ವಿಜಯಪುರ:ವಿಜಯಪುರ ನಗರ ಹಾಗೂ ಹೊರವಲಯದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ಸಂಜೆ 5.56 ಗಂಟೆಗೆ ಭೂಮಿ ನಡುಗಿದ್ದು, ಸ್ಫೋಟದ ರೀತಿಯಲ್ಲಿ ಸದ್ದಾಗಿದೆ. ಗೋಳಗುಮ್ಮಟ ಏರಿಯಾ, ಕೀರ್ತಿ ನಗರ, ಜಲನಗರ, ತೊರವಿ, ಗಣೇಶ ನಗರ, ಮಹಲ್ ಭಾಗದಲ್ಲಿ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ.
ಕಳೆದ ವರ್ಷದಲ್ಲಿ ವಿಜಯಪುರ ಜಿಲ್ಲೆ ಹಲವು ಭಾರಿ ಭೂಮಿಯ ಕಂಪನದಿಂದ ನಲುಗಿತ್ತು. 2022ರಲ್ಲಿ 14 ಬಾರಿ ಜಿಲ್ಲೆಯಲ್ಲಿ ಭೂಮಿ ಕಂಪಿಸಿತ್ತು. ಕಳೆದ ಜುಲೈನಲ್ಲಿ ತಿಕೋಟಾ ಹಾಗೂ ಇಂಡಿ ಭಾಗದಲ್ಲಿ ಮುಂಜಾನೆ ಸಂಭವಿಸಿದ ಕಂಪನದಿಂದ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿತ್ತು. 48 ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು.
ಇದೀಗ ಮತ್ತೆ ವರ್ಷಾರಂಭದಲ್ಲೇ ವಿಜಯಪುರ ಜಿಲ್ಲೆಯಲ್ಲಿ ಭೂಮಿ ಕಂಪಿಸಿದೆ. ಇದು ಜನರನ್ನು ಮತ್ತಷ್ಟು ಆತಂಕಕ್ಕೆದೂಡಿದೆ. ರಾಷ್ಟ್ರ ರಾಜಧಾನಿಯಲ್ಲೂ ಹೊಸ ವರ್ಷದ ಆರಂಭದಲ್ಲೇ ಭೂಕಂಪನಕ್ಕೆ ನಲುಗಿದೆ. ಜನವರಿ 1ರಂದು 3.8ರ ತೀವ್ರತೆಯಲ್ಲಿ ದೆಹಲಿಯಲ್ಲಿ ಭೂಮಿ ಕಂಪಿಸಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
