ಮಂಗಳೂರು:ಮೂಡುಬಿದರೆಯ ಆಳ್ವಾಸ್ ಕಾಲೇಜ್ ಕ್ಯಾಂಪಸ್​ನಲ್ಲಿ ಆಯೋಜಿತ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಮೀಸೆ ಹೊತ್ತ ಇಬ್ಬರು ವಯೋವೃದ್ಧ ಗಂಡಸರಿಗೆ ಎಲ್ಲಿಲ್ಲದ ಡಿಮ್ಯಾಂಡು. ಅಷ್ಟೇ ಅಲ್ಲ, ಇವರೊಂದಿಗೆ ಕಟ್ಟುಮಸ್ತಾದ ಒಂಭತ್ತು ತರುಣರೂ ಗಮನ ಸೆಳೆಯುತ್ತಿದ್ದಾರೆ.
ಕೇವಲ ಮೀಸೆ ಹೊತ್ತಿದ್ದಾರೆ ಎಂಬ ಕಾರಣಕ್ಕೆ ಈ ಇಬ್ಬರು ಗಂಡಸರು ಆಕರ್ಷಣೆಯ ಕೇಂದ್ರಬಿಂದುಗಳಾಗಿಲ್ಲ. ತಾವು ಹೊತ್ತ ಮೀಸೆಯಿಂದ ಇವರು 40 ಮತ್ತು 45 ಕೆ.ಜಿ. ತೂಕದ ಚಕ್ಕಡಿಕಲ್ಲು ಎತ್ತುವ ಸಾಹಸ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಿಜಾಪುರದ 65 ವರ್ಷ ವಯೋಮಾನದ ಶಂಕರಪ್ಪ ಮತ್ತು ದಿಗಂಬರಪ್ಪ ಎನ್ನುವವರಿಂದ ಈ ಸಾಹಸ ಪ್ರದರ್ಶಿತವಾಗಿದೆ.
ಮೊದಲು ವೀಕ್ಷಕರೆಲ್ಲರ ಸಮ್ಮುಖದಲ್ಲಿ ಚಕ್ಕಡಿಕಲ್ಲಿಗೆ ಹಗ್ಗವನ್ನು ಕಟ್ಟಲಾಗುತ್ತದೆ. ನಂತರ ಆ ಹಗ್ಗವನ್ನು ಮೀಸೆಗೆ ಜೋಡಿಸಲಾಗುತ್ತದೆ. ತಕ್ಷಣ ಎರಡು ನಿಮಿಷಗಳೊಳಗೆ ಚಕ್ಕಡಿಕಲ್ಲನ್ನು ವೃದ್ಧರಿಬ್ಬರ ಎತ್ತುತ್ತಾರೆ. ಉಳಿದ ಒಂಭತ್ತು ತರುಣರು ಬಾಯಿಂದ 120 ಕೆ.ಜಿ ತೂಕವನ್ನು ಹಾರೆಯ ಮೂಲಕ ಎತ್ತುತ್ತಾರೆ.
ಮಜಬೂತಾದ ಮೀಸೆಯ ಗುಟ್ಟು ಕೊಬ್ಬರಿ ಎಣ್ಣೆ!ನಮ್ಮ ಈ ಸಾಹಸ ಪ್ರದರ್ಶನಕ್ಕೆ ಪೂರ್ವ ತಯಾರಿ ಬೇಕಾಗುತ್ತದೆ. ಯಾವುದೇ ದುಶ್ಚಟಕ್ಕೆ ಗುರಿಯಾಗದೇ ಸರಿಯಾದ ಕ್ರಮದಲ್ಲಿ ಅಭ್ಯಾಸವೂ ಅವಶ್ಯಕ. ಪ್ರತಿನಿತ್ಯ ಮೀಸೆಗಳಿಗೆ ಕೊಬ್ಬರಿ ಎಣ್ಣೆ ಹಚ್ಚುವುದೇ ಈ ಸಾಹಸಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ಮೀಸೆ ಮೂಲಕ ಕಲ್ಲು ಎತ್ತಿದ ದಿಗಂಬರಪ್ಪ.
ಬಿಜಾಪುರ ಮೂಲದ ರಮೇಶ್ ದಾನಪ್ಪ ಪಾಟೀಲ್ ಹಾಗು 14 ವರ್ಷದ ಹುಡುಗ 122 ಕೆಜಿಯ ಭತ್ತದ ಚೀಲವನ್ನು ಬೆನ್ನ ಮೇಲೆ ಹೊತ್ತುಕೊಳ್ಳುವ ದೃಶ್ಯವನ್ನು ಎಲ್ಲರೂ ಕುತೂಹಲದಿಂದ ನೋಡಿದ್ದಾರೆ. ದಾನೇಶ್ವರಿ ಹೆಸರಿನ ತಂಡ ಈ ಸಾಹಸವನ್ನು ಸಾರ್ವಜನಿಕರ ಮುಂದೆ ಪ್ರದರ್ಶಿಸುತ್ತಿದೆ. ಮುನ್ನಾ ಪೂಜಾರಿ, ಬೀರಪ್ಪ ಪೂಜಾರಿ, ಸಂಜಯಕುಮಾರ್ ಸಿದ್ಧಪ್ಪ, ಗೋಪಾಲ್ ಶಿವಪ್ಪ ನಾಯ್ಕೋಡಿ ಮತ್ತಿತರರು ಈ ತಂಡದ ಮೂಲಕ ಸಾಹಸ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
ಈ ತಂಡದ ಸದಸ್ಯರು ಮೂಲತಃ ರೈತರು. ಬಿಡುವಿನ ಸಮಯದಲ್ಲಿ ಕಾರ್ಯಕ್ರಮಗಳಿಗೆ ತೆರಳಿ ಅವರ ಕೌಶಲ್ಯವನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಗುಂಡು ಕಲ್ಲು, ಚಕ್ಕಡಿ ಕಲ್ಲು, ಭತ್ತದ ಮೂಟೆ ಹೀಗೆ ವಿಭಿನ್ನ ರೀತಿಯ ಭಾರದ ಕಲ್ಲುಗಳನ್ನು ಜನರ ಮುಂದೆ ಎತ್ತಿ ಎಲ್ಲರನ್ನು ಆಕರ್ಷಿಸುತ್ತಿದ್ದಾರೆ. ಇದೇ ಸಮಯದಲ್ಲಿ ಯುವಕ ಯುವತಿಯರು ಮೀಸೆ ನೋಡಿ ಆಕರ್ಷಿತರಾಗಿ ಮೀಸೆಗೆ ಜೋತು ಬಿದ್ದು ಫೋಟೋಗಳನ್ನು ತೆಗೆದುಕೊಳ್ಳುತಿದ್ದಾರೆ.
ಚಿತ್ರ&ವರದಿ: ಐಶ್ವರ್ಯ ಕೋಣನಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 14 =
Remember me
