| ಕಿರಣ್ ಮಾದರಹಳ್ಳಿ/ಪಿ.ನಾಗರಾಜು ಮಹದೇಶ್ವರಬೆಟ್ಟ
ನರಹಂತಕ ವೀರಪ್ಪನ್ ಕಾಲಾನಂತರ ಕೌರ್ಯದಲ್ಲಿ ಆತನನ್ನು ಮೀರಿಸುವ ಕಾಡುಗಳ್ಳರ ಹಾವಳಿಗೆ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ನಡುಗಿದೆ. ವನ್ಯಜೀವಿಗಳ ಬೇಟೆಗಾಗಿ ಆಹಾರದಲ್ಲಿ ಬಾಂಬ್ ಇಡುವ ಪ್ರಕರಣ ಹೆಚ್ಚಾಗಿದ್ದು ಪರಿಣಾಮ ಕಾಡುಮೃಗಗಳ ಜತೆಗೆ ಜಾನುವಾರುಗಳ ಜೀವವೂ ಬಲಿಯಾಗುತ್ತಿದೆ.
ಕೇರಳದಲ್ಲಿ ಅನಾನಸ್​ನೊಳಗೆ ಸ್ಪೋಟಕ (ಫ್ರೂಟ್ ಬಾಂಬ್) ಇಟ್ಟು ಗರ್ಭಿಣಿ ಆನೆಯನ್ನು ಘೊರವಾಗಿ ಕೊಂದಿದ್ದ ರೀತಿಯಲ್ಲೇ ಈ ವನ್ಯಜೀವಿಧಾಮದಲ್ಲಿ ರೈತರ ಬದುಕಿಗೆ ಆಸರೆಯಾಗಿದ್ದ ಹಲವು ಜಾನುವಾರುಗಳು ಸಿಡಿಮದ್ದು ಜಗಿದು ಸ್ಪೋಟದಿಂದ ಮೃತಪಟ್ಟಿವೆ. ವಡಕೆಹಳ್ಳ ಗ್ರಾಮದ ಕೆಂಪಮಾದಮ್ಮ ಎಂಬಾಕೆ ಸಾಕಿದ್ದ ಎಮ್ಮೆ ಇತ್ತೀಚೆಗೆ ಎಳಚಿಗೆರೆ ಅರಣ್ಯ ಪ್ರದೇಶಕ್ಕೆ ಮೇಯಲು ಹೋದಾಗ ಬಾಂಬ್ ಅಡಗಿಸಿಟ್ಟಿದ್ದ ಜೋಳದ ಹಿಟ್ಟಿನ ಉಂಡೆ ತಿಂದು ಸ್ಪೋಟಕ್ಕೆ ಬಲಿಯಾಗಿದೆ. ತೂಕರೆ ಗ್ರಾಮದ ರೈತ ಮಾದಯ್ಯನ ಹಸು ಹುಲ್ಲಿನೊಂದಿಗೆ ಇಟ್ಟಿದ್ದ ಬಾಂಬ್ ಜಗಿದು ಬಾಯಿಯ ಭಾಗ ಛಿದ್ರಗೊಂಡು ತೀವ್ರ ರಕ್ತಸ್ರಾವವಾಗಿ ನರಳಿ ಮೃತಪಟ್ಟಿದೆ.
ಹಣ ಮತ್ತು ಮಾಂಸದ ಆಸೆಗೆ ಬೇಟೆಗಾರರು ಹುಲಿ, ಆನೆ, ಜಿಂಕೆ, ಹಂದಿ ಇತ್ಯಾದಿ ಪ್ರಾಣಿಗಳನ್ನು ಬೇಟೆಯಾಡಲು ಹುಲ್ಲು, ಹಣ್ಣು ಮತ್ತು ಇತರ ಆಹಾರ ಪದಾರ್ಥಗಳಲ್ಲಿ ಬಾಂಬ್ ಅಡಗಿಸಿ ಇಡಲಾಗುತ್ತಿದೆ ಎಂದು ಶಂಕಿಸಲಾಗಿದೆ. ಕಾಡುಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಕೆಲವರು ಆಹಾರ ಪದಾರ್ಥದಲ್ಲಿ ಸಿಡಿಮದ್ದು ಇಟ್ಟಿರಬಹುದೆಂಬ ಗುಮಾನಿಯೂ ಇದೆ.
ಬೇಟೆಗಿಲ್ಲ ಕಡಿವಾಣ:ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಏ.1ರಿಂದ ಅ.29ರವರೆಗೆ 13 ಅಪರಾಧ ಪ್ರಕರಣ ವರದಿಯಾಗಿವೆ. ಕೊಳ್ಳೇಗಾಲ, ಹೂಗ್ಯಂ, ಪಿ.ಜಿ ಪಾಳ್ಯ, ಹನೂರು, ಮಹದೇಶ್ವರ ಬೆಟ್ಟ ವಲಯಗಳಲ್ಲಿ ಕಾಡುಹಂದಿ, ಆಮೆ, ಮೊಲ, ಜಿಂಕೆ, ವನ್ಯಪ್ರಾಣಿಗಳ ಚರ್ಮ, ಮೂಳೆ, ಉಗುರು ಅಕ್ರಮ ಸಾಗಣೆ ಮತ್ತಿತರ ಮೊಕದ್ದಮೆ ದಾಖಲಾಗಿವೆ. ಹಲವು ಆರೋಪಿಗಳನ್ನು ಬಂಧಿಸಲಾಗಿದ್ದು, 9 ಜನರು ತಲೆಮರೆಸಿಕೊಂಡಿದ್ದಾರೆ. ಸೂರಾಪುರ-ಕುಣಗಳ್ಳಿ ರಸ್ತೆಯಲ್ಲಿ ಕಾಡುಹಂದಿ ಬೇಟೆಯಾಡಿದ್ದ ಆರೋಪಿಗಳು ಪರಾರಿಯಾಗಿದ್ದಾರೆ.
ಕಾಡುಪ್ರಾಣಿಗಳ ಗತಿಯೇನು?
ಪಟಾಕಿ ರಾಸಾಯನಿಕ ಸಿದ್ಧಪಡಿಸಿ ಕಡಲೆ, ಜೋಳದ ಹಿಟ್ಟು, ಹುಲ್ಲುಗಳ ಉಂಡೆಯೊಳಗೆ ಅಡಗಿಸಿ ಇಡುತ್ತಿರುವ ಶಂಕೆ ಇದೆ. ಹಾಗಾಗಿ, ಕಚ್ಚಾ ಬಾಂಬ್ ತಯಾರಿಸುವ ಮತ್ತು ಸರಬರಾಜು ಮಾಡುವವರನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳಬೇಕಿದೆ. ಲಾಕ್​ಡೌನ್ ಸಂದರ್ಭದಲ್ಲಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಾರದಂತೆ ಶ್ರೀಗಂಧದ ಮರಗಳನ್ನು ಲೂಟಿ ಮಾಡಲಾಗಿತ್ತು. ಈ ಪ್ರಕರಣದ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಅಲ್ಲದೆ ಕಳೆದ ಕೆಲವು ತಿಂಗಳಿಂದ ಪ್ರಾಣಿ ಬೇಟೆ, ಮಾಂಸ ಸಾಗಣೆ ಪ್ರಕರಣಗಳು ವರದಿಯಾಗುತ್ತಲೇ ಇವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
