ಚಿಕ್ಕಬಳ್ಳಾಪುರ:ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಳ ಮತ್ತು ನೀರಿನ ಹಾಹಾಕಾರ ಸಮಸ್ಯೆ ತೀವ್ರವಾಗಿ ಕಾಡುತ್ತಿರುವುದರ ನಡುವೆ ದಾಹವನ್ನು ನೀಗಿಸಿಕೊಳ್ಳಲು ಅರಣ್ಯ ಪ್ರದೇಶದಿಂದ ಮೂಕಜೀವಿಗಳು ವಸತಿ ಸ್ಥಳಗಳತ್ತ ಲಗ್ಗೆಯಿಡುತ್ತಿವೆ.ಹೌದು! ನೀರು ಕುಡಿದು ಹೋಗುವ ನಿಟ್ಟಿನಲ್ಲಿ ಇತ್ತೀಚೆಗೆ ಕೃಷಿ ಜಮೀನುಗಳು, ಗ್ರಾಮೀಣ ವಸತಿ ಪ್ರದೇಶಗಳ ಸನಿಹ ಹೆಚ್ಚಿಗೆ ಜಿಂಕೆಗಳು, ಕಾಡು ಹಂದಿಗಳು, ನವಿಲುಗಳು, ಮೊಲಗಳು, ನರಿಗಳು ಕಾಣಿಸಿಕೊಳ್ಳುತ್ತಿವೆ. ಮಂಗಗಳು ಮನೆಗಳಿಗೆ ನುಗ್ಗುತ್ತಿವೆ.ಪ್ರತಿ ವರ್ಷದಂತೆ ಬೇಸಿಗೆಯಲ್ಲಿ ಸುಡು ಬಿಸಿಲಿನಲ್ಲಿ ಹೈರಾಣರಾದ ಜನರು ದಾಹವನ್ನು ನೀಗಿಸಿಕೊಳ್ಳಲು ತಂಪು ಪಾನೀಯಾ, ಎಳನೀರು, ಕರಬೂತ, ತಾಟಲಿಂಗ, ಕಲ್ಲಂಗಡಿ, ಐಸ್ ಕ್ರೀಂ ಸೇವಿಸಲು ಹೆಚ್ಚಿಗೆ ಬಯಸುತ್ತಿದ್ದಾರೆ. ಇದರ ನಡುವೆ ಮೂಕಜೀವಿಗಳು ಪಾಡು ಸಹ ಹೇಳ ತೀರದಾಗಿದೆ.
*ನಲ್ಲಿ, ಮನೆಗಳತ್ತ ಚೀರಾಟವಸತಿ ಪ್ರದೇಶಗಳಲ್ಲಿ ಇತ್ತೀಚೆಗೆ ಕೋತಿಗಳ ಹಾವಳಿಯು ಹೆಚ್ಚಾಗಿದೆ. ನೀರಿಗಾಗಿ ಮನೆ ಒಳಗೆ ನುಗ್ಗುತ್ತಿವೆ. ಇತ್ತೀಚೆಗೆ ಕೋತಿ, ಗುಬ್ಬಚ್ಚಿ, ಕಾಗೆ, ಬೀದಿಗೆ ಬಿಟ್ಟ ಹಸು, ಎಮ್ಮೆ, ಕರುಗಳು ನಲ್ಲಿಗಳ ಬಳಿ ನೀರಿಗಾಗಿ ಎಡತಾಕುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಬಿಂದಿಗೆ, ಬಕೆಟ್ ಕಾಣಿಸುತ್ತಿದ್ದಂತೆ ಧಾವಿಸಿ ಬರುತ್ತಿವೆ.
*ಬಿಸಿಲಿಗೆ ದಾಹ ಹೆಚ್ಚಳಬೇಸಿಗೆಯಲ್ಲಿ ದಿನದಿಂದ ದಿನಕ್ಕೆ ಉಷ್ಠಾಂಶ ಹೆಚ್ಚಾಗಿದೆ. ಗರಿಷ್ಠ ೩೩ ಡಿಗ್ರಿ ಸೆಲಿಯಷ್ಸ್ ಮುಟ್ಟಿದೆ. ಸದಾ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಚಿಕ್ಕಬಳ್ಳಾಪುರದ ವೀರದಿಮ್ಮಮ್ಮನ ಕಣಿವೆ, ಆವಲಬೆಟ್ಟ, ಹನುಮಂತಪುರ, ಕಳವಾರ ಬೆಟ್ಟ ಸೇರಿದಂತೆ ಅರಣ್ಯ ಪ್ರದೇಶದ ಹಲವೆಡೆ ಕಾಡ್ಗಿಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಬಹುತೇಕ ಕಡೆ ಸುಟ್ಟು ಕರಕಲಾದ ಇಲ್ಲವೇ ಒಣಗಿದ ಗಿಡಮರಗಳು ಕಾಣಿಸುತ್ತಿವೆ. ಇದರ ನಡುವೆ ಹೊಂಡಗಳು, ಕುಂಟೆಗಳಲ್ಲಿನ ನೀರು ಇಂಗಿ ಹೋಗಿವೆ. ಇಲ್ಲಿ ಆಶ್ರಯಪಡೆದುಕೊಂಡಿದ್ದ ಮೂಕ ಜೀವಿಗಳು ನೀರಿಗಾಗಿ ಹುಡುಕಿಕೊಂಡು ವಲಸೆ ಹೋಗುವಂತಹುದು ಕಾಣಿಸುತ್ತಿದೆ.
*ಹೆಚ್ಚಿನ ವ್ಯವಸ್ಥೆಯ ನಿರೀಕ್ಷೆಪ್ರತಿ ವರ್ಷ ಬೇಸಿಗೆಯಲ್ಲಿ ಸಂಘ ಸಂಸ್ಥೆಗಳು ಮೂಕಜೀವಿಗಳಿಗೆ ನೀರಿನ ವ್ಯವಸ್ಥೆ ಕೈಗೊಳ್ಳುವ ವಾಡಿಕೆ ಇದೆ. ಅದರಂತೆ ಅಲ್ಲಲ್ಲಿ ದಾನಿಗಳು ಸಿಮೆಂಟ್ ತೊಟ್ಟಿಗಳನ್ನಿಟ್ಟು ನೀರುಣಿಸುವಿಕೆ, ಮನೆಯ ಮಹಡಿ, ಕಟ್ಟಡಗಳ ಮೇಲೆ ಪ್ರಾಣಿ ಪಕ್ಷಿಗಳಿಗಾಗಿ ಮಡಿಕೆಯಲ್ಲಿ ನೀರಿಡುವುದು ಸೇರಿದಂತೆ ನಾನಾ ವಿಶೇಷ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಇದು ಸಾಲದು. ಮತ್ತಷ್ಟು ಹೆಚ್ಚಾಗಬೇಕಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + sixteen =
Remember me
