|ರುದ್ರಣ್ಣ ಹರ್ತಿಕೋಟೆಬೆಂಗಳೂರು
ರಾಜ್ಯದಲ್ಲಿ ಅಧಿಕಾರ ಸೂತ್ರ ಹಿಡಿಯಲು ಹರಸಾಹಸ ಮಾಡುತ್ತಿರುವ ಮೂರೂ ರಾಜಕೀಯ ಪಕ್ಷಗಳು, ಪರಿಸ್ಥಿತಿಗೆ ತಕ್ಕಂತೆ ಮತ ಚಲಾಯಿಸುವ ‘ಅದೃಶ್ಯ ಮತದಾರ’ರನ್ನು ಓಲೈಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿವೆ. ರಾಜ್ಯದಲ್ಲಿ ಮೂರು ಪ್ರಮುಖ ಪಕ್ಷಗಳಿಗೂ ತನ್ನದೇ ಆದ ಮತಬ್ಯಾಂಕ್ ಇದ್ದೇ ಇದೆ. ಆದರೆ ಅಷ್ಟರಿಂದಲೇ ಚುನಾವಣೆಯಲ್ಲಿ ಸ್ವತಂತ್ರವಾಗಿ ಗೆದ್ದು ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಯಾವುದೇ ಪಕ್ಷಕ್ಕೂ ತನ್ನ ಬೆಂಬಲ ಇಲ್ಲದ, ಚುನಾವಣೆಯಿಂದ ಚುನಾವಣೆಗೆ ಪರಿಸ್ಥಿತಿ ಗಮನಿಸಿ ಪಕ್ಷ ಬದಲಾವಣೆ ಮಾಡುವ ಮತದಾರರನ್ನು ಸೆಳೆದರೆ ಮಾತ್ರ ಅಧಿಕಾರ ಸಿಗುತ್ತದೆ. ಆದ್ದರಿಂದಲೇ ಇಂಥ ಗಣನೀಯ ಸಂಖ್ಯೆಯಲ್ಲಿರುವ ಮತದಾರರನ್ನು ಸೆಳೆಯುವುದು ಪ್ರಮುಖ ಉದ್ದೇಶವಾಗಿದೆ. ರಾಜ್ಯದಲ್ಲಿ ಸುಮಾರು ಶೇ.12 ಮತದಾರರು ಯಾವುದೇ ಪಕ್ಷದ ಜತೆ ಗುರುತಿಸಿಕೊಂಡಿಲ್ಲ. ಅವರೆಲ್ಲ ಅದೃಶ್ಯರಾಗಿಯೇ ಇದ್ದು ಸಿಎಂ ಅಭ್ಯರ್ಥಿ ಯಾರು? ಯಾವ ಪಕ್ಷಕ್ಕೆ ಅವಕಾಶ ಇದೆ? ಎಂಬುದನ್ನು ಗಮನಿಸಿ ಮತದಾನದ ನಿರ್ಧಾರ ಮಾಡುತ್ತಾರೆ. ಈ ಮತದಾರರೇ ನಿರ್ಣಾಯಕರು. ಇಂತಹವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವುದು 3 ಪಕ್ಷಗಳಿಗೂ ಸವಾಲಿನ ಕೆಲಸವೇ ಆಗಿದೆ.
ಪಕ್ಷಗಳ ಸರ್ಕಸ್:ಅದೃಶ್ಯ ಮತದಾರನ್ನು ಸೆಳೆಯಲು ಪಕ್ಷಗಳು ಎಲ್ಲ ರೀತಿಯ ಸರ್ಕಸ್ ಮಾಡುತ್ತಿವೆ. ಬೃಹತ್ ಸಮಾವೇಶ, ರೋಡ್ ಶೋ, ರಾಷ್ಟ್ರೀಯ ನಾಯಕರ ಸಮಾವೇಶ ಆಯೋಜನೆ… ಇವೆಲ್ಲ ಅದೃಶ್ಯ ಮತದಾರರನ್ನು ಸೆಳೆಯುವ ಪ್ರಮುಖ ಅಜೆಂಡಾವನ್ನೇ ಒಳಗೊಂಡಿವೆ. ಅದೃಶ್ಯ ಮತದಾರರಲ್ಲಿ ವಿಶ್ವಾಸ ಮೂಡಿಸುವುದು ಪ್ರಮುಖ ಕೆಲಸವಾಗಿದೆ. ಅದೃಶ್ಯ ಮತದಾರರಲ್ಲಿ ಹೆಚ್ಚಿನ ಪ್ರಮಾಣದ ಮತಗಳನ್ನು ಪಡೆಯಬೇಕಾದರೆ ಅವರಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕವೇ ವಿಶ್ವಾಸ ಮೂಡಿಸಬೇಕಾಗಿದೆ.
ಕೈ ಮತಬ್ಯಾಂಕ್ ಹೆಚ್ಚು ಏಕೆ?:ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್​ಗಿಂತ ಕಾಂಗ್ರೆಸ್​ನ ಮತ ಗಳಿಕೆ ಪ್ರಮಾಣ ಹೆಚ್ಚಾಗಿದೆ. ಅದಕ್ಕೆ ಕಾರಣ ಕಾಂಗ್ರೆಸ್ ಉಳಿದೆರಡು ಪಕ್ಷಗಳ ಜತೆ ಹೋರಾಟ ಮಾಡುತ್ತದೆ. ಉತ್ತರ ಕರ್ನಾಟಕ, ಕರಾವಳಿ ಭಾಗದಲ್ಲಿ ಬಿಜೆಪಿ ವಿರುದ್ಧ ಸೆಣಸಿದರೆ, ಹಳೇ ಮೈಸೂರಿನಲ್ಲಿ ಜೆಡಿಎಸ್ ವಿರುದ್ಧ ಹೋರಾಟ ಮಾಡುತ್ತದೆ. ಆದ್ದರಿಂದಲೇ ಸಹಜವಾಗಿಯೇ ಕಾಂಗ್ರೆಸ್ ಮತಬ್ಯಾಂಕ್ ಹೆಚ್ಚಾಗಿದೆ. ಅದು ಇತ್ತೀಚಿಗೆ ನಡೆದ ಗ್ರಾಪಂ ಚುನಾವಣೆ ಮತ್ತು ವಿಧಾನ ಪರಿಷತ್​ಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಸಾಬೀತಾಗಿದೆ. 1989ರಲ್ಲಿ ವೀರೇಂದ್ರ ಪಾಟೀಲ್ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.42 ಮತಗಳನ್ನು ಪಡೆದಿತ್ತು. ಅದಕ್ಕೂ ಮೊದಲು ಅಥವಾ ಆ ನಂತರ ಯಾವುದೇ ಪಕ್ಷ ಈ ಪ್ರಮಾಣದ ಮತ ಪಡೆದಿಲ್ಲ.
ಮುಖ್ಯಮಂತ್ರಿ ಅಭ್ಯರ್ಥಿ ನೋಡಿ ನಿರ್ಧಾರ:ರಾಜ್ಯದಲ್ಲಿ ಚುನಾವಣಾ ಇತಿಹಾಸ ಗಮನಿಸಿದರೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಗಮನಿಸಿದ ನಂತರ ಅದೃಶ್ಯ ಮತದಾರರು ತಮ್ಮ ನಿರ್ಧಾರ ತೆಗೆದುಕೊಂಡಿರುವುದೇ ಹೆಚ್ಚು ಎಂಬುದು ಕಂಡು ಬರುತ್ತದೆ ಎಂದು ಚುನಾವಣಾ ವಿಶ್ಲೇಷಕರು ಹೇಳುತ್ತಾರೆ. ಮುಖ್ಯಮಂತ್ರಿ ಯಾರು ಎಂಬ ನಿರ್ಧಾರದ ಮೇಲೆ ಶೇ. 5 ರಿಂದ 6 ಮತಗಳು ನೆಚ್ಚಿನ ನಾಯಕರ ಕಡೆ ತಿರುಗುತ್ತವೆ. ಇದು ಚುನಾವಣೆಯ ಲೆಕ್ಕಾಚಾರಗಳನ್ನೇ ಏರುಪೇರು ಮಾಡುತ್ತದೆ.
ಪಕ್ಷಗಳ ಪ್ರಯತ್ನ?:ಬಿಜೆಪಿ– ಕರಾವಳಿ, ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕದ ಜತೆಗೆ ಹಳೇ ಮೈಸೂರು ಹಾಗೂ ಹೈಕ ಭಾಗದಲ್ಲಿ ಹೆಚ್ಚಿನ ಹೋರಾಟ ನಡೆಸುವುದು;ಕಾಂಗ್ರೆಸ್– ಕರಾವಳಿ, ಉ.ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಹೆಚ್ಚು ಆದ್ಯತೆ;ಜೆಡಿಎಸ್– ಹಳೇ ಮೈಸೂರು ಭಾಗದ ಜತೆಗೆ ಇತರೆಡೆ ಮತ ಗಳಿಕೆ ಪ್ರಯತ್ನ.

ಜ. 30ರಿಂದ ಮೂರು ವಾರ ಕಾಲ ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಕ್ಲೋಸ್; ಎಲ್ಲಿ, ಯಾಕೆ?

14 ವರ್ಷದ ಹುಡುಗಿಗೆ ಹೃದಯಾಘಾತ; ಸಾವಿಗೂ ಕಾರಣವಾಗಬಹುದು ಡಿಯೊಡರೆಂಟ್!

ಸಾವಿರಾರು ಕೋಟಿ ರೂ. ವಂಚಿಸಿದ ಮಲ್ಯ-ಮೋದಿಯನ್ನೇ ಏನೂ ಮಾಡಿಲ್ಲ; 3-4 ಕೋಟಿ ಮೋಸ ಮಾಡಿದ ನನ್ನ ಚಿಂತೆ ನಿಮಗ್ಯಾಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − eight =
Remember me
