ಆನೇಕಲ್:ಒಂದು ಲೋಡ್ ಹೂ ತೆಗೆದುಕೊಂಡು ಹೋಗಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪರಿಗೆ ಉಡುಗೂರೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರು ಶಾಸಕ ಶಿವಣ್ಣರಿಗೆ ಸೂಚನೆ ನೀಡಿದರು.
ಆನೇಕಲ್​ನಲ್ಲಿ ರೈತರ ಜಮೀನುಗಳಿಗೆ ಡಿಕೆಶಿ ಹಾಗೂ ಸಂಸದ ಡಿ.ಕೆ. ಸುರೇಶ್​ ಭೇಟಿ ನೀಡಿ​ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಶಾಸಕ ಶಿವಣ್ಣ ಸಾಥ್​ ನೀಡಿದರು.
ಈ ವೇಳೆ ಮಾತನಾಡಿದ ಡಿಕೆಶಿ ಹೂದೋಟಗಳಲ್ಲಿ ಹೂಗಳು ನಿಂತಲೇ ನಿಂತಿವೆ. ಹೂ ಬೆಳೆದ ಬೆಳೆಗಾರರ ಬದುಕು ಅತಂತ್ರವಾಗಿದೆ. ತಕ್ಷಣವೇ ಜಿಲ್ಲಾ ಉಸ್ತುವಾರಿ ಮತ್ತು ತೋಟಗಾರಿಕೆ ಮಂತ್ರಿಗಳು ರೈತರ ತೋಟಗಳಿಗೆ ಭೇಟಿ ನೀಡುವಂತೆ ಡಿಕೆಶಿ ಸರ್ಕಾರವನ್ನು ಆಗ್ರಹಿಸಿದರು.
ನಷ್ಟವುಂಟಾದ ತೋಟಗಳಿಗೆ ಅಧಿಕಾರಿಗಳು ಭೇಟಿ ನೀಡಿ, ನಷ್ಟದ ಅಂದಾಜು ಮಾಡಿ ಪರಿಹಾರದ ಮೊತ್ತವನ್ನು ಸರ್ಕಾರ ಹೊರಡಿಸಬೇಕೆಂದು ಡಿ.ಕೆ.ಸುರೇಶ್ ಆಗ್ರಹಿಸಿದರು.
ಶಾಸಕ ಶಿವಣ್ಣ ಮಾರುಕಟ್ಟೆಯ ದರದಲ್ಲಿ ರೈತರ ಜಮೀನಿನಿಂದ ತರಕಾರಿ ಖರೀದಿ ಮಾಡಿದ್ದ. ಆದರೆ, ಹೂ ಖರೀದಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರವೇ ಹೂ ಬೆಳೆಗಾರರ ಬೆನ್ನಿಗೆ ನಿಲ್ಲಬೇಕು ಎಂದು ಡಿಕೆಶಿ ಒತ್ತಾಯಿಸಿದರು.
ಆನೆಕಲ್ಲಿನ ಕೂನಿಮಡಿವಾಳ, ಎಲ್ಲಮ್ಮನ ಪಾಳ್ಯ ದೊಡ್ಡಹಾಗಡೆ ಹಾಗೂ ಹುಸ್ಕೂರಿನ ರೈತರ ತೋಟಗಳಿಗೆ ಡಿಕೆಶಿ, ಡಿ.ಕೆ. ಸುರೇಶ್​ ಭೇಟಿ ನೀಡಿದರು. ಈ ವೇಳೆ ಹುಸ್ಕೂರಿನಲ್ಲಿ ರೈತರೊಬ್ಬರು ಬೆಳೆದ ಕ್ಯಾಪ್ಸಿಕಂ ಬೆಳೆಯನ್ನು ಸ್ವತಃ ಸಂಸದ ಡಿಕೆ ಸುರೇಶ್ ಅವರು ಖರೀದಿ ಮಾಡುವ ಮೂಲಕ ಮಾನವೀಯತೆ ಮೆರೆದರು.(ದಿಗ್ವಿಜಯ ನ್ಯೂಸ್​)
ಕರೊನಾ ಸೋಂಕಿತರ ಪೈಕಿ ಶೇ.80 ಜನರಲ್ಲಿ ಆರಂಭಿಕ ಲಕ್ಷಣಗಳು: ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − five =
Remember me
