ಬೆಂಗಳೂರು:ಸಂಸ್ಕೃತಿ ಸೆಂಟರ್ ಫಾರ್ ಕಲ್ಚರಲ್ ಎಕ್ಸಲೆನ್ಸ್ ವತಿಯಿಂದ ‘ಆದ್ಯ ಪೂಜ್ಯ’ ಎಂಬ ವಿನೂತನ ಕಾರ್ಯಕ್ರಮವನ್ನು ಇತ್ತೀಚೆಗೆ ಲಂಡನ್‌ನ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಲಾಗಿತ್ತು.
ಮುದ್ಗಲ ಪುರಾಣದ ಗಣೇಶಾವತಾರ ಸ್ತ್ರೋತ್ರದ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ, ಒಂದೇ ವೇದಿಕೆಯಲ್ಲಿ ಪ್ರದರ್ಶನಕಲೆಗಳಾದ ಭರತನಾಟ್ಯ, ಒಡಿಸ್ಸಿ, ಮೋಹಿನಿಯಾಟ್ಟಂ, ಕೂಚಿಪುಡಿ, ಕಾವಾಡಿಗಳ ವಿವಿಧ ನೃತ್ಯ ಶೈಲಿಗಳ ಮೂಲಕ ಕಥೆಯನ್ನು ಪ್ರಸ್ತುತಪಡಿಸಲಾಯಿತು.
ದಕ್ಷಿಣ ಭಾರತದ ಸಮರ ಕಲೆಯಾದ ಕಲರಿಪಟ್ಟು ಪ್ರದರ್ಶನ ನೆರೆದಿದ್ದವರನ್ನು ರೋಮಾಂಚನಗೊಳಿಸಿತು. 38 ಯುವ ಮತ್ತು ವೃತ್ತಿಪರ ಕಲಾವಿದರು ತಮ್ಮ ನೃತ್ಯ ಮತ್ತು ಸಂಗೀತ ಪ್ರಸ್ತುತಿಪಡಿಸಿದರು.
ಡಾ ನಂದಕುಮಾರ, ಡಾ ರಿಷಿ ಹಂಡಾ, ಬರಹಗಾರ ತೇಜೇಂದ್ರ ಶರ್ಮಾ, ಕಾರ್ತಿಕ್ ಬೊಂಕೂರ್ ಮತ್ತು ಶರದ್ ಝಾ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಖ್ಯಾತ ಕಲಾವಿದ ಪ್ರಮೋದ್, ಪ್ರಸನ್ನ ಕುಮಾರ್ ರುದ್ರಪಟ್ಟಣ ಮೃದಂಗ ಹಾಗೂ ಸತೀಶ್ ಗುಮ್ಮಡವೆಲ್ಲಿ ವೀಣಾ ವಾದನ ಪ್ರಸ್ತುತ ಪಡಿಸಿದರು.
ವಕ್ರತುಂಡ, ಧೂಮ್ರವರ್ಣ, ವಿಕಟ, ವಿಘ್ನರಾಜ, ಲಂಬೋದರ, ಮಹೋದರ ಇತ್ಯಾದಿ ಗಣೇಶನ ವಿವಿಧ ಅವತಾರಗಳಲ್ಲಿ ಮತ್ಸರಾಸುರ, ಮದಾಸುರ, ಕ್ರೋಧಾಸುರ, ಲೋಭಾಸುರ, ಅಹಂಕಾರಾಸುರ, ಮೋಹಾಸುರ ಮೊದಲಾದ ರಾಕ್ಷಸರ ಕಥೆಗಳನ್ನು ವಿವರಿಸಲಾಯಿತು.
ಸಂಸ್ಕೃತಿ ಕೇಂದ್ರದ ಸಂಸ್ಥಾಪಕಿ ರಾಗಸುಧಾ ವಿಂಜಮುರಿ, ಮೈಸೂರಿನ ಸುಶೀಲ್ ರಾಪಟ್ವಾರ್ ಮತ್ತು ರಾಧಿಕಾ ಜೋಶಿ ಕಾರ್ಯಕ್ರಮವನ್ನು ರೂಪಿಸಿದ್ದು, ಫಣಿ ನಾರಾಯಣ ಸಂಗೀತ ಸಂಯೋಜಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 18 =
Remember me
