ಬೆಂಗಳೂರು:ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ”ರಾಬರ್ಟ್​” ರಿಲೀಸ್​ಗೆ ಚಿತ್ರತಂಡ ಸಜ್ಜಾಗಿದೆ. ಈ ನಡುವೆ ಕ್ಯಾತೆ ತೆಗೆದ ಟಾಲಿವುಡ್​ ವಿರುದ್ಧ ಗರಂ ಆಗಿರುವ ನಟ ದರ್ಶನ್​, ದೂರು ನೀಡಿದ್ದಾರೆ.
ಮಾರ್ಚ್​ 11ರಂದು ರಾಬರ್ಟ್​ ಸಿನಿಮಾ ರಿಲೀಸ್​ ನಿರ್ಮಾಪಕರು ಡೇಟ್​ ಫಿಕ್ಸ್​ ಮಾಡಿದ್ದಾರೆ. ಆದರೆ ಆ ದಿನ ಆಂಧ್ರದಲ್ಲಿ ರಾಬರ್ಟ್ ರಿಲೀಸ್​ಗೆ ಅಡ್ಡಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶುಕ್ರವಾರ ಸಭೆ ನಡೆಯುತ್ತಿದ್ದು, ನಟ ದರ್ಶನ್​, ರಾಬರ್ಟ್​ ಸಿನಿಮಾ ನಿರ್ದೇಶಕ ಉಮಾಪತಿ ಪಾಲ್ಗೊಂಡಿದ್ದರು.ಇದನ್ನೂ ಓದಿರಿಮೈಸೂರಿನಲ್ಲಿ ವೈದ್ಯ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ, ಆ ಮನೆಗೆ ದುಷ್ಕರ್ಮಿ ಬಂದಿದ್ದಾದರೂ ಏಕೆ?
ರಾಬರ್ಟ್​ ಸಿನಿಮಾ ಬಿಡುಗಡೆಯಾಗುವ ಸಮಯದಲ್ಲದೇ ತೆಲುಗಿನ “ಶ್ರೀಕಾರನ್”, “ಗಾಲಿ ಸಂಪತ್” ಹಾಗೂ “ಜಾಥಿ ರತ್ನಲು” ಚಿತ್ರಗಳು ಬಿಡುಗಡೆ ಆಗ್ತಿವೆ. ಹಾಗಾಗಿ ತೆಲುಗು ಚಿತ್ರಗಳಿಗೆ ತೊಂದರೆ ಆಗದಿರಲಿ ಎಂದು ರಾಬರ್ಟ್ ದಿನಾಂಕವನ್ನು ಮುಂದೂಡಿ ಎಂದು ರಾಬರ್ಟ್ ನಿರ್ಮಾಪಕರಿಗೆ ಆಂಧ್ರದ ಸಿನಿಮಾ ವಿತರಕರು ಸಲಹೆ ಕೊಟ್ಟಿದ್ದಾರೆ.
ರಾಬರ್ಟ್ ಕರ್ನಾಟಕದಲ್ಲಿ ಒಳ್ಳೆಯ ಓಪನಿಂಗ್ ಪಡೆದುಕೊಳ್ಳುತ್ತದೆ. ಆಂಧ್ರದಲ್ಲೂ ಹಾಗೇ ಆದ್ರೆ ತೆಲುಗು ಚಿತ್ರಗಳಿಗೆ ಸಮಸ್ಯೆ ಆಗುತ್ತೆ. ಹಾಗಾಗಿ ರಾಬರ್ಟ್​ ದಿನಾಂಕವನ್ನು ಒಂದು ವಾರ ಮುಂದೂಡಿ ಎಂಬ ಆಂಧ್ರದ ವಿತರಕರ ಸಲಹೆಗೆ ನಿರ್ಮಾಪಕ ಉಮಾಪತಿ ಗರಂ ಆಗಿದ್ದಾರೆ. ಈ ಸಂಬಂಧ ಟಾಲಿವುಡ್​ ವಿರುದ್ಧ ನಟ ದರ್ಶನ್​ ಫಿಲಂ ಚೇಂಬರ್​ಗೆ ದೂರು ನೀಡಿದ್ದಾರೆ. ಸದ್ಯ ಫಿಲಂ ಚೇಂಬರ್ ಸದಸ್ಯರ ಸಭೆ ನಡೆದಿದ್ದು, ಕಚೇರಿ ಹೊರಗೆ ಟಾಲಿವುಡ್​ ವಿರುದ್ಧ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು.ಇದನ್ನೂ ಓದಿರಿಅಂಚೆ ಕಚೇರಿಯಲ್ಲೂ ನಿಮ್ಮ ಹಣ ಸೇಫಲ್ಲ! ಬಡವರ ಹಣ ದೋಚುತ್ತಾರೆ ಖತರ್ನಾಕ್ ಅಧಿಕಾರಿಗಳು…
ಸಭೆಗೂ ಮುನ್ನ ಮಾತನಾಡಿದ ಉಮಾಪತಿ, ತೆಲುಗು ಚಿತ್ರಗಳ ಪರ ಅಲ್ಲಿನ ಫಿಲ್ಮ್ ಚೇಂಬರ್ ನಿಲ್ಲುತ್ತೆ. ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ ಅಂದುಕೊಂಡ ಡೇಟ್​ಗೆ ರಿಲೀಸ್ ಆಗುತ್ತವೆ. ನಮ್ಮ ವಾಣಿಜ್ಯ ಮಂಡಳಿಯೂ ನಮ್ಮ ಪರ ನಿಂತು ಮಾತನಾಡಬೇಕು. ಪರಭಾಷಾ ಚಿತ್ರಗಳ ವಿರುದ್ಧ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನ ಆಗ್ರಹಿಸಿದರು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದರ್ಶನ್​, ಕೇವಲ ನನ್ನ ಸಿನಿಮಾ ಮಾತ್ರವಲ್ಲ, ಹೊಸಬರ ಸಿನಿಮಾಗಳಿಗೂ ಇದೇ ಸಮಸ್ಯೆ ಎದುರಾಗಲಿದೆ. ನಮಗಾಗಿ ನಾನು ಬಂದಿಲ್ಲ, ನಮ್ಮಿಂದ ಮುಂದೆ ಎಲ್ಲರಿಗೂ ದಾರಿಯಾಗಲಿ. ಇದು ಒಂದು ಕೈಯಿಂದ ಚಪ್ಪಾಳೆ ತಟ್ಟಲು ಆಗೋದಿಲ್ಲ. ನಮ್ಮ ನಟರ ಸಿನಿಮಾಗಳಿಗೆ ಅಲ್ಲಿ ಬೆಲೆ ಇಲ್ಲ ಅಂದ್ರೆ ನಾವು ಅವರ ಸಿನಿಮಾಗಳಿಗ್ಯಾಕೆ ಬೆಲೆ ಕೊಡಬೇಕು? ಎಂದು ಪ್ರಶ್ನಿಸಿದರು. ವಾಣಿಜ್ಯ ಮಂಡಳಿಯ ಮೇಲೆ ನನಗೆ ನಂಬಿಕೆಯಿದೆ. ರಾಬರ್ಟ್ ಸಿನಿಮಾ ತೆಲುಗಿನಲ್ಲಿ ಅದೇ ಡೇಟ್​ಗೆ ರಿಲೀಸ್ ಆಗುತ್ತೆ ಎಂದರು.
ಕೊನೆಗೂ ಸಾವಿನ ಮನೆಯ ಕದ ತಟ್ಟಿದ ನಟಿ ಜಯಶ್ರೀ! ಕಳೆದ 7 ತಿಂಗಳಲ್ಲಿ ಆಕೆ ಅನುಭವಿಸಿದ್ದ ನರಕಯಾತನೆ ಇಲ್ಲಿದೆ…

ಪತ್ನಿಯನ್ನ ಜಾತ್ರೆಗೆ ಕಳಿಸಿ ಮನೆಗೆ ಬಂದವ ಪರಸ್ತ್ರೀ ಜತೆ ಹೆಣವಾದ! ಆ ಕೋಣೆಯಲ್ಲಿ ನಡೆದಿದ್ದೇನು?

ಬೆಣ್ಣೆಹೊಳೆ ಫಾಲ್ಸ್​ ಬಳಿ ಪ್ರೇಮಿಗಳಿಬ್ಬರ ಶವ ಸಿಕ್ಕ ಮರುದಿನವೇ ಪ್ರಿಯಕರನ ತಂದೆ ಸಾವು! ಮನಕಲಕುತ್ತೆ ಸಾವಿನ ಕಾರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 6 =
Remember me
