್ವಕ್ಕೆ ಈಗ ಧಕ್ಕೆ ಎದುರಾಗಿದ್ದು, ಸರ್ಕಾರ ಅಮೃತ್ ಸಿರಿ ಯೋಜನೆ ಹೆಸರಿನಲ್ಲಿ ಅಮೃತ್ ಮಹಲ್ ತಳಿ ರಾಸುಗಳ ವಿನಾಶಕ್ಕೆ ಮುನ್ನುಡಿ ಬರೆಯಲು ಮುಂದಾಗಿದೆ. ಗೋ ಸಂರಕ್ಷಣೆ ಬಗ್ಗೆ ಮಾತನಾಡುವ ಸರ್ಕಾರ ವಿಶೇಷವಾದ ಅಮೃತ್ ಮಹಲ್ ತಳಿ ನಾಶಕ್ಕೆ ಸಿದ್ಧವಾಗಿದೆ.
ಅಮೃತ್ ಸಿರಿ ಯೋಜನೆ ಹೆಸರಿನಲ್ಲಿ ಪಶು ಇಲಾಖೆ ಅಧಿಕಾರಿಗಳ ಆದೇಶದಂತೆ ಅಜ್ಜಂಪುರ ಅಮೃತ್ ಮಹಲ್ ಕಾವಲ್​ನ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ರಾಸುಗಳ ಮಾರಾಟ ಆರಂಭಿಸಿದ್ದಾರೆ. ಕಾವಲ್​ನಲ್ಲಿರುವ 248 ರಾಸುಗಳಲ್ಲಿ 148 ಅನ್ನು ಮಾರಾಟ ಮಾಡಲು ಸರ್ಕಾರ ಮುಂದಾಗಿದೆ. ಉಳಿದ 100 ರಾಸುಗಳ ಮೇಲ್ವಿಚಾರಣೆ ನೋಡಿಕೊಳ್ಳಲು 13 ಜನ ಹೊರಗುತ್ತಿಗೆ ನೌಕರರಿದ್ದಾರೆ. ಕಳೆದ 4-5 ವರ್ಷಗಳಿಂದ ಇದನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಕಾವಲ್​ನಲ್ಲಿ ರಾಸುಗಳ ಸಂಖ್ಯೆ ಕಡಿಮೆಯಾದರೆ ಅವರ ಜೀವನವೂ ಅತಂತ್ರವಾಗಲಿದೆ. ವಿಶ್ವ ಪ್ರಸಿದ್ಧ ತಳಿ ಉಳಿಸಿಕೊಳ್ಳಲಾಗದ ಸರ್ಕಾರ, ಗೋ ಶಾಲೆ ಆರಂಭಿಸುವುದಾಗಿ ಹೇಳುತ್ತಿದೆ.
ಜಾಗ ಕಬಳಿಕೆಗೆ ಹುನ್ನಾರ:ಮೈಸೂರು ಮಹಾರಾಜರ ಕಾಲದಿಂದಲೂ ಅಮೃತ್ ಮಹಲ್ ಹಸುಗಳ ಸಂರಕ್ಷಣೆಗೆ ರಾಜ್ಯದಲ್ಲಿ ಮೀಸಲಿಟ್ಟಿರುವ ಸಾವಿರಾರು ಎಕರೆ ಜಾಗವನ್ನು ಕಬಳಿಸುವ ಹುನ್ನಾರದ ಸಂಶಯ ವ್ಯಕ್ತವಾಗಿದೆ. ಅಮೃತ ಯೋಜನೆಯಡಿ ಇಲ್ಲಿನ ರಾಸುಗಳನ್ನು ರೈತರಿಗೆ ನೀಡಿ ಅವುಗಳ ಸಂಖ್ಯೆ ಕಡಿಮೆಯಾದ ನಂತರ ಮುಂದಿನ ದಿನಗಳಲ್ಲಿ ಮುಚ್ಚುವ ಆತಂಕ ಎದುರಾಗಿದೆ. ಸರ್ಕಾರದ ಆದೇಶದಂತೆ ಅಮೃತ್​ವುಹಲ್ ಕೇಂದ್ರಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ರಾಸುಗಳನ್ನು ಹೊಂದಿರಬೇಕು. ಅಜ್ಜಂಪುರ ಕೇಂದ್ರ ಕಾವಲು ವ್ಯಾಪ್ತಿ 669 ಎಕರೆಗೆ 180 ರಿಂದ 200 ರಾಸುಗಳು ಇರಬೇಕು. ಅದರೆ, ಅಜ್ಜಂಪುರ ಕೇಂದ್ರದಲ್ಲಿ ಈಗಾಗಲೆ 148 ರಾಸುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಉಳಿಯುವುದು 100 ಮಾತ್ರ.
ರೈತರು ಸಂರಕ್ಷಣೆ ಮಾಡುವುದು ಕಷ್ಟ:ಅಮೃತ್ ಸಿರಿ ಯೋಜನೆ ಜಾರಿಗೊಳಿಸಿರುವ ಸರ್ಕಾರ ಈ ಮೂಲಕ ರೈತರಿಗೆ ಕಡಿಮೆ ದರದಲ್ಲಿ ರಾಸುಗಳನ್ನು ನೀಡಲು ಮುಂದಾಗಿದೆ. ಇದೊಂದು ಅವೈಜ್ಞಾನಿಕ ಯೋಜನೆಯಾಗಿದ್ದು, ಅಮೃತ್ ಮಹಲ್ ತಳಿ ರಾಸುಗಳು ಇತರ ಹಸುಗಳಂತೆ ಕಟ್ಟಿಹಾಕಿ ಮೇಯಿಸುವಂತಿಲ್ಲ. ಈ ತಳಿಯ ರಾಸುಗಳು ಬೇರೆ ಹಸುಗಳೊಂದಿಗೆ ಬೆರೆಯುವುದೂ ಇಲ್ಲ. ಒಂಟಿಯಾಗಿ ಬದುಕುವುದಿಲ್ಲ. ರೈತರು ಇವುಗಳನ್ನು ಸಾಕಲು ಸಾಧ್ಯವಿಲ್ಲ. ಈ ಕೇಂದ್ರದ ಉಳಿವಿಗೆ ಜಿಲ್ಲಾಧಿಕಾರಿ, ಶಾಸಕರು, ಸಚಿವರು ಹಲವು ಬಾರಿ ಭೇಟಿ ನೀಡಿದರೂ ಕಾವಲ್​ವಾತ್ರ ಈವರೆಗೂ ಅಭಿವೃದ್ಧಿಯಾಗಿಲ್ಲ.
ಪಶು ಇಲಾಖೆ ಮೇಲಧಿಕಾರಿಗಳ ಅದೇಶದಂತೆ ಕಾವಲ್​ನಲ್ಲಿರುವ 248 ರಾಸುಗಳಲ್ಲಿ 148 ಅನ್ನು ಅಮೃತ್ ಸಿರಿ ಯೋಜನೆಯಡಿ ರೈತರಿಗೆ ಮಾರಾಟ ಮಾಡಿ ಉಳಿದ 100 ರಾಸುಗಳನ್ನು ಕಾವಲ್​ನಲ್ಲಿ ಉಳಿಸಲಾಗುವುದು. ರೈತರಿಗೆ ರಾಸುಗಳನ್ನು ನೀಡಲಾಗುತ್ತಿದೆ.
|ಡಾ. ಸಿದ್ದಲಿಂಗಪ್ಪಅಮೃತ್ ಮಹಲ್ ಕೇಂದ್ರ ಉಪ ನಿರ್ದೇಶಕ
ರಾಜ್ಯದಲ್ಲಿ 59 ಕಾವಲ್​ಗಳು:ಚಿಕ್ಕಮಗಳೂರಿನಲ್ಲಿ 13, ಚಿತ್ರದುರ್ಗ 21, ದಾವಣಗೆರೆ 2, ಹಾಸನ 15, ತುಮಕೂರು 6, ಮಂಡ್ಯದಲ್ಲಿ 2 ಸೇರಿ ರಾಜ್ಯದಲ್ಲಿ 59 ಕಾವಲ್ ಗಳಿವೆ. ಇದರಲ್ಲಿ ಅಜ್ಜಂಪುರ ಅಮೃತ್ ಮಹಲ್ ವ್ಯಾಪ್ತಿಗೆ 13 ಉಪಕೇಂದ್ರಗಳು ಬರಲಿವೆ. ಚಿಕ್ಕಮಗಳೂರು ಜಿಲ್ಲೆಯ ಲಿಂಗದಹಳ್ಳಿ, ಬಾಸೂರು, ಅಜ್ಜಂಪುರ, ಹಾಸನ ಜಿಲ್ಲೆಯ ಹಬ್ಬನಘಟ್ಟ, ರಾಯಸಂದ್ರ, ಚಿತ್ರದುರ್ಗ ಜಿಲ್ಲೆಯ ರಾಮಗಿರಿ, ಚಿಕ್ಕ ಎಮ್ಮಿಗನೂರಿನಲ್ಲಿ ರಾಸು ಪಾಲನೆ ಮಾಡಲಾಗುತ್ತದೆ. ಬೀರೂರಿನ ಉಪ ಕೇಂದ್ರದಲ್ಲಿ ಬರಿ ಹೋರಿ ಕರುಗಳನ್ನು ಬೆಳೆಸಲಾಗುತ್ತದೆ.
ರಾಸುಗಳ ಸಾವು:ಅಮೃತ್ ಸಿರಿ ಯೋಜನೆಯಡಿ ಕೆಲ ರೈತರು ರಾಸುಗಳನ್ನು 3 ಸಾವಿರ ರೂ. ಹಾಗೂ ಕರುಗಳನ್ನು 1500 ರೂ.ಗೆ ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಿಕೊಳ್ಳುತ್ತಿದ್ದಾರೆ. ಮೂರು ಸಾವಿರಕ್ಕೆ ಪಡೆದ ರಾಸುಗಳನ್ನು 15 ರಿಂದ 20 ಸಾವಿರ ರೂ. ವರೆಗೂ ಮಾರಾಟ ಮಾಡಲಾಗುತ್ತಿದೆ. ಇವುಗಳು ಬೇರೆ ಹಸುಗಳ ಜತೆ ಹೊಂದಿಕೊಳ್ಳದಿರುವುದರಿಂದ ಕಳೆದ ತಿಂಗಳ ಹಿಂದೆ ಕಾಟಿಗನೆರೆ ಗ್ರಾಮದಲ್ಲಿ ಒಂದು, ಗೌರಾಪುರ ಗ್ರಾಮದಲ್ಲಿ ಎರಡು ಹಸು ಹಾಗೂ ಕಳೆದ ಮೂರು ದಿನಗಳ ಹಿಂದೆ ಹಡಗಲು ಗ್ರಾಮಕ್ಕೆ ತಂದ ರಾಸುಗಳು ಮರು ದಿನವೇ ಮೃತಪಟ್ಟಿವೆ. ಕೂಡಲೇ ಈ ಯೋಜನೆ ಸ್ಥಗಿತಗೊಳಿಸಿ ರಾಸುಗಳನ್ನು ಸಂರಕ್ಷಿಸಬೇಕು ಎಂದು ರೈತ ಶಿವಪ್ಪ ಆಗ್ರಹಿಸಿದ್ದಾರೆ.
ಈ ಐ ಡ್ರಾಪ್ಸ್​ ಬಳಸಿದರೆ ದೃಷ್ಟಿ ಕಳೆದುಕೊಳ್ಳಬಹುದು, ಪ್ರಾಣವೂ ಹೋಗಬಹುದು!

ಸಿಟ್ಟು ಸಿಕ್ಕಾಪಟ್ಟೆ ಹೆಚ್ಚಾಗಲೆಂದು 2 ತಿಂಗಳು ಔಷಧ ಬಿಟ್ಟಿದ್ದ; ಸಚಿವರನ್ನು ಕೊಂದ ಎಎಸ್​ಐ ಬಾಯ್ಬಿಟ್ಟ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
