ವಿಜಯಪುರ:ಚಾಕೊಲೇಟ್ ಕೊಡುವುದಾಗಿ ನಂಬಿಸಿ ಮಕ್ಕಳನ್ನು ದೂರಕ್ಕೆ ಕರೆದೊಯ್ಯುತ್ತಿದ್ದ ಯುವಕನನ್ನು ಮಕ್ಕಳ ಕಳ್ಳನೆಂದು ಭಾವಿಸಿದ ಸಾರ್ವಜನಿಕರು ಆತನನ್ನು ಪೊಲೀಸ್ ಸುಪರ್ಧಿಗೆ ಒಪ್ಪಿಸಿದ್ದಾರೆ.
ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ಮಿರಗಿ ವಸತಿ ಶಾಲೆಯಲ್ಲಿ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ಅಂದಾಜು 20-25ರ ವಯೋಮಾನದ ಯುವಕ ಶಾಲೆಗೆ ಹೋಗುತ್ತಿದ್ದ 3 ಮತ್ತು 4ನೇ ತರಗತಿ ಹೆಣ್ಣುಮಕ್ಕಳನ್ನು ಹಿಂಬಾಲಿಸಿದ್ದಾನೆ. ಅದರಲ್ಲೊಬ್ಬ ಬಾಲಕಿಯನ್ನು ಚಾಕೊಲೇಟ್ ಕೊಡಿಸುವುದಾಗಿ ತಿಳಿಸಿ ಕರೆದೊಯ್ಯಲು ಯತ್ನಿಸಿದ್ದಾನೆ.
ಕೂಡಲೇ ಎಚ್ಚೆತ್ತುಕೊಂಡ ಮಕ್ಕಳು ಸಾರ್ವಜನಿಕರಿಗೆ ವಿಷಯ ತಿಳಿಸಿದ್ದು, ಯುವಕನ್ನು ಹಿಡಿದುಕೊಂಡ ಜನ 112 ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಇಂಡಿ ಗ್ರಾಮೀಣ ಠಾಣೆ ಪಿಎಸ್‌ಐ ಅವರನ್ನು ವಿಚಾರಿಸಲಾಗಿ ತಾವು ಹಳ್ಳಿ ಪ್ರವಾಸದಲ್ಲಿದ್ದು ಠಾಣೆಗೆ ಭೇಟಿ ನೀಡಿದ ಬಳಿಕ ಮಾಹಿತಿ ಕಲೆ ಹಾಕುವುದಾಗಿ ಪ್ರತಿಕ್ರಿಯಿಸಿದರು. ಘಟನೆಯಿಂದ ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ.
ಕೊಪ್ಪಳ ಬಸ್‌ಗೆ ಕಲ್ಲೆಸೆದ ಮಹಿಳೆಗೆ ಐದು ಸಾವಿರ ರೂಪಾಯಿ ದಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
