ಬೆಂಗಳೂರು:ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪನವರ ‘ಯಾನ’ ಕಾದಂಬರಿ ಸಿನಿಮಾ ಆಗಬೇಕು ಎನ್ನುವುದು ನನ್ನಾಸೆ. ಅದು ಫಿಲಾಸಫಿಕಲ್, ಮೆಟಾಫಿಸಿಕಲ್ ಮಾತ್ರವಲ್ಲ, ಆದರಾಚೆಗಿನ ವಿಷಯಗಳಿರುವ ಕಥೆ. ಆ ಪ್ರಕಾರದ ಕಾದಂಬರಿಯನ್ನು ಜಗತ್ತಿನಲ್ಲೇ ಯಾರೂ ಬರೆದಿಲ್ಲ. ಅಂಥ ಚಿತ್ರ, ಅಂತ ಪಾತ್ರದಲ್ಲಿ ಮಾಡಬೇಕೆಂಬುದು ನನ್ನ ಜೀವಮಾನದ ಕನಸು ಎಂದು ನಟ ಅನಂತ ನಾಗ್ ಹೇಳಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸಾರ್ಥಕ 50 ವರ್ಷಗಳನ್ನು ಪೂರೈಸಿರುವ ಚಿರ ಯುವಕ, ಸಹಜ ನಟ ಅನಂತನಾಗ್ ಸೋಮವಾರ 76ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಚಂದನವನದಲ್ಲಿ 50 ವರ್ಷ, ಜೀವನದಲ್ಲಿ 75 ವರ್ಷ ಪೂರ್ಣಗೊಳಿಸಿದ ಸಂಭ್ರಮವನ್ನು ವಿಶೇಷವಾಗಿಸುವ ನಿಟ್ಟಿನಲ್ಲಿ ವಿಜಯವಾಣಿ ಕಚೇರಿಯಲ್ಲಿ ಆಯೋಜಿಸಿದ್ದ ವಿಶೇಷ ಸಂವಾದದಲ್ಲಿ ಪತ್ನಿ ಗಾಯತ್ರಿ ಅವರ ಜತೆ ಪಾಲ್ಗೊಂಡಿದ್ದ ಅನಂತ ನಾಗ್, ತಮ್ಮ ಚಿತ್ರ ಹಾಗೂ ಜೀವನದ ಮರೆಯಲಾಗದ ಮತ್ತು ಯಾರೂ ತಿಳಿಯದ ಅನೇಕ ಅಪರೂಪದ ಸಂಗತಿಗಳನ್ನು ಹಂಚಿಕೊಂಡರು.
ಯಾನ ಅದ್ಭುತ ಕಾದಂಬರಿ:ಪದ್ಮಭೂಷಣ ಎಸ್.ಎಲ್. ಭೈರಪ್ಪನವರ ‘ಯಾನ’ ಅದ್ಭುತ ಕಾದಂಬರಿ. ಅದು ಯೋಚನೆಯ ಪರಿಧಿಯಾಚೆಗಿನ ಕಥೆ. ನಾನು ಭೂಮಿ ಮೇಲಿದ್ದೇನೆ, ಹೀಗಾಗಿ ಇಲ್ಲಿನಂತೆ ಯೋಚಿಸುತ್ತೇನೆ. ಗುರುತ್ವಾಕರ್ಷಣೆಯಿಂದ ಹೊರಗೆ ಹೋಗಿ, ಬೇರೆ ಜಗತ್ತಿನಲ್ಲಿ ಇದೇ ರೀತಿ ಯೋಚಿಸಲು ಸಾಧ್ಯವಾ? ಈ ಲೋಕದಲ್ಲಿನ ಮೌಲ್ಯಗಳು, ಈ ಲೋಕದ ಪಾಪ, ಪುಣ್ಯಗಳು ಬೇರೆ ಲೋಕದಲ್ಲೂ ಪಾಪ, ಪುಣ್ಯ ಎನಿಸಿಕೊಳ್ಳುತ್ತವಾ? ‘ಯಾನ’ ಈ ರೀತಿಯ ಆಲೋಚನೆಗಳನ್ನು ಹುಟ್ಟುಹಾಕುತ್ತದೆ. ಅದರ ಬಗ್ಗೆ ಯಾರಾದರೂ ಸಿನಿಮಾ ಮಾಡಬೇಕು’ ಎಂದು ಅನಂತ್ ನಾಗ್ ತಮ್ಮ ಮನದಾಳ ಹಂಚಿಕೊಂಡರು.
ಉದ್ಯಮಿ ಮನೆ ಮೇಲೆ ಗುಂಡಿನ ದಾಳಿ, ಪುತ್ರ ಕೂದಲೆಳೆಯ ಅಂತರದಲ್ಲಿ ಪಾರು; ನಾಯಿಗಳಿಗೆ ಗುಂಡು ತಾಗಿ 1 ಶ್ವಾನ ಸಾವು

ಬಸ್​ನಲ್ಲಿನ ಚಿಲ್ಲರೆ ಸಮಸ್ಯೆಗೆ ಕಂಡಕ್ಟರ್ ಕೊರಳಲ್ಲೇ ಪರಿಹಾರ!; ಅಂತೂ ಜಾರಿಗೆ ಬಂತು ಹಳೇ ಬೇಡಿಕೆ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 − seven =
Remember me
