ಬೆಂಗಳೂರು:ಕಂಬಳ ಉತ್ಸವದಲ್ಲಿ ಕೋಣಗಳ ಅಂಲಕಾರ, ಓಟಕ್ಕೆ ಬಳಸುವ ಪರಿಕರ, ಶತಮಾನಗಳ ಹಿಂದೆ ಕರೆಗಳಲ್ಲಿ ಬಳಸಿದ್ದ ಅಪರೂಪದ ವಸ್ತುಗಳು ಸೇರಿದಂತೆ ತುಳುನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸವನ್ನು ಒಟ್ಟಾಗಿ ಕಟ್ಟಿಕೊಡುವ ವಸ್ತುಪ್ರದರ್ಶನ ಸಾವಿರಾರು ವೀಕ್ಷಕರ ಮನಗೆದ್ದಿತು.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಂಬಳದ ಜತೆ ಜತೆಗೆ ಕರಾವಳಿಯ ವೈಶಿಷ್ಟ್ಯವನ್ನು ಜನರಿಗೆ ತಿಳಿಸುವ ಭಾಗವಾಗಿ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿದೆ. ಶತಮಾನದ ಹಿಂದೆ ನಡೆಯುತ್ತಿದ್ದ ಕಂಬಳದಲ್ಲಿ ಕೋಣಗಳ ಮುಖದ ಮೇಲೆ ಮರದ ತಲೆಪಟ್ಟಿಯನ್ನು ಕಟ್ಟಲಾಗುತ್ತಿತ್ತು. ದೇವರ ಪ್ರಭಾವಳಿ ರೀತಿಯಲ್ಲಿ ಕಾಣುವ ಈ ತಲೆಪಟ್ಟಿಯಲ್ಲಿ ಸೂರ್ಯ, ಚಂದ್ರ ಚಿತ್ರ ಒಳಗೊಂಡ ಕುಸೂರಿಯನ್ನು ಆಕರ್ಷಕವಾಗಿದೆ. ಇದು ಈಗಿನ ಕಂಬಳಗಳಲ್ಲಿ ಬಳಕೆಯಾಗುತ್ತಿದೆ. ಇಂತಹ ಹತ್ತು ಹಲವು ಪರಿಕರಗಳನ್ನು ರಾಜಧಾನಿಯಲ್ಲಿ ಮೊದಲ ಬಾರಿಗೆ ಪ್ರದರ್ಶನಕ್ಕೆ ಇಡಲಾಗಿದೆ.
ದೈವರಾಧಾನೆ, ದೇವತಾರಾಧನೆ, ನಾಗಾರಾಧನೆ, ಹುಲಿವೇಷಕ್ಕೆ ಬಳಸುತ್ತಿದ್ದ ಪರಿಕರಗಳು ಪ್ರದರ್ಶನದಲ್ಲಿವೆ. ಕಲ್ಲಿನಲ್ಲಿ ಕೆತ್ತಿರುವ ತಂಬೂರಿ ನಾಗ ವಿಗ್ರಹ ಹಲವು ಶತಮಾನಗಳಿಂದ ಜೋಪಾನ ಮಾಡಲಾಗಿದೆ. ಮನೆಗಳಲ್ಲಿ ಅಡುಗೆ ತಯಾರಿಸಲು ಬಳಸುತ್ತಿದ್ದ ಬಟ್ಟಲು, ಕೊಳಗ, ಕೈಮರ ಇತ್ಯಾದಿ ವಸ್ತುಗಳೂ ಇವೆ. ಜತೆಗೆ ಕೃಷಿ ಚಟುವಟಿಕೆಗೆ ಬಳಸುವ ನೇಗಿಲು, ಹಗ್ಗ, ಕೊಯ್ಲಿನ ಸಾಮಗ್ರಿ, ವಿವಿಧ ವಿನ್ಯಾಸದ ಖಡ್ಗ ಸಹಿತ ಆಯುಧಗಳು, ದೇವರ ಪಲ್ಲಕ್ಕಿ, ಮಕ್ಕಳ ತೊಟ್ಟಿಲು, ಮನೆಯ ಬಾಗಿಲುಗಳ ಕುಸೂರಿ ಕೆತ್ತನೆಯುಳ್ಳ ಅಲಂಕಾರಿಕ ಭಾಗಗಳು, ಶಿಲಾಯುಗದ ಕಲ್ಲಿನ ಆಯುಧಗಳು ಇವೆ.
ಈ ಎಲ್ಲ ಅಪರೂಪದ ಪರಿಕರಗಳನ್ನು ಸಂಗ್ರಹಿಸಿ ಜೋಪಾನ ಮಾಡುವಲ್ಲಿ ಕಾರ್ಕಳ ತಾಲೂಕಿನ ಹಿರ್ಗಾನದ ನೆಲ್ಲಿಕಟ್ಟೆಯ ಪ್ರೊ. ಸುಧಾಕರ್ ಶೆಟ್ಟಿ ಹಾಗೂ ಅವರ ಪತ್ನಿ ಆಶಿತಾ ಎಸ್ ಕಡಂಬ ಸಂಗ್ರಹಿಸಿದ್ದಾರೆ. ಇತಿಹಾಸ ಉಪನ್ಯಾಸಕರಾಗಿರುವ ಸುಧಾಕರ್ ಶೆಟ್ಟಿ ಅವರ ಸಂಗ್ರಹದಲ್ಲಿರುವ ಸಾವಿರಾರು ಪರಿಕರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿಕೊಡುವ ಉದ್ದೇಶದಿಂದ ವಸ್ತುಪ್ರದರ್ಶನವನ್ನು ಏರ್ಪಡಿಸುತ್ತಾ ಬಂದಿದ್ದಾರೆ. ಮಂಗಳೂರಿನ ಇನ್ಫೋಸಿಸ್‌ನಲ್ಲಿ ಉದ್ಯೋಗದಲ್ಲಿರುವ ಆಶಿತಾ ಅವರು 20 ವರ್ಷಗಳಿಂದ ಈ ಸಂಗ್ರಹ ಕಾರ್ಯದಲ್ಲಿ ನಿರತರಾಗಿರುವುದಾಗಿ ‘ವಿಜಯವಾಣಿ’ಗೆ ತಿಳಿಸಿದರು.
2 ಸಾವಿರ ವರ್ಷದ ಚಿನ್ನದ ನಾಣ್ಯ!ಕರಾವಳಿಯ ಮೊದಲ ಅರಸು ಮನೆತನವಾದ ಅಳುಪ ರಾಜ ವಂಶಸ್ಥರ ಕಾಲದಲ್ಲಿ ಬಳಕೆಯಲ್ಲಿದ್ದ ಚಿನ್ನದ ನಾಣ್ಯ ಗಮನ ಸೆಳೆದಿದೆ. ಈ ನಾಣ್ಯವು 2 ಸಾವಿರ ವರ್ಷದ ಹಿಂದಿನದ್ದಾಗಿದೆ. ಗಂಗ, ಕದಂಬ, ಬನವಾಸಿ, ಕೆಳದಿ, ವಿಜಯನಗರ ಸಾಮ್ರಾಜ್ಯ ಕಾಲದ ಚಿನ್ನ, ಬೆಳ್ಳಿ, ತಾಮ್ರದ ನಾಣ್ಯಗಳನ್ನು ವೀಕ್ಷಿಸಬಹುದಾಗಿದೆ. ಜತೆಗೆ ಭಾರತವೂ ಸೇರಿದಂತೆ ವಿಶ್ವದ 160 ದೇಶಗಳಿಗೆ ಸೇರಿದ ಕರೆನ್ಸಿಗಳನ್ನು (ನೋಟು) ವೀಕ್ಷಿಸಬಹುದಾಗಿದೆ.
ಕರಾವಳಿ ಭಾಗದಲ್ಲಿ ದೊರೆತಿರುವ ಹಳೆಯ ಹಾಗೂ ಐತಿಹಾಸಿಕ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿರುವ ಈ ಅಪರೂಪದ ಸಾಮಗ್ರಿಗಳನ್ನು ಸಂರಕ್ಷಿಸಲು ಮನೆಯನ್ನೇ ಮ್ಯೂಸಿಯಂ ಆಗಿ ಪರಿವರ್ತಿಸುವ ಚಿಂತನೆ ಇದೆ. ಮುಂದಿನ ಪೀಳಿಗೆಗೆ ತುಳುನಾಡ ಸಂಸ್ಕೃತಿ ಪರಿಚಯಿಸಲು ಈ ಸಂಗ್ರಹ ಕಾರ್ಯದಲ್ಲಿ ನಿರತರಾಗಿದ್ದೇವೆ.– ಪ್ರೊ. ಸುಧಾಕರ್ ಶೆಟ್ಟಿ ದಂಪತಿ, ಕಾರ್ಕಳ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
