
ಚನ್ನರಾಯಪಟ್ಟಣ:ಮೂಕ ಪ್ರಾಣಿಗಳಿಗೆ ಸೇವೆ ಮಾಡುವುದು ಎಂದರೆ, ದೇವರೇ ನಮಗೆ ಒದಗಿಸಿದ ಸೌಭಾಗ್ಯ. ಈ ನಿಟ್ಟಿನಲ್ಲಿ ತಾಲೂಕು ಜಾನುವಾರು ಅಭಿವೃದ್ಧಿ ಅಧಿಕಾರಿ ಕೆ.ಸಿ. ಸೋಮಶೇಖರ್ ಅವರು ಮಾಡಿರುವ ಸೇವೆ ಅನನ್ಯವಾದದ್ದು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶ್ಲಾಸಿದರು.ಸತತ 38 ವರ್ಷಗಳ ಸರ್ಕಾರಿ ಸೇವೆಯಿಂದ ಸೋಮಶೇಖರ್ ಅವರು ನಿವೃತ್ತಿಯಾದ ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.ಹೊರ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಹಾಸನ ಜಿಲ್ಲೆಗೆ ಬಂದ ಮೇಲೆ ವಿಶೇಷವಾಗಿ ಚನ್ನರಾಯಪಟ್ಟಣ ತಾಲೂಕಿನಲ್ಲಿ ಸತತ ಎರಡು ದಶಕಗಳಿಗೂ ಹೆಚ್ಚುಕಾಲ ಜನರ ಒಡನಾಡಿಯಾಗಿ ಸಲ್ಲಿಸಿರುವ ಸೇವೆ ಅನನ್ಯವಾದದ್ದು ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಸೋಮಶೇಖರ್, ಸರ್ಕಾರಿ ಸೇವೆಗೆ ಸೇರಿದ ದಿನದಿಂದ ಈ ತನಕಸಲ್ಲಿರುವ ಸೇವಾದಿನ ಅನುಭವಗಳನ್ನು ಮೆಲುಕು ಹಾಕಿದ ಅವರು, ಜಾನುವಾರು ಪಾಲಕರಾದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕೈಲಾದಷ್ಟು ಕೆಲಸ ಮಾಡಿದ್ದೇನೆ ಎಂದರು.ಜಾನುವಾರುಗಳಿಗೆ ಮಾರಕ ರೊಗಗಳು ಕಾಡುತ್ತಿದ್ದ ಸಂದರ್ಭದಲ್ಲಿ ಮಾಧ್ಯಮಗಳ ಗಮನ ಸೆಳೆದಿದ್ದೆ. ಅದರಿಂದ ಬಹಳ ಜನ ರೈತರಿಗೆ ಅನುಕೂಲವಾಯಿತು. ಕಾಲಬಾಯಿ ಜ್ವರದ ಲಸಿಕೆ ಕೊರತೆಯಾಗಿ ಉಂಟಾಗಿದ್ದ ಸಮಸ್ಯೆ ಬಗ್ಗೆ ಒಮ್ಮೆ ಶಿವಾನಂದ ತಗಡೂರು ಅವರ ಗಮನಕ್ಕೆ ತಂದಿದ್ದೆ. ಅವರು ತಕ್ಷಣವೇ ರಾಜ್ಯ ಮಟ್ಟದ ಸುದ್ದಿ ಮಾಡಿ ತಕ್ಷಣವೇ ಜಿಲ್ಲೆಗೆ ಹೆಚ್ಚಿನ ಲಸಿಕೆ ಬರಲು ಸಾಧ್ಯವಾಯಿತು. ಆ ಘಟನೆಯನ್ನು ನಾನು ಮರೆಯುವುದಿಲ್ಲ. ಅವರ ಲೇಖನದಿಂದ ರಾಜ್ಯ ಸರ್ಕಾರ ಗಮನಹರಿಸಿತು. ಜಿಲ್ಲೆಗೆ ಅಷ್ಟೆ ಅಲ್ಲ, ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚಿನ ಲಸಿಕೆ ತರಿಸಿಕೊಳ್ಳಲು ಅನುಕೂಲವಾಯಿತು ಎಂದು ಹೇಳಿದರು.ತಾಲೂಕು ಪಶು ವೈದ್ಯಾಧಿಕಾರಿ ಯಶವಂತ್, ತಾಲೂಕು ಪತ್ರಕರ್ತರ ಸಂಘದ ಬೂವನಹಳ್ಳಿ ಚನ್ನೇಗೌಡ, ನಟೇಶ್, ರೈತರಾದ ವೇದಾಂತ, ಬ್ರಹ್ಮಲಿಂಗೇಗೌಡ, ಟಿ.ಬಿ.ಯತೀಶ್, ಓಂಕಾರಮೂರ್ತಿ ಮತ್ತಿತರರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ನಾನಾ ಭಾಗದಿಂದ ಬಂದಿದ್ದ ಸಂಘ ಸಂಸ್ಥೆಗಲ ಪ್ರತಿನಿಧಿಗಳು, ರೈತರು ಸೋಮಶೇಖರ್ ಅವರನ್ನು ಗೌರವಿಸಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × 2 =
Remember me
