ಬಳ್ಳಾರಿ:ಪಾಕಿಸ್ತಾನ್ ಜಿಂದಾಬಾದ್ ಹೇಳಿಕೆ ಹೆಚ್ಚಾಗುತ್ತಿರೋದಕ್ಕೆ ಕಾಂಗ್ರೆಸ್ ಕಾರಣ. ಇಂತಹ ಘಟನೆಗಳಿಗೆ ಕಾಂಗ್ರೆಸ್ ಕುಮ್ಮಕ್ಕೇ ಕಾರಣನಾ? ಸದನದಲ್ಲಿ ಇಂತವರ ಪರ ವಕಾಲತ್ತು ವಹಿಸುವ ಕಾಂಗ್ರೆಸ್ ಹಾಗೂ ಇತರ ಪಕ್ಷಗಳೇ ಇದಕ್ಕೆ ಹೊಣೆನಾ?
– ಹೀಗೆಂದು ಆರೋಗ್ಯ ಸಚಿವ ಶ್ರೀರಾಮುಲು ಪ್ರಶ್ನಿಸಿದ್ದಾರೆ.
ಬಳ್ಳಾರಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಬೀದರ್, ಹುಬ್ಬಳ್ಳಿಯಲ್ಲಿ ಪಾಕಿಸ್ತಾನಕ್ಕೆ ಜಯವಾಗಲಿ ಎಂದರು. ನಿನ್ನೆ ಓವೈಸಿ ಸಮ್ಮುಖದಲ್ಲಿ ಒಬ್ಬ ಹುಡುಗಿ, ಇವತ್ತು ವಿದ್ಯಾ ಎನ್ನುವ ಒಬ್ಳಳು ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದಿದ್ದಾಳೆ. ನಾವು ಯಾವುದೇ ಜಾತಿ ಧರ್ಮಕ್ಕೆ ಸೇರಿದ್ರೂ ಪಾಕಿಸ್ತಾನಕ್ಕೆ ಪರ ಘೋಷಣೆ ಕೂಗಬಾರದು ಎಂದರು.
ವಿರೋಧ ಪಕ್ಷಗಳು ಇಂತವರಿಗೆ ಕುಮ್ಮಕ್ಕು ಕೊಡುತ್ತಿವೆ. ಇವರು ಹೀಗೆ ಹೇಳಿಕೆ ಕೊಡುತ್ತಿದ್ದರೆ. ನಾವು ಹಿಂದುಗಳು ಕೈ ಕಟ್ಟಿ ಕುಳಿತುಕೊಳ್ಳಲ್ಲ. ಕಾಂಗ್ರೆಸ್​ನವರು ವೋಟ್ ಬ್ಯಾಂಕ್ ರಾಜಕಾರಣ ಮಾಡ್ತಾರೆ. ಹಿಂದು ಮುಸ್ಲಿಂ ಒಡೆಯುವ ಕೆಲಸ ಮಾಡ್ತಿರೋದು ಕಾಂಗ್ರೆಸ್. ಈ ದೇಶದಲ್ಲಿ ಇದ್ದವರು ಭಾರತಕ್ಕೆ ಜಯವಾಗಲಿ ಎನ್ನಬೇಕು ಎಂದರು.
ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಸದನದಲ್ಲಿ ಇಂತವರಿಗೆ ಸಹಕಾರ ಕೊಡ್ತೀರಾ? ನಾವು ಎಸ್​ಡಿಪಿಐ ಹಾಗೂ ಪಿಎಫ್​ಐ ಸಂಘಟನೆ ರದ್ದು ಮಾಡಲು ಹೋರಾಟ ಮಾಡ್ತಿದ್ದೇವೆ‌. ಇವರಿಂದಲೇ ಶಾಸಕರಾದ ಹ್ಯಾರೀಸ್, ತನ್ವೀರ್ ಸೇಠ್ ಹತ್ಯೆಗೆ ಯತ್ನ ಆಯ್ತು. ಇಷ್ಟಾದ್ರು ನೀವು ಅವರಿಗೆ ಬೆಂಬಲ ಕೊಡ್ತೀರಾ ಎಂದು ಕಾಂಗ್ರೆಸ್​ನ್ನು ಪ್ರಶ್ನಿಸಿದರು.
ನಾವು ಭಾರತೀಯರು ಒಂದೇ ತಾಯಿ ಮಕ್ಕಳಿದ್ದಂತೆ. ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಓವೈಸಿಯನ್ನು ದೊಡ್ಡ ಮನುಷ್ಯ ಅಂದುಕೊಂಡಿದ್ದಾರೆ. ನಿಮಗೆ ಪಾಕ್ ಬಗ್ಗೆ ಅಷ್ಟೊಂದು ಅಭಿಮಾನ ಇದ್ತೆ ಅಲ್ಲಿಗೆ ಹೋಗಿ. ಅಲ್ಲಿ ನಿಮ್ಮನ್ನ ಯಾರು ಕ್ಯಾರೇ ಅನ್ನಲ್ಲ. ನಮ್ಮ ಸರ್ಕಾರ ಇದನ್ನು ಮುಂದುವರಿಯಲು ಬಿಡಲ್ಲ ಎಂದು ಕಿಡಿ ಕಾರಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + twelve =
Remember me
