ಬೆಂಗಳೂರು:ಹಿಂದು ಮುಖಂಡರ ಹತ್ಯೆ ಹಾಗೂ ದಕ್ಷಿಣ ಭಾರತದಲ್ಲಿ ಐಸಿಸ್ ಉಗ್ರ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಸಂಚು ರೂಪಿಸಿ ಸೆರೆಸಿಕ್ಕಿರುವ 17 ಶಂಕಿತ ಉಗ್ರರ ಪ್ರಕರಣ ಸಂಬಂಧ ಸೋಮವಾರ ತಮಿಳುನಾಡು ಹಾಗೂ ಕರ್ನಾಟಕದ 25 ಕಡೆ ದಾಳಿ ನಡೆಸಿರುವ ಎನ್​ಐಎ ತಂಡ ಕಂಪ್ಯೂಟರ್, ಹಾರ್ಡ್ ಡಿಸ್ಕ್, ಮೊಬೈಲ್, ಸಿಮ್ ಕಾರ್ಡ್​ಗಳು ಹಾಗೂ ಜಿಹಾದಿ ಪುಸ್ತಕಗಳನ್ನು ಜಪ್ತಿ ಮಾಡಿದೆ.
ದಕ್ಷಿಣ ಭಾರತದಲ್ಲಿ ಐಸಿಸ್ ಬಲಪಡಿಸಲು ಮುಂದಾಗಿದ್ದ ಆಲ್ ಹಿಂದ್ ಮಾಡೆಲ್ ವಿರುದ್ಧ ಚೆನ್ನೈ ಕ್ಯೂ ಬ್ರಾಂಚ್ ಅಧಿಕಾರಿಗಳು ಜನವರಿಯಲ್ಲಿ ದಾಳಿ ನಡೆಸಿ ಜಿಹಾದಿ ಗ್ಯಾಂಗ್​ನ ಶಂಕಿತ ಉಗ್ರ ಖಾಜಾ ಮೋಹಿದ್ದೀನ್​ನನ್ನು ಬಂಧಿಸಿದ್ದರು. ನಂತರ ಬೆಂಗಳೂರಿನ ಸಿಸಿಬಿ ಪೊಲೀಸರು, ಸದ್ದುಗುಂಟೆಪಾಳ್ಯದ ಮೆಹಬೂಬ್ ಪಾಷ ಸೇರಿ ರಾಜ್ಯಾದ್ಯಂತ 17 ಶಂಕಿತ ಉಗ್ರರನ್ನು ಬಂಧಿಸಿದ್ದರು. ಈ ಕುರಿತು ದಾಖಲಾಗಿದ್ದ ಪ್ರತ್ಯೇಕ ಮೂರು ಪ್ರಕರಣಗಳ ತನಿಖೆಯನ್ನು ಎನ್​ಐಎಗೆ ವಹಿಸಲಾಗಿತ್ತು.
ಇನ್ನೂ ಹಲವರು ನಾಪತ್ತೆ
ಸದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಸಿಸಿಬಿ ಪೊಲೀಸರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರರಾದ ಮೆಹಬೂಬ್ ಪಾಷಾ, ಮೊಹಮದ್ ಮನ್ಸೂರ್ ಅಲಿ ಖಾನ್, ಸಲೀಂ ಖಾನ್, ಜಬೀವುಲ್ಲಾ ಮತ್ತು ಸೈಯದ್ ಅಜ್ಮತ್​ವುಲ್ಲಾನ್ನು ಬಂಧಿಸಲಾಗಿದೆ. ಇವರೊಂದಿಗೆ ಸಂಪರ್ಕ ಹೊಂದಿದ್ದ ಇನ್ನೂ ಹಲವರು ತಲೆಮರೆಸಿಕೊಂಡಿದ್ದಾರೆ. ಅವರ ಶೋಧಕಾರ್ಯ ಮುಂದುವರಿದಿದೆ.
ಕರ್ನಾಟಕದ 15 ಸ್ಥಳಗಳು ಟಾರ್ಗೆಟ್
ಬೆಂಗಳೂರು ನಗರ, ಕೋಲಾರದಲ್ಲಿ ಬಂಧಿತರಾದ ಶಂಕಿತ ಉಗ್ರರ ಮನೆ, ಅಲ್ ಹಿಂದ್ ಟ್ರಸ್ಟ್ ಸೇರಿ 15 ಕಡೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಕಂಪ್ಯೂಟರ್, 9 ಮೊಬೈಲ್, 5 ಸಿಮ್ ಕಾರ್ಡ್, 1 ಲ್ಯಾಪ್​ಟಾಪ್, 2 ಹಾರ್ಡ್ ಡಿಸ್ಕ್, 4 ಸಿಎ, ಡಿವಿಆರ್, 18 ಬುಕ್, 1 ಆಟೋ, ಸಿಡಿ ಮದ್ದು ಮತ್ತು ಕೆಲ ದಾಖಲೆಗಳು ಪತ್ತೆಯಾಗಿವೆ. ಬಂಧಿತರು ಹಿಂದು ಮುಖಂಡರ ಹತ್ಯೆ ಮಾಡುವ ಮುಖಾಂತರ ಕೋಮುಗಲಭೆ ಸೃಷ್ಟಿಸುವುದಕ್ಕಾಗಿ ಸ್ಥಳೀಯರನ್ನು ನೇಮಕಾತಿ ಮಾಡುತ್ತಿದ್ದರೆಂಬುದಕ್ಕೆ ಪೂರಕ ದಾಖಲೆ ಲಭಿಸಿವೆ.
ತಮಿಳುನಾಡಲ್ಲಿ 10 ಕಡೆ ರೇಡ್
ತಮಿಳುನಾಡಿನ ಚೆನ್ನೈ, ಕಾಂಚಿಪುರಂ, ತೂತುಕುಡಿ, ಸೇಲಂ ಮತ್ತು ಕುಡ್ಡಲೂರ್ ಜಿಲ್ಲೆಗಳ 10 ಕಡೆ ದಾಳಿ ನಡೆಸಲಾಗಿದೆ. ಆರೋಪಿಗಳ ಮನೆಗಳಲ್ಲಿ ಪರಿಶೀಲನೆ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ದೆಹಲಿ ಪೊಲೀಸರು ದಾಖಲಿಸಿರುವ ಐಸಿಸ್ ಉಗ್ರ ಖಾಜಾ ಮೋಹಿದ್ದೀನ್ ಮಾಡೆಲ್ ಪ್ರಕರಣ ಸಂಬಂಧ 4 ಲ್ಯಾಪ್​ಟಾಪ್, 1 ಟ್ಯಾಬ್, 2 ಮೊಬೈಲ್ ಮತ್ತು 3 ಸಿಮ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ. ಮೂರು ಪ್ರತ್ಯೇಕ ಕಡೆಗಳಲ್ಲಿ ನಡೆದ ದಾಳಿ ವೇಳೆ ವಶಕ್ಕೆ ಪಡೆದ ವಸ್ತುಗಳನ್ನು ಚೆನ್ನೈ ಮತ್ತು ಬೆಂಗಳೂರಿನ ವಿಶೇಷ ಕೋರ್ಟ್​ಗೆ ಹಾಜರುಪಡಿಸಿ ಸೈಬರ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
