ಬೆಂಗಳೂರು: ಪರಿಸರ ವಾದಿಗಳು, ವನ್ಯಜೀವಿ ಕಾರ್ಯಕರ್ತರ ವಿರೋಧದ ಕಾರಣಕ್ಕೆ ಹಿಂದೆ ಸರಿದಿದ್ದ ರಾಜ್ಯ ವನ್ಯಜೀವಿ ಮಂಡಳಿ, ಕೆಲವೇ ದಿನಗಳ ಅಂತರದಲ್ಲಿ ಉಲ್ಟಾ ಹೊಡೆದಿದೆ. ಅಲ್ಲದೆ, ಕರೊನಾ ಗದ್ದಲದ ಮಧ್ಯೆ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದ ಯೋಜನೆಗೆ ಅಸ್ತು ಎಂದಿರುವುದು ಅಸಮಾಧಾನ ಸ್ಪೋಟಿಸಿದೆ.
ಇತ್ತೀಚಿನ ನೆರೆ ಅನಾಹುತದಿಂದ ಸರ್ಕಾರ ಪಾಠ ಕಲಿತಿಲ್ಲವೆಂದು ಪರಿಸರ ಹಾಗೂ ವನ್ಯಜೀವಿ ಕಾರ್ಯಕರ್ತರು ಕಿಡಿಕಾರಿದ್ದಾರೆ. ರಾಜ್ಯ ಮಂಡಳಿ ಒಪ್ಪಿಗೆ ನೀಡಿದ ಕೂಡಲೇ ಯೋಜನೆ ಅನುಷ್ಠಾನಕ್ಕೆ ಸುಗಮವೆಂದು ತಿಳಿಯಬೇಕಿಲ್ಲ. ಪರಿಸರ ಮತ್ತು ಅರಣ್ಯ ಇಲಾಖೆ ನಿರಾಕ್ಷೇಪಣಾಪತ್ರ ಪಡೆಯ ಬೇಕಿದೆ. ಪಶ್ಚಿಮಘಟ್ಟದ ಕಾಡಿಗೆ ಕೊಡಲಿ ಪೆಟ್ಟು ನೀಡುವುದು ಅಷ್ಟು ಸುಲಭವಲ್ಲ ಎಂದು ಆಶಾಭಾವ ವ್ಯಕ್ತಪಡಿಸುತ್ತಾರೆ.
ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ: ಮಾ.9ರ ಮಂಡಳಿ ಸಭೆಯಲ್ಲಿ ಸ್ವತಃ ಮುಖ್ಯ ಕಾರ್ಯದರ್ಶಿ ರೈಲು ಮಾರ್ಗ ಯೋಜನೆಯ ಮಹತ್ವ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದರು. ಸಿಎಂ ಬಿಎಸ್​ವೈ ಪರಿಸರ, ವನ್ಯಜೀವಿ ಕಾರ್ಯಕರ್ತರ ಕೂಗಿಗೆ ಓಗೊಟ್ಟು ಒಪ್ಪಿಗೆ ನೀಡಿರಲಿಲ್ಲ. ಈ ನಡುವೆ, ತೆರೆಮರೆ ಒತ್ತಡ ಹೆಚ್ಚಾಗಿದ್ದರಿಂದ ಮಾ.20ರ ಸಭೆಯಲ್ಲಿ 2,600 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಗೆ ಸಿಎಂ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸಚಿವರಾದ ಜಗದೀಶ ಶೆಟ್ಟರ್, ಶಿವರಾಮ ಹೆಬ್ಬಾರ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಸಹಿತ ಉತ್ತರ ಕರ್ನಾಟಕ ಭಾಗದ ಹಲವು ಜನಪ್ರತಿನಿಧಿಗಳ ಒತ್ತಡದಿಂದಾಗಿ ಸಿಎಂ ಮನಸ್ಸು ಬದಲಿಸಿದ್ದಾರೆ. ಮಂಡಳಿ ಸದಸ್ಯರಾದ ಸಂಜಯ್ ಗುಬ್ಬಿ, ಡಾ.ಶಿವಪ್ರಸಾದ್, ಮಲ್ಲೇಶಪ್ಪ ವಿರೋಧದ ಮಧ್ಯೆ ಸಮ್ಮತಿಸಿದ್ದು, ದ್ವಂದ್ವ ಧೋರಣೆ ಖಂಡಿತ ಸರಿಯಲ್ಲವೆಂಬ ಆಕ್ಷೇಪ ವ್ಯಕ್ತವಾಗಿದೆ.
ಮಂಡಳಿ ಸದಸ್ಯತ್ವಕ್ಕೆ ರಾಜೀನಾಮೆ
ಯೋಜನೆಗೆ ಅನುಮತಿ ನೀಡಿಕೆ ಖಂಡಿಸಿ ವನ್ಯಜೀವಿ ಮಂಡಳಿ ಸದಸ್ಯತ್ವಕ್ಕೆ ಶಾಸಕಿ ಸೌಮ್ಯಾ ರೆಡ್ಡಿ ರಾಜೀನಾಮೆ ಸಲ್ಲಿಸಿದ್ದಾರೆ. ಸಿಎಂ ಹಾಗೂ ಅರಣ್ಯ ಸಚಿವರಿಗೆ ಈ ಕುರಿತು ಪತ್ರ ಬರೆದಿದ್ದು, ಯೋಜನೆ ಜಾರಿ ಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳಿಗೆ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದ್ದಾರೆ.
VIDEO: ತುಮಕೂರು ರೈಲ್ವೆ ನಿಲ್ದಾಣದಲ್ಲಿ ಬೇಕಾಬಿಟ್ಟಿ ಥರ್ಮಲ್​ ಸ್ಕ್ಯಾನಿಂಗ್​ ಮಾಡಿದ ಹಿರಿಯ ಆರೋಗ್ಯ ಸಹಾಯಕ ಅಮಾನತು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 19 =
Remember me
