ವಿಜಯನಗರ:ಸಚಿವ ಆನಂಸ್​​ ಸಿಂಗ್ ಅವರಿಗೆ ಉಸ್ತುವಾರಿ ಬದಲಾವಣೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಅಭಿಮಾನಿಗಳ ಆಕ್ರೋಶ ಇನ್ನೂ ಕಡಿಮೆಯಾಗಿಲ್ಲ. ಇಂದೂ ಸಹ ಸಿಂಗ್ ಅಭಿಮಾನಿಗಳು ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.
ಪುನೀತ್ ರಾಜಕುಮಾರ್ ಸರ್ಕಲ್​ನಲ್ಲಿ ಸೇರಿದ ಅಭಿಮಾನಿಗಳು, ನೂತನ ವಿಜಯನಗರ ಜಿಲ್ಲೆಯ ಅಭಿವೃದ್ಧಿಗಾಗಿ ಆನಂದ ಸಿಂಗ್ ಅವರಿಗೆ ಉಸ್ತುವಾರಿ ನೀಡಲೇಬೇಕು. ನೀಡದೇ ಇದ್ರೆ ಪ್ರತಿಭಟನೆ ಮುಂದುವರೆಯುತ್ತದೆ ಅಗತ್ಯ‌ಬಿದ್ರೆ ಹೊಸಪೇಟೆ ಬಂದ್ ಸಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ರು.
ರಾಜಕೀಯ ದಾಳಕ್ಕೆ ಆನಂದ ಸಿಂಗ್ ಅವರನ್ನು ದುರ್ಬಳಕೆ ಮಾಡಬೇಡಿ. ಹೊಸ ಜಿಲ್ಲೆಯಾದ ಬಳಿಕ‌ ಮೊದಲ ಗಣರಾಜ್ಯೋತ್ಸವದ ಧ್ವಜಾರೋಹಣ ಮಾಡೋದನ್ನು ತಪ್ಪಿಸಿದ್ದಾರೆ. ಕ್ಷೇತ್ರದ ಮತ್ತು ಹೊಸ ಜಿಲ್ಲೆಯ ಅಭಿವೃದ್ಧಿಗೆ ಆನಂದ ಸಿಂಗ್ ಅವರಿಗೆ ವಿಜಯನಗರ ಉಸ್ತುವಾರಿ ನೀಡಬೇಕೆಂದು ಆಗ್ರಹಿಸಿದ್ರು. ಈ ಬಾರಿಯ ಗಣರಾಜ್ಯೋತ್ಸವದ ಧ್ವಜಾರೋಹಣ ಆನಂದ್ ಸಿಂಗ್ ಮಾಡಬೇಕು. ಇಲ್ಲವಾದರೆ ನಾವು ಕರಾಳದಿನ ಆಚರಣೆ ಮಾಡುತ್ತೇವೆ ಅಂತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಸಹ ಹಾಕಿದ್ದಾರೆ.
ನಿನ್ನೆ ಟೈರ್​ಗೆ ಬೆಂಕಿಹಚ್ಚಿ ಪ್ರತಿಭಟನೆ ಮಾಡಿದ ವೇಳೆ ಆನಂದ ಸಿಂಗ್ ಅವರು ಸ್ವತಃ ಬಂದು ಪ್ರತಿಭಟನೆ ತಡೆದಿದ್ರು. ನಿನ್ನೆ ಕರೊನಾ ನಿಯಮ ಮೀರಿ ಪ್ರತಿಭಟನೆ ಮಾಡಿದ ಹಲವರ ವಿರುದ್ಧ ಹೊಸಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
6 ಬಾರಿ ಗೆದ್ದರೂ ನನಗೇಕೆ ಮಂತ್ರಿ ಸ್ಥಾನ ಸಿಗ್ತಿಲ್ಲ? ಮನಸ್ಸಿಗೆ ತುಂಬಾ ನೋವಾಗ್ತಿದೆ: ಬಿಜೆಪಿ ಶಾಸಕ ತಿಪ್ಪಾರೆಡ್ಡಿ

ವಿರಾಟ್​ ಕೊಹ್ಲಿಯ ವೈಯಕ್ತಿಕ ಜೀವನ ಕೆದಕಿದ ಶೋಯೆಬ್​ ಅಖ್ತರ್​ ವಿರುದ್ಧ ವಿರುಷ್ಕಾ ಅಭಿಮಾನಿಗಳ ಆಕ್ರೋಶ

ಜಾಲಪ್ಪ ಸ್ಥಾಪಿಸಿದ್ದ ಟ್ರಸ್ಟ್​ನಲ್ಲಿ ಬಿರುಕು: ಅಪ್ಪನ ಬಳಿಕ ನಾನೇ ಅಧಿಪತಿ ಎಂದ ಹಿರಿಯ ಪುತ್ರ! ತನಿಖೆಗೆ ಆಗ್ರಹಿಸುತ್ತಲೇ ಸಿಡಿದೆದ್ದ ಮೊಮ್ಮಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 8 =
Remember me
