ರಾಣೆಬೆನ್ನೂರ:ಹುಬ್ಬಳ್ಳಿ ಅಂಜಲಿ ಕೊಲೆ ಆರೋಪಿ ಗಿರೀಶ ಯುವತಿಯರನ್ನು ಪ್ರೀತಿಸುವ ನಾಟಕ ಮಾತ್ರ ಮಾಡಿದವನಲ್ಲ. ಬದಲಾಗಿ ಮಹಿಳೆಯರು ಮೂತ್ರ ಮಾಡುವುದು, ಬಟ್ಟೆ ಬದಲಾಯಿಸುವುದನ್ನು ನೋಡುವ ವಿಕೃತ ಕಾಮಿ ಕೂಡ ಆಗಿದ್ದಾನೆ.
ಶುಕ್ರವಾರ ಆತನ ವಿರುದ್ಧ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಗಿರೀಶನ ವಿಕೃತ ಕಾಮದ ಬಗ್ಗೆ ಬೆಳಕಿಗೆ ಬಂದಿದೆ.
ಅಕ್ಕ-ತಂಗಿ ಇಲ್ವಾ ಎಂದಿದ್ದಕ್ಕೆ ಕೊಲೆಗೆ ಯತ್ನಗಿರೀಶ ಗುರುವಾರ ಸಂಜೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ವಿಶ್ವ ಮಾನವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಅಲ್ಲದೆ ಬಹಳಷ್ಟು ಸಮಯ ರೈಲಿನ ಶೌಚಗೃಹದ ಬಳಿಯೇ ನಿಂತುಕೊಂಡಿದ್ದ. ಮಹಿಳೆಯೊಬ್ಬರು ಶೌಚಕ್ಕೆ ಹೋದಾಗ ಅವರನ್ನು ಕಿಂಡಿಯಿಂದ ನೋಡಲು ಮುಂದಾಗಿದ್ದಾನೆ. ಇದನ್ನು ಗಮನಿಸಿದ ಮಹಿಳೆ ಕೂಡಲೇ ಹೊರ ಬಂದು ನಿನಗೆ ಅಕ್ಕ-ತಂಗಿಯರು ಇಲ್ವಾ ಎಂದು ಬೈದಿದ್ದಾರೆ.
ಆಗ ಗಿರೀಶ ತನ್ನ ಬಳಿಯಿದ್ದ ಚಾಕೂ ತೆಗೆದು ‘ನೀನು ಈ ವಿಚಾರವನ್ನು ಎಲ್ಲರಿಗೂ ಹೇಳುತ್ತಿಯಾ’ ಎಂದು ಹೊಟ್ಟೆಗೆ ಚಾಕೂ ಹಾಕಲು ಮುಂದಾಗಿದ್ದಾನೆ. ಮಹಿಳೆ ಆತನಿಂದ ತಪ್ಪಿಸಿಕೊಂಡರೂ ಆಕೆಯ ಕೈಗೆ ಚಾಕೂ ಹರಿದಿದೆ. ನಂತರ ಮಹಿಳೆ ಕೂಗಾಡತೊಡಗಿದಾಗ ಆಕೆಯ ಪತಿ ಗಿರೀಶನನ್ನು ಹಿಡಿಯಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಗಿರೀಶ ಮಾಯಕೊಂಡ ಬಳಿ ರೈಲಿನಿಂದ ಹೊರಗೆ ಜಿಗಿದಿದ್ದಾನೆ.
ಪೊಲೀಸರ ಸಮಯ ಪ್ರಜ್ಞೆಯಿಂದ ದೊರೆತ ಗಿರೀಶರೈಲಿನಿಂದ ಜಿಗಿದ ಕಾರಣ ಬಿದ್ದು ಗಾಯಗೊಂಡಿದ್ದ ಗಿರೀಶನನ್ನು ಸ್ಥಳೀಯರು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ರೈಲ್ವೆ ಪೊಲೀಸ್ ಇನ್ಸಪೆಕ್ಟರ್ ಸಂತೋಷಕುಮಾರ ಪಾಟೀಲ ಆತನ ನಡುವಳಿಕೆ ನೋಡಿ ಈತ ಅಂಜಲಿ ಕೊಲೆ ಆರೋಪಿ ಕಂಡಂತೆ ಕಾಣುತ್ತಾನಲ್ಲ ಎಂದು ಅನುಮಾನಗೊಂಡು ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಹುಬ್ಬಳ್ಳಿ ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ಗುರುತಿಸಿ ಬಂಧಿಸಿ ಕರೆದೋಯ್ದಿದ್ದಾರೆ.
ಶುಕ್ರವಾರ ದೂರು ನೀಡಿದ ಮಹಿಳೆಚಾಕೂ ಇರಿತದಿಂದ ಗಾಯಗೊಂಡ ಮಹಿಳೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಾತಿ ಚಿಕಿತ್ಸೆ ಪಡೆದಿದ್ದಾರೆ. ಶುಕ್ರವಾರ ಬೆಳಗ್ಗೆ ರೈಲ್ವೆ ಪೊಲೀಸರಿಗೆ ಗಿರೀಶನ ವಿರುದ್ಧ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಐಸಿಸಿ! ಪಾಕ್ ಪಾಲಿಗೆ ವರದಾನ?

RCB vs CSK: ಮಳೆ ಬಗ್ಗೆ ವಿಚಾರಿಸಲು ಹವಾಮಾನ ಸಂಸ್ಥೆಗಳಿಗೆ ಫೋನ್​ ಕರೆಗಳ ಸುರಿಮಳೆ! ಫ್ಯಾನ್ಸ್​ಗೆ ಸಿಕ್ತು ಸಿಹಿ ಸುದ್ದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + seven =
Remember me
