ಆನೇಕಲ್:ಯುವಕನೊಬ್ಬ ತಲೆಗೆ ಬಿಯರ್​ ಬಾಟಲ್​ನಿಂದ ಹೊಡೆದುಕೊಂಡು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರೀತಿಸಿದ ಯುವತಿ ಮನೆಯವರೊಂದಿಗೆ ಸೇರಿ ಪೊಲೀಸರು ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಸುರೇಶ್ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಈತ ಆತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ವಿಡಿಯೋ ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದು, ಕಾಡಗೋಡಿ ಪೋಲೀಸರ ವಿರುದ್ಧ ಕಿರುಕುಳ ನೀಡಿದ ಆರೋಪ ಮಾಡಿದ್ದಾನೆ.
ಸುರೇಶ್​, ಸರ್ಜಾಪುರ ಸಮೀಪದ ಮುಗಳೂರಿನ ಭೋವಿಪಾಳ್ಯ ನಿವಾಸಿ. ವೃತ್ತಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ. ಸರ್ಜಾಪುರದ ಬಾಡಿಗೆ ಮನೆಯಲ್ಲಿ ಅವರ ಕುಟುಂಬ ವಾಸವಿತ್ತು. ಕಾಡುಗೋಡಿ ಸಮೀಪದ ಸೀಗೆಹಳ್ಳಿಯ ಜೋಗಿ ಕಾಲೋನಿಯ ಯುವತಿಯನ್ನು ಆತ ಪ್ರೀತಿಸುತ್ತಿದ್ದ. ಆಕೆಯು ಸಹ ಸುರೇಶ್​ನನ್ನು ಪ್ರೀತಿಸುತ್ತಿದ್ದಳು.
ಇಬ್ಬರ ಪ್ರೀತಿಯ ವಿಚಾರ ಯುವತಿ ತಂದೆ-ತಾಯಿಗೆ ತಿಳಿದಿತ್ತು. ಬಳಿಕ ಕಾಡುಗೋಡಿ ಪೋಲೀಸರ ಮೂಲಕ ಸುರೇಶ್​ಗೆ ಕರೆ ಮಾಡಿಸಿ ಕಿರುಕುಳ ನೀಡಲು ಆರಂಭಿಸಿದರು ಎಂಬ ಆರೋಪ ಕೇಳಿಬಂದಿದೆ. ಕಳೆದ ಒಂದು ವಾರದಿಂದ ಪೋಲೀಸರಿಂದ ನಿರಂತರ ಫೋನ್​ ಬರುತ್ತಿದ್ದು, ರೇಪ್ ಕೇಸ್ ಸೇರಿದಂತೆ ಇನ್ನಿತರ ಕೇಸ್ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಠಾಣೆಗೆ ಬರುವಂತೆ ನಿರಂತರ ಪೋನ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಸುರೇಶ್​ ದೂರಿದ್ದಾರೆ.
ಪೊಲೀಸರ ನಿರಂತರ ಪೋನ್ ಕರೆಗಳಿಂದ ಕಂಗಾಲಾದ ಸುರೇಶ್, ಇದೀಗ ಸರ್ಜಾಪುರದ ಮನೆಯ ಸಮೀಪ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕಾಡುಗೋಡಿ ಪೋಲೀಸರು, ಯುವತಿ ತಂದೆ ಮತ್ತು ತಾಯಿ ಹಾಗೂ ಮತ್ತೊಂದು ಯುವತಿಯ ಹೆಸರನ್ನು ಆತ ಉಲ್ಲೇಖಿಸಿ, ನನ್ನ ಸಾವಿಗೆ ಇವರುಗಳೇ ಕಾರಣ ಎಂದು ವಿಡಿಯೋ ರೆಕಾರ್ಡ್​ ಮಾಡಿ, ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾನೆ.
ಬಿಯರ್ ಬಾಟಲಿಯಿಂದ ತಲೆಗೆ ಹೊಡೆದುಕೊಂಡು, ಕೈಕೊಯ್ದುಕೊಂಡಿರುವ ವಿಡಿಯೋ ಮಾಡಿರುವ ಯುವಕ, ಇಲಿ ಪಾಷಾಣ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥಗೊಂಡು ಬಿದ್ದಿದ್ದ ಸುರೇಶ್​ನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರ್ಜಾಪುರದ ಬಾಲಾಜಿ ಆಸ್ಪತ್ರೆಯಲ್ಲಿ ಸುರೇಶ್​ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.(ದಿಗ್ವಿಜಯ ನ್ಯೂಸ್​)
ಪಿಎಂ ಆವಾಸ್​ ಯೋಜನೆ ಹಣ ಪಡೆದು ಗಂಡಂದಿರಿಗೆ ಕೈಕೊಟ್ಟ ಲವರ್ಸ್​ ಜತೆ ನಾಲ್ವರು ವಿವಾಹಿತೆಯರು ಪರಾರಿ!

ಅಸಹಜ ಲೈಂಗಿಕ ಕ್ರಿಯೆ, ವರದಕ್ಷಿಣೆ ಕಿರುಕುಳ ಆರೋಪ: ರಾಖಿ ಪತಿ ಆದಿಲ್​ಗೆ ನ್ಯಾಯಾಂಗ ಬಂಧನ

ಪಠಾಣ್​ ಸಿನಿಮಾ ಇಷ್ಟ ಆಗಲಿಲ್ಲ ಎಂದ ಮಗುವಿಗೆ ಶಾರುಖ್​ ಖಾನ್​ ಕೊಟ್ಟ ಉತ್ತರ ವೈರಲ್!​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five + eight =
Remember me
