ಬೆಂಗಳೂರು:ರಾಜಕೀಯ ಕ್ಷೇತ್ರದಲ್ಲಿ ಅಪಾರ ಜನಮನ್ನಣೆ ಗಳಿಸಿದ್ದ ಕೇಂದ್ರ ಮಾಜಿ ಸಚಿವ ದಿ.ಅನಂತಕುಮಾರ್​ಗೆ ಪ್ರಧಾನಿ ಆಗುವ ಅರ್ಹತೆ ಇತ್ತು ಎಂದು ಲೇಖಕ ಬಾಬು ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಅನಂತಕುಮಾರ್​ ಪ್ರತಿಷ್ಠಾನ, ಗವಿಪುರದ ಅದಮ್ಯ ಚೇತನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಕೇಂದ್ರ ಮಾಜಿ ಸಚಿವ ದಿ.ಅನಂತಕುಮಾರ್​’ ಅವರ ಜೀವನ, ಧೋರಣೆ, ಆಶಯ ಒಳಗೊಂಡ “ಅನಂತಪಥ’-50 ಸುವರ್ಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ದೇಶ, ಧರ್ಮ, ಪರಂಪರೆಯಲ್ಲಿ ಅಪಾರ ಶ್ರದ್ಧೆ ಬೆಳೆಸಿಕೊಂಡಿದ್ದರು.ರಾಜಕೀಯದಲ್ಲಿ ಚಾಣಾಕ್ಯ ನೀತಿ ಬಲ್ಲವರಾಗಿದ್ದರು. 50 ವರ್ಷದೊಳಗೆ ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಜೀವನದಲ್ಲಿ ನಿಜವಾದ ಹೀರೋ ಆಗಿದ್ದ ಇವರು ಪ್ರಧಾನಿಯಾಗುವ ಅರ್ಹತೆ ಹೊಂದಿದ್ದರು.ರಾಜಕೀಯ ಮಾತ್ರವಲ್ಲದೆ ಅನ್ನ, ಅಕ್ಷರ, ಪರಿಸರ ಕಲ್ಪನೆಯೊಂದಿಗೆ ಸಮಾಜ ಸೇವೆಯಲ್ಲೂ ತೊಡಗಿದ್ದರು. ಅನಂತಕುಮಾರ್​ ಅವರ ಅಪೂರ್ಣ ಕೆಲಸವನ್ನು ಪತ್ನಿ ತೇಜಸ್ವಿನಿ ಅನಂತಕುಮಾರ್​, ವ್ರತದಂತೆ ಪೂರ್ಣಗೊಳಿಸುವಲ್ಲಿ ಶ್ರಮಿಸುತ್ತಿದ್ದಾರೆ.
ಅನಂತಪಥದ ಮೂಲಕ ಹಲವು ಗಣ್ಯರನ್ನು ಪರಿಚಯಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಅನಂತಪಥ ಪತ್ರಿಕೆ ಸಂಪಾದಕ ಟಿ.ಎಸ್​.ಗೋಪಾಲ್​, ಮಾಜಿ ಸಂಸದ ಪ್ರತಾಪ್​ ಸಿಂಹ ಮತ್ತಿತರರಿದ್ದರು.
ಸಿಐಡಿಗೆ ಬಾಗಲಕೋಟೆ ಐಡಿಬಿಐ ಬ್ಯಾಂಕ್ ಹಗರಣ !
ರಾಜಕೀಯ ಮೌಲ್ಯ ಕುಸಿತ“ರಾಜಕೀಯ ಎಂಬುದು ಇತ್ತೀಚೆಗೆ ಕ್ಲೀಷೆಯಾಗುತ್ತಿದೆ. ಇಂದಿನ ಚರ್ಚೆ, ಟೀಕೆ ನೋಡಿದರೆ ನಮ್ಮ ಸಮಾಜ ಯಾವ ಮಟ್ಟಕ್ಕೆ ತಲುಪಿದೆ ಎಂದು ತುಂವ ನೋವಾಗುತ್ತದೆ ಎಂದು ಅನಂತಕುಮಾರ್​ ಪ್ರತಿಷ್ಠಾನ ಅಧ್ಯಕ್ಷ ಪ್ರೊ.ಪಿ.ವಿ.ಕೃಷ್ಣಭಟ್ಟ ಬೇಸರ ವ್ಯಕ್ತಪಡಿಸಿದರು.ದೇಶದ ಪ್ರಗತಿಯಲ್ಲಿ ರಾಜಕೀಯ ಪಾತ್ರ ಮಹತ್ತರವಾದುದು. ಆದರೆ, ಇಂದಿನ ದಿನಮಾನಗಳಲ್ಲಿ ರಾಜಕೀಯ ತೀರಾ ಹೊಲಸು ಕ್ಷೇತ್ರವಾಗಿದೆ. ಇದನ್ನು ಸರಿದಾರಿಗೆ ತರುವಲ್ಲಿ ಯುವ ನೇತಾರರ ಅಗತ್ಯವಿದೆ.ಒಳ್ಳೆಯ ನಾಯಕತ್ವ ಗುಣಗಳುಳ್ಳ ವ್ಯಕ್ತಿಗಳು ಮತ್ತೆ ರಾಜಕೀಯ ಪ್ರವೇಶಿಸುತ್ತಾರೆ ಎಂಬ ಆಶಾಭಾವ ಹೊಂದಿರಬೇಕು. ಅನಂತಕುಮಾರ್​ ಅವರಂತಹ ಮಾದರಿ ವ್ಯಕ್ತಿಗಳು ರಾಜಕೀಯ ಪ್ರವೇಶಿಸಬೇಕು ಎಂದು ಕರೆ ನೀಡಿದರು.
ಬದುಕಿನ ಯಶಸ್ಸಿಗೆ ವ್ಯಕ್ತಿತ್ವ, ಕರ್ತೃತ್ವ, ನೇತೃತ್ವಗಳನ್ನು ಬೆಳೆಸಿಕೊಳ್ಳಲು ಆದರ್ಶ ಮಾರ್ಗ ತೋರಿದ ಅನಂತಕುಮಾರ್​ ಅವರ ಜೀವನ, ಆಶಯ ಬಿಂಬಿಸುವ ಲೇಖನಗಳು “ಅನಂತಪಥ’ದಲ್ಲಿ ಪ್ರಕಟವಾಗುತ್ತಿದೆ. ಇದೊಂದು ವಿಶೇಷ ಮಾಸಪತ್ರಿಕೆಯಾಗಿದೆ. ಅನಂತಕುಮಾರ್​ ಅವರ ಪ್ರಮುಖ ಸಮಾಜಮುಖಿ ಧ್ಯೇಯವಾದ ಅನ್ನ, ಅಕ್ಷರ, ಆರೋಗ್ಯ, ಪ್ರಕೃತಿ ಮತ್ತು ಸಂಸತಿಗಳ ಮಹತ್ವವನ್ನು ಪ್ರತಿಪಾದಿಸುವ ಬರಹಗಳಿವೆ.ಶ್ರೀದಲ್ಲೇ ಇಂಗ್ಲಿಷ್​ ಆವೃತಿಯನ್ನು ಹೊರ ತರಲಾಗುವುದು.| ತೇಜಸ್ವಿನಿ ಅನಂತಕುಮಾರ್​. ಸಹ ಸಂಸ್ಥಾಪಕಿ, ಅದಮ್ಯ ಚೇತನ ಫೌಂಡೇಷನ್​.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
