ಮುಷ್ಟಿ ಮುದ್ರೆಯು ಒಂದು ಯೋಗದ ವಿಧಾನವಾಗಿದೆ. ಇದು ಸುಪ್ತ ಭಾವನೆಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದು ಹಸ್ತ (ಕೈ) ಮುದ್ರೆ ಮತ್ತು ಚಿಕಿತ್ಸಕ ಮುದ್ರೆಗಳ ಸರಣಿಗಳಲ್ಲಿ ಒಂದಾಗಿದೆ ಎಂದು ಭಾವಿಸಲಾಗಿದೆ.
ಮುಷ್ಟಿ ಮುದ್ರೆಯನ್ನು ನಿರ್ವಹಿಸುವಾಗ ಎರಡೂ ಕೈಗಳ ಮುಷ್ಟಿಯನ್ನು ಮಾಡಿಕೊಳ್ಳಬೇಕು ಮತ್ತು ಉಂಗುರದ ಬೆರಳನ್ನು ರ್ಸ³ಸಲು ಹೆಬ್ಬೆರಳು ಮೊದಲ ಮೂರು ಬೆರಳುಗಳ ಮೇಲೆ ಚಾಚಿರಬೇಕು. ಈ ಪದವು ಸಂಸ್ಕೃದಿಂದ ಬಂದಿದೆ, ಮುಷ್ಟಿ ಎಂದರೆ ಮುಚ್ಚಿದ ಕೈ ಅಥವಾ ಮುಷ್ಟಿ ಮತ್ತು ಮುದ್ರೆ ಅಂದರೆ ಸನ್ನೆ ಅಥವಾ ಮುದ್ರೆ. ಆದ್ದರಿಂದ ಈ ಮುದ್ರೆಯನ್ನು ಮುಷ್ಟಿ ಮುದ್ರೆ ಎಂದೂ ಕರೆಯುತ್ತಾರೆ. ಭಂಗಿಯು ಸಮ್ಮಿತೀಯವಾಗಿರುವವರೆಗೆ ಮತ್ತು ದೇಹವು ಶಾಂತವಾಗಿರುವವರೆಗೆ ಹಸ್ತ ಮುದ್ರೆಗಳನ್ನು ಮಾಡಬಹುದು. ಕುಳಿತಿರುವ, ನಿಂತಿರುವ ಅಥವಾ ನಡೆದಾಡುವಾಗ ಸಹ ಇದನ್ನು ಮಾಡಬಹುದು. ಸಾಮಾನ್ಯವಾಗಿ ಮುಷ್ಟಿ ಹಿಡಿಯುವುದು ಎಂದರೆ ಕೋಪ, ಭಯ, ಸಿಟ್ಟು, ಹತಾಶೆ, ಆಕ್ರಮಣಕಾರಿ ಇತ್ಯಾದಿ ಭಾವನೆಗಳನ್ನು ಅಭಿವ್ಯಕ್ತಿಸುವ ನೈಸರ್ಗಿಕ ಪ್ರವೃತ್ತಿಯಾಗಿದೆ. ಮುಷ್ಟಿ ಎಂದರೆ ಬೆರಳುಗಳನ್ನು ಮಡಚಿದ ಅಥವಾ ಬಿಗಿದ ಹಸ್ತದ ಸ್ಥಿತಿಯಾಗಿದೆ. ಈ ಮುದ್ರೆಯು ಪೃಥ್ವಿ, ಜಲ, ವಾಯು ಮತ್ತು ಆಕಾಶ ಎಂಬ ನಾಲ್ಕು ಮೂಲತತ್ವಗಳ ಆಧಿಕ್ಯದಿಂದ ಉಂಟಾಗುವ ತೊಂದರೆಗಳನ್ನು ನಿವಾರಿಸುತ್ತದೆ.
ವಿಧಾನ:ಎರಡೂ ಹಸ್ತಗಳ ಬೆರಳುಗಳನ್ನು ಮಡಚಿ ಮುಷ್ಟಿ ಮಾಡಿ. ಹೆಬ್ಬೆರಳುಗಳನ್ನು ಆಯಾ ಹಸ್ತಗಳ ಉಂಗುರ (ಅನಾಮಿಕಾ) ಬೆರಳುಗಳ ಹಿಂಭಾಗದಲ್ಲಿ ಇರಿಸಿ. ದಿನಕ್ಕೆ ಸುಮಾರು 15 ನಿಮಿಷದಂತೆ ಮೂರು ಬಾರಿ ಅಭ್ಯಾಸ ಮಾಡಿ.
ಪ್ರಯೋಜನವೇನು?:ಊಟದ ನಂತರ ಮುಷ್ಟಿ ಮುದ್ರೆಯನ್ನು ಅಭ್ಯಾಸ ಮಾಡುವುದು ಹೊಟ್ಟೆ ಮತ್ತು ಯಕೃತ್ತಿನಲ್ಲಿ ಶಕ್ತಿಯನ್ನು ಸಕ್ರಿಯಗೊಳಿಸುತ್ತದೆ. ಇದರಿಂದಾಗಿ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಕೋಪ, ಭಯ ಮತ್ತು ಹತಾಶೆಯಂತಹ ನಕಾರಾತ್ಮಕ ಭಾವನೆಗಳನ್ನು ನಿಯಂತ್ರಿಸುತ್ತದೆ. ಮಲಬದ್ಧತೆ ಯನ್ನು ನಿವಾರಿಸುತ್ತದೆ. ದೇಹದಲ್ಲಿನ ಒತ್ತಡವನ್ನು ಬಿಡುಗಡೆ ಮಾಡುತ್ತದೆ. ಚಿಂತೆ ಮತ್ತು ಅನಗತ್ಯ ಆಲೋಚನೆಗಳಿಂದ ಮನಸ್ಸನ್ನು ತೆರವುಗೊಳಿಸುತ್ತದೆ.ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ಮುಷ್ಟಿಗಳನ್ನು ಸಾಮಾನ್ಯವಾಗಿ ಆಕ್ರಮಣಶೀಲತೆಯ ಸಂಕೇತವಾಗಿ ನೋಡಲಾಗುತ್ತದೆ ಮತ್ತು ತೀವ್ರವಾದ ಭಾವನೆಗಳ ಸಮಯದಲ್ಲಿ ನೈಸರ್ಗಿಕವಾಗಿ ರೂಪುಗೊಳ್ಳುತ್ತದೆ. ಆದರೆ ಮುದ್ರೆಯು ಅಂತಹ ಭಾವನೆಗಳನ್ನು ಬಿಡುಗಡೆ ಮಾಡುತ್ತದೆ. ಪಿತ್ತಜನಕಾಂಗದ ಕಾರ್ಯ ಸಮರ್ಪಕವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ದೇಹದ ಉದ್ವಿಗ್ನತೆ ಬಿಡುಗಡೆಗೊಳ್ಳುತ್ತದೆ. ಮನಸ್ಸಿನಲ್ಲಿ ಬಂಧಿಸಿಟ್ಟ (ಅದುಮಿಟ್ಟ) ಭಾವನೆಗಳನ್ನು ಬಿಡುಗಡೆಗೊಳಿಸುತ್ತದೆ. ಮಲಬದ್ಧತೆ ಸಮಸ್ಯೆಯ ನಿಯಂತ್ರಣಕ್ಕೆ ಈ ಮುದ್ರೆ ಸಹಕಾರಿ. ನಾವು ಕೈ ಚಾಚಿ ಮುಷ್ಠಿ ಮೂಲಕ ಇನ್ನೊಬ್ಬರಿಗೆ ತೋರಿಸಿದಾಗ, ನೋಡಿದ ವ್ಯಕ್ತಿಗೆ ಹಲವಾರು ಭಾವನೆಗಳು ಬರುತ್ತದೆ. (ಉದಾ: ಪ್ರತಿದಾಳ, ಭಯ ಆಕ್ರಮಣ ಶೀಲತೆ ಇತ್ಯಾದಿ). ಶ್ವಾಸನಾಳದಲ್ಲಿ ಕಫ ಕಟ್ಟಿದಾಗ, ಚಳಿಯಿಂದ ನಡುಗುತ್ತಿದ್ದಾಗ, ಆಲಸ್ಯ, ಜಡತ್ವ, ಖಿನ್ನತೆ, ಅಧೀರತೆ ಮನವನ್ನು ಆವರಿಸಿದಾಗ ಈ ಮುದ್ರೆಯನ್ನು 45 ನಿಮಿಷಗಳ ಕಾಲ ಅಭ್ಯಾಸ ಮಾಡಿ. ಅನಂತರ ಪ್ರಾಣಮುದ್ರೆಯನ್ನು 10 ನಿಮಿಷ ಆಚರಣೆ ಮಾಡಿದರೆ ಉತ್ತಮ ಫಲಿತಾಂಶ ದೊರಕುತ್ತದೆ.
ಯಾರು, ಯಾವಾಗ ಮಾಡಬೇಕು?:ಮುದ್ರೆಗಳನ್ನು ಯಾರು, ಎಲ್ಲಿ, ಯಾವಾಗ ಬೇಕಾದರೂ ಮಾಡಬಹುದೆಂಬುದೇ ಇದಕ್ಕಿರುವ ಇನ್ನೊಂದು ವಿಶೇಷತೆ. ಕುಳಿತು, ನಿಂತು, ಮಲಗಿ, ಪ್ರಯಾಣದಲ್ಲಿ, ಟಿ.ವಿ. ವೀಕ್ಷಿಸುತ್ತಾ, ಸುಮ್ಮನೆ ವಿಶ್ರಾಂತಿಯಲ್ಲಿ -ಹೀಗೆೆ ಈ ಮುದ್ರೆ ಮಾಡುತ್ತಾ ಇರಬಹುದು. ಎರಡೂ ಕೈಗಳನ್ನು ಬಳಸಿಕೊಂಡರೆ ಉತ್ತಮ ಪರಿಣಾಮ.

ಆಸ್ಪತ್ರೆಗೆ ತೆರಳಿ ಎಸ್​.ಎಂ ಕೃಷ್ಣ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 7 =
Remember me
