ಹನೂರು: ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಸಮೀಕ್ಷೆ ಮಾಡುತ್ತಿದ್ದ ಅಂಗನವಾಡಿ ಕಾರ್ಯಕರ್ತೆಗೆ ಪುಂಡರ ಗುಂಪು ಕೊಲೆ ಬೆದರಿಕೆ ಹಾಕಿದೆ.
ಕೊಲೆ ಬೆದರಿಕೆ ಹಾಕಿದ ಪುಂಡರ ವಿರುದ್ಧ ಅಂಗನವಾಡಿ ಕಾರ್ಯಕರ್ತೆ ಕವಿತಾ ಎಂಬುವವರು ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದಾರೆ.
ಏನು ನಡೆಯಿತು?: ತಾಲೂಕಿನ ಶಾಗ್ಯ ಗ್ರಾಮದಲ್ಲಿ ಕವಿತಾ ಸಮೀಕ್ಷೆ ನಡೆಸುತ್ತಿದ್ದರು. ಈ ವೇಳೆ ಪುಂಡರ ಗುಂಪು ಜೂಜಾಟದಲ್ಲಿ ತೊಡಗಿತ್ತು. ಕವಿತಾ ಕೂಡಲೇ ಪೋಲಿಸರಿಗೆ ಈ ಮಾಹಿತಿ ನೀಡಿದ್ದರು. ಪೊಲೀಸರು ಗ್ರಾಮಕ್ಕೆ ಆಗಮಿಸಿ ಅವರನ್ನು ಬಂಧಿಸಿ ದಂಡ ಕಟ್ಟಿಸಿಕೊಂಡು ಬಿಡುಗಡೆ ಮಾಡಿದ್ದರು.
ಇದರಿಂದ ಕೋಪಗೊಂಡ ಪುಂಡರು ಕವಿತಾ ಅವರಿಗೆ ಕೊಲೆ ಬೆದರಿಕೆ ಹಾಕಿದ್ದರು. ಅಲ್ಲದೆ ಕವಿತಾ ಅವರ ಪತಿ ಸಿದ್ದಪ್ಪ ಅವರೊಗೆ ದೂರುನೀಡಿ ಪತ್ನಿ ಇನ್ನು ಮುಂದೆ ನಮ್ಮ ವಿಚಾರಕ್ಕೆ ಬರದಂತೆ ಮಾಡಬೇಕು ಎಂದಿದ್ದರು.ಮನೆಗೆ ತೆರಳಿದ ಪತಿ ಸಿದ್ದಪ್ಪ ಪತ್ನಿ ಕವಿತಾ ಅವರ ಮೇಲೆ ಹಲ್ಲೆ ಕೂಡ ನಡೆಸಿದ್ದರು. ಇದರಿಂದ ನೊಂದ ಕವಿತಾ ಠಾಣೆಗೆ ತೆರಳಿ ಪತಿ ಹಾಗೂ ಜೂಜುಕೋರರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
https://www.instagram.com/p/B_pSQY7HxWY/?igshid=19rt9lghsrcwf
ಲಾಕ್​ಡೌನ್​ ಮಧ್ಯೆ ಒಂದೊಳ್ಳೆ ಸುದ್ದಿ; ಎಲ್​ಪಿಜಿ ಸಿಲೆಂಡರ್​ ಬೆಲೆಯಲ್ಲಿ ಭರ್ಜರಿ ಕಡಿತ..ಗ್ರಾಹಕರು ನಿರಾಳ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × one =
Remember me
