ವಿಲಾಸ ಮೇಲಗಿರಿಬೆಂಗಳೂರು: ರಾಜ್ಯದಲ್ಲಿ ಪಶುಸಂಗೋಪನೆ ಹಾಗೂ ಹೈನುಗಾರಿಕೆ ಉಚ್ಛ್ರಾಯ ಸ್ಥಿತಿಯಲ್ಲಿರುವಾಗ ಪಶುಪಾಲನಾ ಇಲಾಖೆ ಚುಕ್ಕಾಣಿ ಹಿಡಿಯುವವರಿಗೇ ನಿರ್ದಿಷ್ಟ ಅರ್ಹತೆಗಳಿಲ್ಲದಿರುವುದು ಅಚ್ಚರಿಯಾದರೂ ಸತ್ಯ!
ಸರ್ಕಾರ ತಾನು ಮಾಡಿಕೊಂಡ ಎಡವಟ್ಟಿಗೆ ಈಗ ಬೆಲೆ ತೆರಬೇಕಿದೆ. ಕಾಯಂ ನಿರ್ದೇಶಕರ ನೇಮಕಕ್ಕೆ ಇನ್ನೂ 6 ತಿಂಗಳು ಕಣ್ಣುಬಾಯಿ ಬಿಟ್ಟು ಕಾಯುವ ಫಜೀತಿಗೆ ಸಿಲುಕಿದೆ. ಕಾಯಂ ನಿರ್ದೇಶಕರಾಗಲು ಅಪರ ನಿರ್ದೇಶಕರಾಗಿ 1 ವರ್ಷ ಸೇವೆ ಸಲ್ಲಿಸಿರಬೇಕು. ಆದರೆ, ಈಗ ಇರುವ ಇಬ್ಬರು ಅಪರ ನಿರ್ದೇಶಕರಾಗಿ 6 ತಿಂಗಳಾಗಿದೆ. ಹಾಗಾಗಿ ಈಗ ನಿರ್ದೇಶಕ ಹುದ್ದೆಗೆ ಪ್ರಭಾರ ನೇಮಕ ಅನಿವಾರ್ಯ. ಅಲ್ಲದೆ, ಇಲ್ಲಿ ತಾಲೂಕು ಮಟ್ಟದಿಂದ ರಾಜ್ಯ ಮಟ್ಟದ ಅಧಿಕಾರಿಗಳವರೆಗಿನ ಶೇ. 95 ಹುದ್ದೆಗಳಲ್ಲಿ ಪ್ರಭಾರಿಗಳೇ ಕಾರ್ಯ ನಿರ್ವಹಿಸುತ್ತಿದ್ದು, ‘ಪ್ರಭಾರ ಭಾರ’ ವಾಗಿ ಪರಿಣಮಿಸಿದೆ.
100ಕ್ಕೆ 85 ಪ್ರಭಾರ:
ಇಲಾಖೆಯಲ್ಲಿನ ಇಂದಿನ ಎಡವಟ್ಟುಗಳಿಗೆ ಪ್ರಮುಖ ಕಾರಣ ವೇನೆಂದರೆ, ಪುನಾರಚನೆಯಲ್ಲಿ ಸೃಷ್ಟಿಯಾದ ಉಪನಿರ್ದೇಶಕರು, ಜಂಟಿ ನಿರ್ದೇಶಕರು ಹಾಗೂ ಅಪರ ನಿರ್ದೇಶಕರ ಹುದ್ದೆಗಳಿಗೆ ನಿರಂತರವಾಗಿ 2013ರಿಂದ ಪದೋನ್ನತಿ ಕೊಡುತ್ತ ಬರಲಾಗಿದೆ. ಆದರೆ, ಹಳ್ಳಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪಶವೈದ್ಯಾಧಿಕಾರಿಗಳಿಗೆ 7-8 ವರ್ಷಗಳಿಂದ ಪದೋನ್ನತಿ ನೀಡಿಲ್ಲ. ಈ ಕುರಿತು ಪಶುವೈದ್ಯರು ಕೇಳಿದರೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಆಗಬೇಕು ಮತ್ತು ಹಣಕಾಸು ಇಲಾಖೆ ಅನುಮೋದನೆ ಬೇಕು ಎಂದು ನೆಪ ಹೇಳುತ್ತ ಬರಲಾಗಿದೆ. ಆದರೆ, ಉಪನಿರ್ದೇಶಕರು, ಜಂಟಿ ನಿರ್ದೇಶಕರು ಹಾಗೂ ಅಪರ ನಿರ್ದೇಶಕರ ಹುದ್ದೆಗಳಿಗೆ ಪದೋನ್ನತಿ ನೀಡುವಾಗ ಸರ್ಕಾರಕ್ಕೆ ವೃಂದ ಮತ್ತು ನೇಮಕ ನಿಯಮಗಳು ಮತ್ತು ಹಣಕಾಸು ಇಲಾಖೆ ಅನುಮೋದನೆ ಅವಶ್ಯ ಕಾಣಲೇ ಇಲ್ಲ!
ಇದನ್ನೂ ಓದಿ:ಬೆಂಗಳೂರು ಮೆಟ್ರೋ: ಭೂಸ್ವಾಧೀನ ಬಹುತೇಕ ಪೂರ್ಣ
ಉನ್ನತಾಧಿಕಾರಿಗಳ ಬಳಿ ಉತ್ತರವಿಲ್ಲ:2017 ರಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಅಂತಿಮ ಅಧಿಸೂಚನೆ ಜಾರಿಯಾಗಿದೆ. ಆದರೂ ಎಲ್ಲ ಪದೋನ್ನತಿಗಳಿಗೆ ನಿಯಮ ಅನ್ವಯಿಸ ಲಾಗಿದೆಯೇ? ಎಂಬ ಪ್ರಶ್ನೆಗೆ ಉನ್ನತಾಧಿಕಾರಿಗಳ ಬಳಿ ಉತ್ತರವಿಲ್ಲ.
ಅನುಷ್ಠಾನವಾಗದ ಆದೇಶ:20 ಜು. 2019ರಂದು ಪಶು ವೈದ್ಯಾಧಿಕಾರಿಗಳ ವೃಂದದಿಂದ ಹಿರಿಯ ಪಶುವೈದ್ಯಾಧಿಕಾರಿ ಮತ್ತು ಮುಖ್ಯ ಪಶುವೈದ್ಯಾಧಿಕಾರಿಗಳಾಗಿ ಕಾಲಬದ್ದ ಪದೋನ್ನತಿ (6 ಮತ್ತು 13 ವರ್ಷಗಳ) ನೀಡಿದ್ದರೂ ಇನ್ನು ಅನುಷ್ಠಾನವಾಗಿಲ್ಲ. ಕೆಳಮಟ್ಟದ ಅಧಿಕಾರಿಗಳ ಪದೋನ್ನತಿ ನೀಡಲು 8 ವರ್ಷಗಳ ಕಾಲ ವಿಳಂಬಮಾಡಿದ ಕಾರಣ ಇಂದು ರಾಜ್ಯದ ಎಲ್ಲ ತಾಲೂಕು ಮುಖ್ಯಸ್ಥರಾಗಿ ಪ್ರಭಾರ ಅಧಿಕಾರಿಗಳು ಕಾರ್ಯ ನಿರ್ವಹಿಸುವಂತಾಗಿದೆ. 30 ಜಿಲ್ಲೆಗಳ ಪೈಕಿ ಸುಮಾರು 22-23 ಜಿಲ್ಲೆಗಳಲ್ಲಿ ಪ್ರಭಾರ ಉಪನಿರ್ದೇಶಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ:ಸಿವಿಲ್ ಇಂಜಿನಿಯರ್ ನೇಮಕ ಪ್ರಕ್ರಿಯೆ ಗುಮಾನಿ
ಹಿಡಿಶಾಪ ಹಾಕಿ ನೌಕರರು ನಿವೃತ್ತಿ..:ಜ್ಯೇಷ್ಠತಾ ಪಟ್ಟಿ ತಯಾರಿಕೆಯಿಂದ ಹಿಡಿದು ಬಡ್ತಿ ನೀಡಿಕೆಯ ಎಲ್ಲ ಹಂತಗಳಲ್ಲಿ ಮಾಡಿರುವ ಎಡವಟ್ಟುಗಳಿಂದ ಅರ್ಹರಿಗೆ ನ್ಯಾಯ ಸಿಗದೆ ಇದ್ದ ಹುದ್ದೆಯಲ್ಲೇ ಇದ್ದು ಬೇಸರದಿಂದ ನೂರಾರು ಅಧಿಕಾರಿಗಳು ನಿವೃತ್ತರಾಗಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಜ್ಯೇಷ್ಠತಾ ಪಟ್ಟಿ ತಯಾರಿಸಿ ಪದೋನ್ನತಿಗಳನ್ನು ನೀಡಿ ತಾಲೂಕು, ಜಿಲ್ಲೆ ಮತ್ತು ಆಯುಕ್ತಾಲಯದಲ್ಲಿ ಅರ್ಹರನ್ನು ಕುಳ್ಳಿರಿಸಿದರೆ ಮಾತ್ರ ಇಲಾಖೆಯನ್ನು ಸರಿದಾರಿಗೆ ತರಲು ಸಾಧ್ಯ ಎಂಬುದು ಇಲಾಖೆ ಹಿರಿಯ ಅಧಿಕಾರಿಗಳ ಅಭಿಪ್ರಾಯ.
ಇದನ್ನೂ ಓದಿ:ವಿಶ್ವ ಫ್ರೆಂಡ್​ಷಿಪ್​ ಡೇ: ನಿರ್ಮಾಪಕರೇ ಬೆಸ್ಟ್ ಫ್ರೆಂಡ್
ಪದೋನ್ನತಿ ಪದ್ಧತಿ ಏನು?:ಪಶುವೈದ್ಯಾಧಿಕಾರಿಯಾಗಿ 6 ವರ್ಷಗಳ ನಂತರ ಹಿರಿಯ ಪಶುವೈದ್ಯಾಧಿಕಾರಿ, ತರುವಾಯ 7 ವರ್ಷ ಸೇವೆ ಸಲ್ಲಿಸಿದರೆ ಮುಖ್ಯಪಶುವೈದ್ಯಾಧಿಕಾರಿ ಹುದ್ದೆಗೆ ಬಡ್ತಿ ನೀಡಬೇಕು. ಈ ಅಧಿಕಾರಿಗಳ ಜ್ಯೇಷ್ಠತಾ ಪಟ್ಟಿ ಅನುಸಾರ ತಾಲೂಕು ಮಟ್ಟದಲ್ಲಿ ಸಹಾಯಕ ನಿರ್ದೇಶಕರನ್ನಾಗಿ ನೇಮಿಸಬೇಕು. ಅಲ್ಲಿ 3 ವರ್ಷ ಸೇವೆ ಸಲ್ಲಿಸಿದ ಬಳಿಕ ಉಪನಿರ್ದೇಶಕರ ಹುದ್ದೆಗೆ ಪರಿಗಣಿಸಬೇಕು. ಈ ಹುದ್ದೆಯಲ್ಲಿ 3 ವರ್ಷ ಅನುಭವ ಪಡೆದ ತರುವಾಯ ಜಂಟಿ ನಿರ್ದೇಶಕ ಹುದ್ದೆ ನೀಡಬೇಕು. 2 ವರ್ಷ ಜಂಟಿ ನಿರ್ದೇಶಕರಾದವರು ಅಪರ ನಿರ್ದೇಶಕರಾಗಿ ಮತ್ತು 1 ವರ್ಷ ಅಪರ ನಿರ್ದೇಶಕ ಹುದ್ದೆ ಅನುಭವವುಳ್ಳವರಿಗೆ ನಿರ್ದೇಶಕ ಹುದ್ದೆ ನೀಡಬೇಕು.ಈ ನಿಯಮಗಳೂ ಅವೈಜ್ಞಾನಿಕವಾಗಿವೆ ಎಂಬ ದೂರು ಇದೆ. ಜೂ.5ರಂದು ಪಶು ಸಂಗೋಪನಾ ಇಲಾಖೆ ಸಚಿವ ಉನ್ನತಾಧಿಕಾರಿಗಳ ಸಭೆ ನಡೆದಿದ್ದರೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ.
ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + three =
Remember me
