ಮಂಗಳೂರು:ಸರ್ಕಾರಿ ಅಧಿಕಾರಿಯೊಬ್ಬರು ವೃದ್ಧ ಮಾವನಿಗೆ  ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕುಲಶೇಖರದಲ್ಲಿ ನಡೆದಿದೆ.
87 ವರ್ಷದ ಪದ್ಮನಾಭ ಸುವರ್ಣ ಅವರು ಸೊಸೆಯಿಂದ ಹಲ್ಲೆಗೊಳಗಾದ ಮಾವ. ಆರೋಪಿ ಸೊಸೆಯನ್ನು ಉಮಾಶಂಕರಿ ಎಂದು ಗುರುತಿಸಲಾಗಿದ್ದು, ಈಕೆ ಮಂಗಳೂರಿನ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿದ್ದಾಳೆ.
ನಡೆದಿದ್ದೇನು?:ಮಾರ್ಚ್ 9 ರಂದು ಮಾವನಿಗೆ ವಾಕ್ ಸ್ಟಿಕ್ ನಲ್ಲಿ ಸೊಸೆ ಮನಬಂದಂತೆ ಥಳಿಸಿದ್ದಾಳೆ. ಮಾವ ಕೈಮುಗಿದು ಬೇಡಿಕೊಂಡರೂ ಬಿಡದೇ ಥಳಿಸಿದ್ದಾಳೆ. ಈ ಪರಿಣಾಮ ವೃದ್ಧನ ಕೈ, ಮುಖಕ್ಕೆ ಗಾಯಗಳಾಗಿವೆ. ಉಮಾಶಂಕರಿ ಪತಿ ವಿದೇಶದಲ್ಲಿ ಉದ್ಯೋಗಲ್ಲಿದ್ದಾರೆ. ಪತಿ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ.
ಮಹಿಳೆ ಯಾವ ಕಾರಣಕ್ಕೆ ಸೊಸೆ ಮಾವನಿಗೆ ಹೊಡೆದಿದ್ದಾಳೆ ಅನ್ನೋ ವಿಚಾರ ತಿಳಿದುಬಂದಿಲ್ಲ. ಗಾಯಾಳು ಪದ್ಮನಾಭ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತ ತಂದೆಗೆ ಥಳಿಸಿದ ಉಮಾ ಶಂಕರಿ ವಿರುದ್ಧ ಸಿಸಿಟಿವಿ ದೃಶ್ಯ ಆಧರಿಸಿ ಪದ್ಮನಾಭ ಸುವರ್ಣರ ಮಗಳು ಪ್ರಿಯಾ ಸುವರ್ಣ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕೊತ್ತಂಬರಿ ಸೊಪ್ಪು ಮಾರುತ್ತಿದ್ದವ ಇಂದು ಸ್ಟಾರ್​ ನಟ; ಬಹು ಬೇಡಿಕೆಯ ಹೀರೋ ಯಾರು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
