ಕೊಪ್ಪಳ:ಹಣದ ಆಮಿಷವೊಡ್ಡಿ ಅಮಾಯಕರನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿರುವಂತಹ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿದೆ. ಇದೀಗ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫಾಸ್ಟರ್ ಸತ್ಯನಾರಾಯಣ ಅಲಿಯಾಸ್ ಸ್ಯಾಮುವಲ್, ಶಿವಮ್ಮ ಅಲಿಯಾಸ್ ಸಾರಾ, ಚಿರಂಜೀವಿ ಡ್ಯಾನುವಲ್ ಎಂಬುವವ ವಿರುದ್ಧ ಹಣದ ಆಮಿಷ ತೋರಿಸಿ ಬಲವಂತವಾಗಿ ಮತಾಂತರ ಮಾಡಿದ ಆರೋಪ ಕೇಳಿ ಬಂದಿದೆ.
ಸದ್ಯ ಮೂವರ ವಿರುದ್ಧ ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮತಾಂತರ ನಿಷೇಧ ಕಾಯ್ದೆ 2022ರಡಿ ಜಿಲ್ಲೆಯಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ.
ಪಟ್ಟಣದ ಶಂಕರ್ ಎಂಬಾತ ಡಿ.9ರಂದು ದೂರು ದಾಖಲಿಸಿದ್ದು, ತನ್ನ ಕುಟುಂಬದವರನ್ನು ಮತಾಂತರ ಮಾಡಿರುವುದಾಗಿ ಆರೋಪಿಸಿದ್ದಾನೆ. ಹಣ ನೀಡುವುದಾಗಿ ಭರವಸೆ ನೀಡಿ, ಬಳಿಕ ಸ್ನಾನ ಮಾಡಿಸಿ ಇನ್ನು ಮುಂದೆ ನೀವು ಕ್ರಿಸ್ತಧರ್ಮದವರು. ಮನೆಯಲ್ಲಿನ ಎಲ್ಲ ದೇವರ ಫೋಟೋ ತೆಗೆಯಿರಿ. ಪೂಜೆ ಸಲ್ಲಿಸಬೇಡಿ ಎಂದು ಪುಸಲಾಯಿಸಿದ್ದಾರೆ. ನಂತರ ತನ್ನ ಮಕ್ಕಳನ್ನು ಚರ್ಚ್ ಕೆಲಸಕ್ಕೆ ಬಳಸಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾನೆ.ಮತಾಂತರ ಮಾಡಿರುವ ವಿಷಯವನ್ನು ತನ್ನ ಸಮುದಾಯದವರಿಗೆ ತಿಳಿಸಿದ್ದಕ್ಕೆ ಆರೋಪಿಗಳು ಅವಾಚ್ಯವಾಗಿ ನಿಂದಿಸಿದ್ದು, ಕೊಲೆ ಬೆದರಿಕೆ ಹಾಕಿದ್ದಾರೆಂದು ಶಂಕರ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 9 =
Remember me
