ಬೆಂಗಳೂರು:ಕೀಟಗಳನ್ನು ನೀವು ಗಮನಿಸಲು ಸಾಧ್ಯವಾಗದೆ ಇರಬಹುದು ಅಷ್ಟು ಸಣ್ಣ ಜೀವಿಗಳು, ಪರಿಸರ ವ್ಯವಸ್ಥೆಗೆ ಈ ಸೂಕ್ಷ್ಮ ಜೀವಿಗಳ ಪಾತ್ರ ಬಹುಮುಖ್ಯವಾಗಿದೆ. ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ‘ಕೀಟ ಕೆಫೆ’ಯೊಂದು ಆರಂಭಗೊಂಡಿದೆ. ಬನ್ನಿ ನಾವು ಈ ಕೀಟ ಕೆಫೆಯ ವಿಶೇಷತೆ ಬಗ್ಗೆ ಇಂದು ತಿಳಿದುಕೊಳ್ಳೋಣ…
ವಿಜ್ಞಾನಿಗಳು 900,000 ಕ್ಕೂ ಹೆಚ್ಚು ರೀತಿಯ ಕೀಟಗಳನ್ನು ಗುರುತಿಸಿದ್ದಾರೆ. 30 ಮಿಲಿಯನ್​​ಗೂ ವಿಭಿನ್ನ ಕೀಟಗಳ ಜಾತಿಗಳನ್ನು ಅಂದಾಜು ಮಾಡಲಾಗಿದೆ. ಇರುವೆಗಳು, ಗೆದ್ದಲುಗಳು, ಚಿಟ್ಟೆಗಳು, ಪತಂಗಗಳು, ನೋಣಗಳು, ಜೇನುನೊಣಗಳು, ಜೀರುಂಡೆಗಳು ಹೀಗೆ ಹಲವಾರು ಕೀಟಗಳು ಆಹಾರ ಸರಪಳಿಯ ಸೂಕ್ಷ್ಮ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಈ ಸಣ್ಣ ಸೂಕ್ಷ್ಮ ಕೀಟಗಳನ್ನು ಸಂರಕ್ಷಿಸುವ ಪ್ರಯತ್ನದಲ್ಲಿ, ಪರಿಸರ ಸಂರಕ್ಷಣೆಗೆ ಬದ್ಧವಾಗಿರುವ ವಿಭಿನ್ನ ಸಂಸ್ಥೆಯು ಒಂದು ಪರಿಹಾರವನ್ನು ಪ್ರಾರಂಭಿಸಿದೆ. ಸಸ್ಯಕಾಶಿ ಲಾಲ್​ಬಾಗ್​​ನಲ್ಲಿ ಶುಕ್ರವಾರ ಲಾಲ್‍ಬಾಗ್ ಬ್ಯಾಂಡ್ ಸ್ಟ್ಯಾಂಡ್ ಬಳಿ ತೋಟಗಾರಿಕೆ ನಿರ್ದೇಶಕ ಡಿ.ಎಸ್.ರಮೇಶ್‌ ಅವರು ಕೀಟ ಕೆಫೆ ಅನಾವರಣಗೊಳಿಸಿದರು. ಕೀಟಗಳಿಗೆ ಸರ್ವ ರೀತಿಯಲ್ಲೂ ಪೂರಕವಾಗಿರಬಲ್ಲ ಹೊಸ ಪರಿಕಲ್ಪನೆಯಲ್ಲಿ ಈ ಕೀಟ ಕೆಫೆಯನ್ನು ನಿರ್ಮಿಸಲಾಗಿದೆ.
ಕೀಟ ಕೆಫೆ ವಿಶೇಷತೆ:ಮರದ ಫ್ರೇಮ್‍ಗಳಿಂದ ಸಣ್ಣ ಮನೆಯಾಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಪ್ರತಿ ವಿಭಾಗದಲ್ಲಿ ಸಣ್ಣ, ಮಧ್ಯಮ ಮರದ ತುಂಡುಗಳು, ಒಣ ಹುಲ್ಲು, ನಾನಾ ರೀತಿಯ ಸಸ್ಯಗಳ ಕಟ್ಟಿಗೆ ಇತ್ಯಾದಿಗಳನ್ನು ಒಂದಕ್ಕೊಂದು ಅಂಟಿಕೊಂಡಿರುವಂತೆ ಜೋಡಿಸಲಾಗಿದೆ. ಈ ರಚನೆಯು ಎಲ್ಲ ಬಗೆಯ ಕೀಟ, ದುಂಬಿಗಳು ನೆಲೆಸಲು ಮೂಲನೆಲೆ ಕಲ್ಪಿಸಿ, ಸಂತಾನೋತ್ಪತ್ತಿ ಹೊಂದಿ ಅವುಗಳ ವೃದ್ಧಿ ಮತ್ತು ಬೆಳವಣಿಗೆಗೆ ಕಾರಣವಾಗಲಿದೆ.
ಕೀಟ-ದುಂಬಿಗಳಿಗೆ ಸಹಾಯಕಾರಿ ಆಗುವಂತೆ ಒಣ ಮರ ಕೊರೆಯುವ ದುಂಬಿ ಪ್ರಬೇಧಗಳಿಗೆ ಬೇಕಾದ ಮರಗಳು ಹಾಗೂ ಮಣ್ಣಿನೊಳಗೆ ಕೊರಕಲು ಮಾಡಿ ಅಲ್ಲಿ ಅಡಗಿಕೊಳ್ಳುವ ಕೀಟಗಳಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಪೆಂಟರ್ ಬೀ, ಬಿಂಬಲ್ ಬೀ ಇತ್ಯಾದಿ ಪ್ರಭೇದಗಳಲ್ಲಿ ಪ್ರಮುಖವಾದವುಗಳು. ಗೂಡು ಕಟ್ಟಿ ಜೇನು ಸಂಗ್ರಹಿಸುವ ದುಂಬಿಗಳು ಕಡಿಮೆ ಸಂಖ್ಯೆಯಲ್ಲಿದ್ದು, ಒಂಟಿ-ದುಂಬಿಗಳು ಸಹಸ್ರಾರು ಸಂಖ್ಯೆಯಲ್ಲಿವೆ. ಅವು ಗೂಡು ಕಟ್ಟುವುದರ ಬದಲು ಒಂಟಿಯಾಗಿ ಒಣ ಮರ ಕೊರೆದು ರಂದ್ರ ಮಾಡಿ ಅಲ್ಲೇ ಬದುಕುತ್ತವೆ.

ಕೀಟ ಕೆಫೆ ನಿರ್ಮಾಣದ ಉದ್ದೇಶ:ಹುಲ್ಲು, ಗಿಡಗಳ ನಡುವೆ, ಎಲೆಗಳ ಮರೆಯಲ್ಲಿ, ಮರಗಳ ರಂಧ್ರ, ಪೊಟರೆಯಲ್ಲಿ ವಾಸವಾಗಿರುವ ದುಂಬಿ, ಕೀಟ ಇತ್ಯಾದಿಗಳಿಗಾಗಿ ಕೀಟ ಕೆಫೆ ಮೂಲ ಆಶ್ರಯ ತಾಣವಾಗಲಿದೆ. ನಗರೀಕರಣದ ದೆಸೆಯಿಂದ ಪ್ರಕೃತಿ ದತ್ತವಾಗಿದ್ದ ಹಸಿರು ತಾಣಗಳು, ಹುಲ್ಲುಗಾವಲು ಮರೆಯಾಗುತ್ತಿದ್ದು, ಕೀಟಗಳ ಆಸರೆ, ಸಂತಾನೋತ್ಪತ್ತಿ ಮತ್ತು ವೃದ್ಧಿಗಾಗಿ ತಮ್ಮದೇ ಆದ ಸಂರಕ್ಷಿತ ಮತ್ತು ಸುರಕ್ಷಿತ ನೆಲೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಕೀಟ ಕೆಫೆ ನಿರ್ಮಾಣ ಮಾಡಲಾಗಿದೆ.
50ಕ್ಕೂ ಹೆಚ್ಚು ಕೀಟ ಕೆಫೆ ಗುರಿ:ಮುಂದಿನ ದಿನಗಳಲ್ಲಿ ಕಬ್ಬನ್ ಉದ್ಯಾನವನ, ನಂದಿ ಗಿರಿಧಾಮ, ಕೃಷ್ಣರಾಜೇಂದ್ರ ಗಿರಿಧಾಮ, ರಾಜ್ಯವ್ಯಾಪ್ತಿಯ ಎಲ್ಲಾ ಹೊಸ ಸಸ್ಯಶಾಸ್ತ್ರೀಯ ತೋಟಗಳಲ್ಲಿಯೂ ಈ ಹೊಸ ಪರಿಕಲ್ಪನೆಯಡಿ 50ಕ್ಕೂ ಹೆಚ್ಚು ಇನ್‍ಸೆಕ್ಟ್ ಕೆಫೆಗಳನ್ನು ನಿರ್ಮಿಸಲು ಚಿಂತಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ। ಎಂ. ಜಗದೀಶ್ ತಿಳಿಸಿದರು.
ವಿಭಿನ್ನ ಇಂಡಿಯಾ ಫೌಂಡೇಷನ್  ಸಂಸ್ಥೆಯ ಸಿಇಒ ಆಗಿರುವ ಡೇವಿಡ್ ಕುಮಾರ್ ಅವರು ಸಾರ್ವಜನಿಕ ಸಹಭಾಗಿತ್ವದಡಿ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಪ್ರಾರಂಭಿಕವಾಗಿ ಒಂದು ಇನ್‍ಸೆಕ್ಟ್ ಕೆಫೆ ಲಾಲ್‍ಬಾಗ್‍ನಲ್ಲಿ ಸ್ಥಾಪಿಸಿದ್ದಾರೆ.
ಬೆಳ್ಳಂಬೆಳಗ್ಗೆ ಬೆಂಗಳೂರಿನ ಅಗರಬತ್ತಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ; 8 ಬೈಕ್​ಗಳು ಸುಟ್ಟು ಭಸ್ಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 2 =
Remember me
