| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಒಂದು ಸಣ್ಣ ಪೆಟ್ಟಿಗೆ ಅಂಗಡಿಯಲ್ಲಿ ಚಹಾ ಕುಡಿಯಬೇಕೆಂದರೆ ಕನಿಷ್ಠ 10 ರೂ. ಬೇಕು. ಆದರೆ ಪ್ರತಿ ಅಂಗನವಾಡಿ ಮಕ್ಕಳಿಗೆ ಪ್ರತಿ ದಿನ 2 ಹೊತ್ತು ನೀಡಲಾಗುವ ಪೌಷ್ಟಿಕ ಉಪಾಹಾರ, ಊಟಕ್ಕೆ ತಗುಲುವ ವೆಚ್ಚ ಒಂದು ಕಪ್ ಚಹಾ ಬೆಲೆಗಿಂತ ಕಡಿಮೆ! ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಅನುದಾನ ಬಳಸಿಕೊಂಡು ಪ್ರತಿ ಮಗುವಿನ ಊಟ, ಉಪಾಹಾರಕ್ಕೆ 6 ರೂ.ಗಳಂತೆ ವೆಚ್ಚ ಮಾಡುತ್ತಿರುವ ಮಾಹಿತಿ ಬಹಿರಂಗ ವಾಗಿದೆ. ಆ ಮೂಲಕ ಅಂಗನವಾಡಿ ಆಹಾರದ ಗುಣಮಟ್ಟವನ್ನು ಪರೀಕ್ಷಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಅಂಗನವಾಡಿ ಮಕ್ಕಳ ಆಹಾರ ಕಳಪೆ ಎಂಬ ದೂರು ಹೊಸತೇನಲ್ಲ. ರಾಜ್ಯದ 69 ಸಾವಿರ ಅಂಗನವಾಡಿಗಳ 32 ಲಕ್ಷ ಮಕ್ಕಳು ಹಾಗೂ ಸರಾಸರಿ 16 ಲಕ್ಷ ಗರ್ಭಿಣಿ- ಬಾಣಂತಿಯರಿಗೆ ನಿಗದಿತ ಕಾಲದವರೆಗೆ ಊಟ- ಉಪಾಹಾರ ನೀಡಲಾಗುತ್ತದೆ. ಒಂದು ಮಗುವನ್ನು ಒಂದು ಘಟಕವೆಂದು ಪರಿಗಣಿಸಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಮಾನವಾಗಿ ಅನುದಾನ ಬಿಡುಗಡೆ ಮಾಡುತ್ತಿದೆ. 2014-15ರಲ್ಲಿ ನಿಗದಿಯಾದ ಘಟಕ ವೆಚ್ಚ 8 ರೂ. ಅಂದರೆ ರಾಜ್ಯ 4 ರೂ. ವಿನಿಯೋಗಿಸಿದರೆ ಕೇಂದ್ರ ಸರ್ಕಾರ 4 ರೂ. ನೀಡುತ್ತದೆ. ಇದರಲ್ಲಿ ಸಾಗಣೆ ವೆಚ್ಚ ಹಾಗೂ ಜಿಎಸ್​ಟಿಯಾಗಿ 2 ರೂ. ಹೋದರೆ ಇನ್ನೆರಡು ರೂ.ಗಳಷ್ಟೇ ಉಳಿಯಲಿದೆ. ಒಟ್ಟಾರೆ ಈ 6 ರೂ.ನಲ್ಲೇ ಬೆಳಗಿನ ಉಪಾಹಾರದ ಜತೆಗೆ ಮಧ್ಯಾಹ್ನದ ಊಟವನ್ನೂ ನೀಡಬೇಕು.
ಗೋಧಿ ಬಳಕೆಗೆ ಒತ್ತಡ:ಕೇಂದ್ರ ಸರ್ಕಾರ ಗೋಧಿ ಆಹಾರ ಪದಾರ್ಥ ನೀಡಿ ಎಂದು ಸೂಚನೆ ಕಳಿಸಿತ್ತು. ಈ ಸೂಚನೆಗೆ ಗೋಧಿ ಬೆಳೆಯುವ ರಾಜ್ಯಗಳ ಒತ್ತಡವೂ ಇರಬಹುದು. ಅಲ್ಲದೆ ಕರ್ನಾಟಕದ ಬಹುಪಾಲು ಮಕ್ಕಳು ಅನ್ನವನ್ನೇ ಹೆಚ್ಚು ಇಷ್ಟಪಡುತ್ತಾರೆಯೇ ಹೊರತು ಗೋಧಿ ಪದಾರ್ಥಗಳನ್ನಲ್ಲ. ಭಾರತ್ ಅಕ್ಕಿ ಯೋಜನೆ ಜಾರಿ ಮಾಡಿದ ಬಳಿಕ ಅಂಗನವಾಡಿಗೆ ಲಭ್ಯವಾಗಬೇಕಾಗಿದ್ದ ಅಕ್ಕಿ ಸರಬರಾಜು ಕಡಿಮೆಯಾಗಿ ಗೋಧಿ ಖರೀದಿಯೂ ಅನಿವಾರ್ಯ ಸೃಷ್ಟಿಯಾಗಿತ್ತು ಎಂಬ ಮಾಹಿತಿ ಇದೆ.
ಎಫ್​ಸಿಐ ಗೋದಾಮು:ಆಹಾರ ನಿಗಮದ ಗೋದಾಮುಗಳಿಂದ ಸರ್ಕಾರ ಅಕ್ಕಿ ಖರೀದಿಸಬೇಕಾಗುತ್ತದೆ. ಈ ಗೋದಾಮುಗಳಲ್ಲಿ 5-8 ವರ್ಷ ಹಳೆಯ ಮುಗ್ಗಲು ಕಟ್ಟಿದ ಆಹಾರ ಪದಾರ್ಥಗಳಿವೆ. ಸ್ವಲ್ಪ ಮೈಮರೆತರೂ ಕಳಪೆ ಅಕ್ಕಿ ಗೋಧಿ ಸರಬರಾಜಾಗುತ್ತದೆ. ಹೀಗಾಗಿ ಎಫ್​ಸಿಐ ಅಧಿಕಾರಿಗಳ ಕೈ ಬೆಚ್ಚಗೆ ಮಾಡುವ ಅನಿವಾರ್ಯತೆ ರಾಜ್ಯದ ಅಧಿಕಾರಿಗಳಿಗಿದೆ ಎಂಬ ಗುಸುಗುಸು ಕೂಡ ಕೇಳಿಬಂದಿದೆ.
ಶಾಸಕರ ಆಪ್ತರ ಹಾವಳಿ: ಅಂಗನವಾಡಿ ಆಹಾರ ಸಾಮಾಗ್ರಿಗಳ ಬಹುಪಾಲು ಸರಬರಾಜುದಾರರು ವಿಧಾನಸಭೆ ಸದಸ್ಯರ ಆಪ್ತರೇ ಆಗಿರುತ್ತಾರೆ. ಕುಟುಂಬ ಸದಸ್ಯರು ಅಥವಾ ಆಪ್ತಬಳಗದವರು ಗುತ್ತಿಗೆದಾರರ ಸ್ವರೂಪದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಹೀಗಾಗಿ ಇಲಾಖೆಯಿಂದ ಹೆಚ್ಚು ಆಕ್ಷೇಪಣೆ ತೆಗೆಯಲು ಅವಕಾಶ ಇರುವುದಿಲ್ಲ. ಒಂದು ಕಡೆ ಘಟಕ ವೆಚ್ಚ, ಇನ್ನೊಂದು ಕಡೆ ಶಾಸಕರ ಪ್ರಭಾವದಿಂದ ಅಂಗನವಾಡಿಗಳ ಮೇಲೆ ಪರಿಣಾಮ ಬೀರುವಂತಾಗಿದೆ.
ರಾಜ್ಯದ್ದು ಎರಡು ಯೋಜನೆ:ಸಿದ್ದರಾಮಯ್ಯ ಸಿಎಂ ಆದ ಬಳಿಕ ರಾಜ್ಯ ಸರ್ಕಾರದಿಂದಲೂ 2 ಮಹತ್ವದ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಮಕ್ಕಳಿಗೆ ಪೌಷ್ಠಿಕಯುಕ್ತ ಆಹಾರ ಸಿಗಬೇಕೆಂದು ಪ್ರತಿ ಮಗುವಿಗೆ 11 ರೂ. ವೆಚ್ಚ ಮಾಡಲಾಗುತ್ತದೆ. ಇದರಲ್ಲಿ ಹಾಲು ಹಾಗೂ ಮೊಟ್ಟೆಯನ್ನೂ ನೀಡಲಾಗುತ್ತದೆ. ಪ್ರತಿ ಮೊಟ್ಟೆಗೆ ಸರ್ಕಾರ 6 ರೂ. ನಿಗದಿ ಮಾಡಿದೆ. ಮಾರುಕಟ್ಟೆಯಲ್ಲಿ ಪ್ರತಿ ಮೊಟ್ಟೆ ಬೆಲೆ 7ರಿಂದ 8 ರೂಪಾಯಿಗಿಂತ ಹೆಚ್ಚೇ ಇದೆ. ಹಾಗಿದ್ದ ಮೇಲೆ 6 ರೂ.ಗೆ ಮೊಟ್ಟೆ ಪೂರೈಕೆ ಹೇಗೆ ಸಾಧ್ಯವಾಗುತ್ತದೆ? ಗುಣಮಟ್ಟದ ಮೊಟ್ಟೆ ಪೂರೈಕೆ ಸಾಧ್ಯವೇ ಎಂಬ ಪ್ರಶ್ನೆಗೆ ಅಧಿಕಾರಿಗಳಲ್ಲಿ ಉತ್ತರವಿಲ್ಲ. ಕ್ಷೀರ ಭಾಗ್ಯ ಯೋಜನೆಯೂ 7 ತಿಂಗಳಿಂದ ನಿಂತು ಹೋಗಿತ್ತು. ಹಾಲಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡುವ ಹಣ ಕಡಿಮೆಯಾಗಿದೆ. ಹೆಚ್ಚು ಹಣ ಕೊಟ್ಟರಷ್ಟೇ ಹಾಲು ಪೂರೈಕೆ ಮಾಡುವುದಾಗಿ ಹಾಲು ಒಕ್ಕೂಟಗಳು ತೀರ್ಮಾನ ಮಾಡಿದ್ದವು.

ಕೊನೆಗೆ ಸಚಿವರು ಒತ್ತಡ ತಂದು 300 ಕೋಟಿ ರೂ.ವನ್ನು ಹಾಲು ಮಹಾಮಂಡಳಕ್ಕೆ ಕಟ್ಟಿದ ಬಳಿಕ ಹಾಲು ಪೂರೈಕೆ ನಿರಾತಂಕವಾಗಿ ನಡೆದಿದೆ ಎಂಬುದು ಅಧಿಕಾರಿಗಳ ವಿವರಣೆಯಾಗಿದೆ. ಇನ್ನು ಮೊಟ್ಟೆ ಖರೀದಿಯನ್ನು ಸ್ಥಳೀಯವಾಗಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಹಣಕಾಸು ಬಿಡುಗಡೆ ಮಾಡಲಾಗುತ್ತದೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮುಖೇನ ಬಾಲ ವಿಕಾಸ ಸಮಿತಿ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಆ ಸಮಿತಿ ಮುಖೇನ ಮೊಟ್ಟೆ ಖರೀದಿ ನಡೆಯುತ್ತದೆ.
ನೆರವಿನ ನಿರೀಕ್ಷೆಯಲ್ಲಿ…:ಒಂಬತ್ತು ವರ್ಷದ ಹಿಂದಿನ ಬೇಳೆಕಾಳು ದರಕ್ಕೂ ಈಗಿನ ದರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈಗ ಎಲ್ಲ ವಸ್ತು ದುಬಾರಿಯಾಗಿವೆ. ಹೀಗಿರುವಾಗ ಹೇಗೆ 6 ರೂ.ವೆಚ್ಚದಲ್ಲಿ ನಿಭಾಯಿಸಲಾಗುತ್ತಿದೆ ಎಂಬುದೂ ಕೌತುಕ. ಬರುವ ಅನುದಾನದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದೇವೆ. ಹೆಚ್ಚಿನ ಅನುದಾನ ಕೊಡಿ ಎಂದು ಇಲಾಖೆಯಿಂದ ಕೇಂದ್ರ ಸರ್ಕಾರ, ರಾಜ್ಯದ ಹಣಕಾಸು ಇಲಾಖೆಗಳಿಗೆ ಕೋರಲಾಗಿದೆ. ಅವರು ತೀರ್ಮಾನ ಮಾಡಿದರಷ್ಟೇ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡಬಹುದು ಎಂಬುದು ಅಧಿಕಾರಿಗಳ ವಾದ.
ಜಾರಿ ನಿರ್ದೇಶನಾಲಯ ನೂತನ ನಿರ್ದೇಶಕರಾಗಿ ರಾಹುಲ್ ನವೀನ್ ನೇಮಕ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × one =
Remember me
