ಬೆಂಗಳೂರು:ಕಲಾವಿದರ ಕೈಯಲ್ಲಿರುವ ಕುಂಚ ಮತ್ತೊಂದು ಜಗತ್ತನ್ನೇ ಸೃಷ್ಟಿಸಬಲ್ಲದು. ತಮ್ಮ ಕಲೆಗೆ ಕಲಾವಿದರು ಬೇಕಾದ ವಸ್ತು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂತೆಯೇ ಪ್ರಸಿದ್ಧ ಕಲಾವಿದೆ ವಿದಿತಾ ಸಿಂಗ್ ತಮ್ಮ ಅದ್ಬುತ ಕಲಾ ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಂಡಿದ್ದು ಪುರಾತನ ಕಾರುಗಳು ಮತ್ತು ಕಾರುಗಳಿಗೆ ಸಂಬಂಧ ಪಟ್ಟ ವಿಶೇಷತೆಗಳನ್ನ.
ವಿದಿತಾ ಸಿಂಗ್ ಕೈಯಲ್ಲಿ ಅರಳಿದ ಕಾರುಗಳು ಹಾಗೂ ಕಾರುಗಳಿಗೆ ಸಂಬಂಧಪಟ್ಟ ಚಿತ್ರಕಲೆಗಳನ್ನು, ಕಲಾಕೃತಿಗಳನ್ನು ನೋಡುವುದು ಹೊಸತೊಂದು ಆಟೋಮೊಬೈಲ್ ಪ್ರಪಂಚವನ್ನೇ ದರ್ಶನ ಮಾಡಿಸುತ್ತದೆ. ಅಂತಹ ಅದ್ಭುತ ಆಟೋಮೋಟಿವ್ ಆರ್ಟ್ ಎಕ್ಸಿಬಿಷನ್ ಇತ್ತೀಚೆಗೆ ಬೆಂಗಳೂರಿಗರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.
ಬೆಳ್ಳಂದೂರಿನ ಮಾರತಹಳ್ಳಿ ಪಾಸ್‌ಪೋರ್ಟ್ ಕಚೇರಿ ಸಮೀಪ ಇರುವ ಅದ್ವೈತ್ ಹುಂಡೈ ಶೋರೂಂನಲ್ಲಿ ಆ.15 ರಿಂದ ಆಯೋಜಿಸಿದ್ದ ಆಟೋಮೋಟಿವ್ ಆರ್ಟ್ ಎಕ್ಸಿಬಿಷನ್ ಇಂದು (ಭಾನುವಾರ) ಕೊನೆಗೊಳ್ಳಲಿದೆ.
ಈ ಪ್ರದರ್ಶನದಲ್ಲಿ ವಿಂಟೇಜ್ ಕಾರುಗಳ ವಿವಿಧ ನಮೂನೆಯ ಚಿತ್ರಕಲೆಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ಬೆಳಗ್ಗೆ 11 ರಿಂದ ಸಂಜೆ 7 ಗಂಟೆಯ ವರೆಗೆ ನಡೆದ ಪ್ರದರ್ಶನಕ್ಕೆ ಹಲವಾರು ಜನ ಆಗಮಿಸಿ ಪ್ರದರ್ಶನದಲ್ಲಿ ಇರಿಸಲಾಗಿದ್ದ ಅದ್ಭುತ ಆಟೋಮೋಟಿವ್ ಪೇಂಟಿಂಗ್‌ಗಳನ್ನು ಕಣ್ತುಂಬಿಕೊಂಡರು.
ವಿದಿತಾ ಸಿಂಗ್ ಭಾರತದ ಪ್ರಮುಖ ಆಟೋಮೋಟಿವ್ ಕಲಾವಿದೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.ಕಳೆದ ಎರಡು ದಶಕಗಳಿಂದ ಭಾರತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಇವರು ಚಿಕ್ಕಂದಿನಿಂದಲೇ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು.ವಿದಿತಾ ರಚಿಸಿರುವ ಅಪೂರ್ವ ಕಲಾಕೃತಿಗಳು,ವರ್ಣಚಿತ್ರಗಳು ದೇಶ–ವಿದೇಶಗಳ ಕಲಾಸಕ್ತರ ಮೆಚ್ಚುಗೆ ಗಳಿಸಿವೆ.
ಕಾರುಗಳ ವಿನ್ಯಾಸ,ಕಾರು ಶೋರೂಂಗಳ ವಿನ್ಯಾಸದಲ್ಲಿ ನೈಪುಣ್ಯತೆ ಹೊಂದಿರುವ ವಿದಿತಾ ಕೈಯಲ್ಲಿ ಮೂಡಿ ಬಂದಿರುವ ಕೆಲ ಮೇರುಕಲಾಕೃತಿಗಳು ಜಗತ್ತಿನ ಹಲವು ದೇಶಗಳಲ್ಲಿ ಪ್ರದರ್ಶನಗೊಂಡಿವೆ.
ಭಾರತದಲ್ಲಿ ನವದೆಹಲಿ,ಮುಂಬೈ,ಜೈಪುರ,ಹೈದ್ರಾಬಾದ್,ಅಹಮದಾಬಾದ್,ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಪ್ರದರ್ಶನ ನೀಡಿರುವ ವಿದಿತಾ ಸಿಂಗ್ ಅವರ ಕಲಾಕೃತಿಗಳು ಕ್ಯಾಲಿಫೋರ್ನಿಯಾ ಹಾಗೂ ವಿಶ್ವದ ವಿವಿದೆಡೆ ಪ್ರದರ್ಶನಗೊಂಡಿವೆ.ಹಾಗೂ ನಿರೀಕ್ಷೆಗೂ ಹೆಚ್ಚಿನ ಬೆಲೆಗೆ ಕಲಾಕೃತಿಗಳು ಹರಾಜುಗೊಂಡಿವೆ.
ವಿದಿತ ಸಿಂಗ್ ಅವರ ಪ್ರತಿಭೆಗೆ ಸಾಕ್ಷಿಯಾಗಿ ಬಿಬಿಸಿ,ಎನ್‌ಡಿಟಿವಿ ಸೇರಿದಂತೆ ಅನೇಕ ಮಾಧ್ಯಮಗಳಲ್ಲಿ ಪ್ರಚಾರವಾಗಿದೆ.ಹಲವು ದಿನಪತ್ರಿಕೆ ಮತ್ತು ಮಾಗಜೀನ್‌ಗಳಲ್ಲಿ ಪ್ರಕಟವಾದ ಇವರ ಕಲಾ ಪ್ರತಿಭೆಯನ್ನು ಕಂಡು ಹುಂಡೈ ಮೋಟಾರ್ ಸಂಸ್ಥೆ ವಿಶೇಷ ಚಿತ್ರಕಲೆ ರಚಿಸಲು ನಿಯೋಜಿಸಿದ್ದು,ಉತ್ತಮ ಚಿತ್ರಕಲೆಗಳು ಅವರಿಂದ ಮೂಡಿ ಬಂದಿವೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + 16 =
Remember me
