ಬೆಳ್ತಂಗಡಿ:ಪುರಾತನ ಕಾಲದ ಗೋಪಾಲಕೃಷ್ಣನ ವಿಗ್ರಹವೊಂದು ಬೆಳ್ತಂಗಡಿಯ ತೆಕ್ಕಾರು ಗ್ರಾಮದಲ್ಲಿ ಪತ್ತೆಯಾಗಿದೆ. ಆದರೆ ವಿಗ್ರಹ ಪತ್ತೆಯಾದುದರ ಹಿಂದಿನ ಕಥೆ ರೋಚಕವಾಗಿದೆ.
ಸುಮಾರು ಹತ್ತಾರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ ಲಕ್ಷ್ಮಣ್ ಎಂಬುವರು ಕೆಲವು ದಿನಗಳ ಹಿಂದೆಯಷ್ಟೇ ತಮ್ಮ ಮೂಲ ಗ್ರಾಮವಾದ ತೆಕ್ಕಾಡಿಯಲ್ಲಿ ಭೂಮಿ ಖರೀದಿಸಿ, ಅಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದರು. ಇತ್ತೀಚೆಗೆ ಅವರಿಗೆ ಮನೆಯ ಪಕ್ಕದ ಜಮೀನೀನ ಭೂಮಿಯ ಕೆಳಗೆ ಗೋಪಾಲಕೃಷ್ಣನ ವಿಗ್ರಹವೊಂದು ಇರುವುದಾಗಿ ಕನಸು ಬಿದ್ದಿತ್ತು.
ಆಶ್ಚರ್ಯಕರ ಸಂಗತಿಯೆಂದರೆ ಜಮೀನಿನಲ್ಲಿ ಯಾವ ದಿಕ್ಕಿನಲ್ಲಿ ಆ ವಿಗ್ರಹವಿದೆ ಎಂಬುದನ್ನೂ ಸಹ ಕನಸಿನಲ್ಲಿ ಸೂಚಿಸಲಾಗಿತ್ತು. ಈ ಬಗ್ಗೆ ಲಕ್ಷ್ಮಣ್ ಅವರು ಗ್ರಾಮಸ್ಥರ ಬಳಿ ಪ್ರಸ್ತಾಪಿಸಿದಾಗ ನೂರಾರು ವರ್ಷಗಳ ಹಿಂದೆ, ತೆಕ್ಕಾಡಿ ಗ್ರಾಮದಲ್ಲಿ ಗೋಪಾಲಕೃಷ್ಣನ ದೇವಸ್ಥಾನವಿತ್ತು. ನಂತರದ ದಿನಗಳಲ್ಲಿ ಅದು ನೆಲಸಮವಾಯಿತು ಎಂದು ತಿಳಿಸಿದರು. ಆದರೆ ದೇವಸ್ಥಾನ ಎಲ್ಲಿತ್ತು ಎಂಬುದು ಯಾರಿಗೂ ಗೊತ್ತಿರಲಿಲ್ಲ ಎಂದು ತಿಳಿಸಿದರು.

ದೈವ ಹೇಳಿದ್ದೇನು?ಕೆಲವು ವರ್ಷಗಳ ಹಿಂದೆ ಊರಿನ ಸಂಪ್ರದಾಯಸ್ಥರು ಸೇರಿ ಗೋಪಾಲಕೃಷ್ಣನ ದೇವಾಲಯವನ್ನು ಪತ್ತೆ ಮಾಡಲು ಸ್ಥಳೀಯ ದೈವವೊಂದರ ಮುಂದೆ ಪ್ರಶ್ನೆ ಇಟ್ಟಿದ್ದರಂತೆ. ಆಗ, ದೈವವು ತೆಕ್ಕಾಡಿ ಗ್ರಾಮದ ಹೊರವಲಯದಲ್ಲಿರುವ ಹಾಮಾದ್ ಬಾವಾ ಎಂಬುವರ ಹೆಸರಿಗೆ ಸೇರಿದ ಜಮೀನಿನ ಕೆಳಗಡೆ ಇದೆಯೆಂದು ಹೇಳಲಾಗಿತ್ತಂತೆ. ದೈವವು ಹೇಳಿದಂತೆ ಹಾಮಾದ್ ಬಾವಾ ಅವರಿಗೆ ಕೇಳಿದಾಗ ಅದು ತಮ್ಮ ಪೂರ್ವಿಕರಿಂದ ಬಂದಿರುವ ಜಮೀನೆಂದೂ ಅದರಲ್ಲಿ ಯಾವ ದೇವಸ್ಥಾನದ ಕುರುಹು ಇಲ್ಲವೆಂದೂ ಅವರು ಹೇಳಿದ್ದರು. ಕೊನೆಗೆ ಆ ವಿಚಾರವನ್ನು ಅಲ್ಲಿಗೇ ಬಿಡಲಾಯಿತೆಂದು ಗ್ರಾಮದ ಹಿರಿಯರು ಲಕ್ಷ್ಮಣ್ ಅವರಿಗೆ ಹೇಳಿದರು.
ಪುನಃ ಉತ್ಖನನಲಕ್ಷ್ಮಣ್ ಅವರು ತಮಗೆ ಹಾಮಾದ್ ಬಾವಾ ಅವರಿಗೆ ಸೇರಿದ ಜಮೀನಿನ ಅಡಿಯಲ್ಲೇ ಗೋಪಾಲಕೃಷ್ಣನ ವಿಗ್ರಹವಿರುವ ಬಗ್ಗೆ ಕನಸು ಬಿದ್ದಿತ್ತು ಎಂದು ಹೇಳಿದರು. ಆಗ ಗ್ರಾಮಸ್ಥರು ಜಿಲ್ಲಾಡಳಿತದ ಮೂಲಕ ಹಾಮಾದ್ ಬಾವಾ ಅವರ ಜಮೀನಿನ ಉತ್ಖನನಕ್ಕೆ ಮನವೊಲಿಸಿದರು. ಹಾಮಾದ್ ಅವರ ಒಪ್ಪಿಗೆ ಮೇರೆಗೆ, ಲಕ್ಷ್ಮಣ್ ಅವರ ಕನಸಿನಲ್ಲಿ ಹೇಳಲಾದ ಜಾಗದಲ್ಲಿ ಉತ್ಖನನ ನಡೆಸಲಾಯಿತು.
ದೇವಸ್ಥಾನ ಕಟ್ಟಲು ಕ್ರಮಜೆಸಿಬಿ ಸಹಾಯದಿಂದ ಸುಮಾರು ಹತ್ತಾರು ಅಡಿಗಳವರೆಗೆ ಉತ್ಖನನ ನಡೆಸಿದ ನಂತರ ಆಳದಲ್ಲಿ ಗೋಪಾಲಕೃಷ್ಣನ ವಿಗ್ರಹ ಪತ್ತೆಯಾಯಿತು. ಉತ್ಖನನಕ್ಕಿಂತ ಮುಂಚೆ ಸರ್ವೇ ಮಾಡಿದಾಗ, ವಿಗ್ರಹ ಸಿಕ್ಕಿರುವ ಭೂಮಿಯು ಅಸಲಿಗೆ ಹಾಮಾದ್ ಬಾವಾ ಅವರಿಗೆ ಸೇರಿದ್ದಲ್ಲ ಎಂಬುದು ತಿಳಿದುಬಂದಿದೆ. ಮೂರ್ತಿ ಸಿಕ್ಕಿರುವ ಭೂಮಿ ಸರ್ಕಾರಿ ಭೂಮಿಯಾಗಿದ್ದು ಹಾಮಾದ್ ಅವರ ಪೂರ್ವಿಕರಲ್ಲಿ ಯಾರೋ ಸುಮಾರು 25 ಸೆಂಟ್ಸ್ ಇರುವ ಸರ್ಕಾರಿ ಭೂಮಿಯನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆಂದು ಹೇಳಲಾಗಿದೆ. ಹಾಗಾಗಿ, ಮೂರ್ತಿ ಸಿಕ್ಕಿರುವ ಸರ್ಕಾರಿ ಭೂಮಿಯನ್ನು ಗೋಪಾಲಕೃಷ್ಣ ದೇವಸ್ಥಾನ ಕಟ್ಟಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಗೋಪಾಲಕೃಷ್ಣ ಟ್ರಸ್ಟ್ ಎಂಬ ಸಂಸ್ಥೆಯನ್ನು ಆರಂಭಿಸಿ ಆ ಮೂಲಕ ದೇವಸ್ಥಾನ ಕಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ಕತ್ತಲೆಯಲ್ಲಿಯೂ ಅದ್ಭುತವಾಗಿ ಕಂಡ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಾಲಯ : ಮೊದಲ ಬಾರಿಗೆ ರಿವೀಲ್ ಆಯ್ತು ಫೋಟೋಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
