ಬೆಂಗಳೂರು:ದೇಶದ್ರೋಹ ಘೋಷಣೆ ಕೂಗಿ ಜೈಲು ಪಾಲಾಗಿರುವ ಅಮೂಲ್ಯಾಳ ಪೊಲೀಸ್​ ಕಸ್ಟಡಿ ಇಂದು ಅಂತ್ಯವಾಗುತ್ತಿರುವ ಹಿನ್ನಲೆಯಲ್ಲಿ ಎಸ್​ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆಕೆಯ ಸ್ವ ಇಚ್ಛಾ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ.
ಆದರೆ ವಿಚಾರಣೆ ವೇಳೆ ಅಮೂಲ್ಯಾ ತೀವ್ರ ಉದ್ಧಟತನ ಮೆರೆದಿದ್ದಾಳೆ. ವಿಚಾರಣೆಯುದ್ದಕ್ಕೂ ಹಿಂದುತ್ವ ಮತ್ತು ಆರ್​ಎಸ್​ಎಸ್​, ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾಳೆ. ನೀವು ಪಾಕಿಸ್ತಾನ್​ ಜಿಂದಾಬಾದ್​ ಅನ್ನೋದನ್ನ ಮಾತ್ರ ಹೈಲೈಟ್ ಮಾಡಿದ್ದೀರಿ. ನಾನು ಮುಂದೆ ಹೇಳೋದನ್ನೂ ಕೇಳಬೇಕಿತ್ತು ಎಂದು ಪೊಲೀಸರಿಗೇ ತಿರುಗಿ ಮಾತನಾಡಿದ್ದಾಳೆ.ಮುಂದೆ ಏನು ಹೇಳಬೇಕೆಂದುಕೊಂಡಿದ್ದೆ ಈಗ ಹೇಳು ಎಂದು ಪೊಲೀಸರು ಕೇಳಿದರೆ, ಈಗ್ಯಾಕೆ ನಾನು ಹೇಳಲಿ, ಕೋರ್ಟ್​ನಲ್ಲಿಯೇ ಮಾತನಾಡುತ್ತೇನೆ ಎಂದಿದ್ದಾಳೆ ಎನ್ನಲಾಗಿದೆ.
ತನ್ನ ಸಿದ್ಧಾಂತಗಳ ಬಗ್ಗೆಯೇ ಮಾತನಾಡಿದ ಅಮೂಲ್ಯಾ, ನೋಡಿ ಸರ್​, ನೀವು ನನಗೆ ಇಷ್ಟು ದೊಡ್ಡ ಸೆಕ್ಯೂರಿಟಿ ಕೊಡುತ್ತಿದ್ದೀರಿ. ನೀವೇ ನನ್ನ ಸೆಲೆಬ್ರಿಟಿ ಮಾಡಿದ್ದಿರಿ ಎಂದು ಪೊಲೀಸರನ್ನೇ ಅಪಹಾಸ್ಯ ಮಾಡಿದ್ದಾಳೆ. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 13 =
Remember me
