ಬೆಂಗಳೂರು:ಹೆದ್ದಾರಿ ಟೋಲ್​​​ನಲ್ಲಿ 10 ರೂಪಾಯಿ ಹೆಚ್ಚುವರಿ ಕಡಿತಗೊಂಡಿದ್ದಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದ ಗ್ರಾಹಕನಿಗೆ 8 ಸಾವಿರ ರೂ ಪರಿಹಾರ ಪಾವತಿಸಲು ಜಾಸ್ ಟೋಲ್ ಸಂಸ್ಥೆಗೆ ಗ್ರಾಹಕರ ನ್ಯಾಯಾಲಯ ಆದೇಶ ನೀಡಿದೆ.
ಟೋಲ್ ನಲ್ಲಿ 10 ರೂ. ಹೆಚ್ಚುವರಿ ಕಡಿತಗೊಂಡಿದ್ದಕ್ಕೆ ಗ್ರಾಹಕನಿಗೆ 8 ಸಾವಿರ ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತೆ ಜಾಸ್ ಟೋಲ್ ಸಂಸ್ಥೆಗೆ ಗ್ರಾಹಕರ ನ್ಯಾಯಾಲಯ ಆದೇಶ ಹೊರಡಿಸಿದೆ.
ನಡೆದಿದ್ದೇನು?:ಬೆಂಗಳೂರಿನ ಗಾಂಧಿನಗರದ ನಿವಾಸಿಯಾಗಿರುವ ಎಂ.ಬಿ.ಸಂತೋಷ್ 2020ರಲ್ಲಿ ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಹೆದ್ದಾರಿ ಟೋಲ್ ಪ್ಲಾಜಾದಲ್ಲಿ ಹೆಚ್ಚುವರಿಯಾಗಿ 10 ರೂ. ಕಡಿತಗೊಂಡಿತ್ತು. ಕಾರಿನಲ್ಲಿ ಅಳವಡಿಸಿದ್ದ ಫಾಸ್ಟ್ ಟ್ಯಾಗ್ ಮೂಲಕ ಸಂತೋಷ್ ಅವರ ಬ್ಯಾಂಕ್ ಖಾತೆಯಿಂದ 10 ರೂ. ಹೆಚ್ಚುವರಿ ಕಡಿತಗೊಂಡಿತ್ತು. ಈ ವಿಚಾರವಾಗಿ ಬೇಸರಗೊಂಡಿದ್ದ ಸಂತೋಷ್​​ ಅವರು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಇದನ್ನೂ ಓದಿ:Food Poisoning | ಜಾತ್ರೆಯಲ್ಲಿ ಊಟ ಮಾಡಿ 80 ಮಂದಿ ಅಸ್ವಸ್ಥ!
ಈ ಕುರಿತು ಸಂತೋಷ್ ಅವರು 25 ಸಾವಿರ ಪರಿಹಾರ ನೀಡುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ವಿರುದ್ಧ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.
ಗ್ರಾಹಕ ನ್ಯಾಯಾಲಯ ಹೇಳಿದ್ದೇನು?:ಹೆದ್ದಾರಿ ಟೋಲ್ ನಲ್ಲಿ ವಾಹನ ಸವಾರನಿಗೆ 10 ರೂ ಹೆಚ್ಚುವರಿ ಕಡಿತಗೊಂಡಿದೆ. ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಒಟ್ಟು 8 ಸಾವಿರ ರೂ. ಪರಿಹಾರ ನೀಡಬೇಕೆಂದು ಆದೇಶಿಸಿ ತೀರ್ಪು ಪ್ರಕಟಿಸಿದೆ. ಈ ಹಣವನ್ನು ಕೊಡಲು ತಡಮಾಡಿದ್ದಲ್ಲಿ ವರ್ಷಕ್ಕೆ 10% ಬಡ್ಡಿಯೊಂದಿಗೆ ಪರಿಹಾರವನ್ನು ನೀಡಬೇಕಾಗುತ್ತದೆ ಎಂದು ನ್ಯಾಯಾಲಯವು ಹೇಳಿದೆ.
ಹಿಂದೂ ದೇಗುಲದ ಮರವನ್ನು ತಬ್ಬಿ ನಗ್ನ ಫೋಟೊಶೂಟ್; ಮಹಿಳೆ ಗಡಿಪಾರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 17 =
Remember me
