ಕೋಲಾರ:ಖಾನಾಪುರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಶಾಸಕಿ ಅಂಜಲಿ ನಿಂಬಾಳ್ಕರ್​ ಬೆಂಗಳೂರಿನಿಂದ ತಿರುಪತಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದು ಇಂದು ಕೋಲಾರ ಹೆದ್ದಾರಿ ಮೂಲಕ ಸಾಗಿದ್ದಾರೆ.
ಶನಿವಾರ (ಜ.11)ದಿಂದ ಅವರು ತಮ್ಮ ಪತಿ ಹೇಮಂತ್ ನಿಂಬಾಳ್ಕರ್​, ಕುಟುಂಬ ಹಾಗೂ ಸಂಬಂಧಿಕರೊಟ್ಟಿಗೆ ಬೆಂಗಳೂರಿನಿಂದ ಪಾದಯಾತ್ರೆ ಪ್ರಾರಂಭ ಮಾಡಿದ್ದಾರೆ.
ಪಾದಯಾತ್ರೆ ಪ್ರಾರಂಭಕ್ಕೂ ಮೊದಲು ಟ್ವೀಟ್ ಮಾಡಿದ್ದ ಅವರು, ಸಶಕ್ತ ವರ್ತಮಾನಕ್ಕಾಗಿ, ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥನಾ ನಡಿಗೆ ಪ್ರಾರಂಭಿಸುತ್ತಿದ್ದೇನೆ. ಖಾನಾಪುರ ಕ್ಷೇತ್ರದ ಒಳಿತಿಗಾಗಿ ಇಂದಿನಿಂದ ತಿರುಪತಿಗೆ ಪಾದಯಾತ್ರೆ ಪ್ರಾರಂಭಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಹಾಗೇ ಕೆಲವು ಫೋಟೋಗಳನ್ನೂ ಪೋಸ್ಟ್​ ಮಾಡಿದ್ದರು.ಅಂಜಲಿ ನಿಂಬಾಳ್ಕರ್​ ಜತೆಗೆ ಅವರ ಸೋದರರು, ಬೆಂಬಲಿಗರು ಇದ್ದಾರೆ.
ಸಶಕ್ತ ವರ್ತಮಾನಕ್ಕಾಗಿ,ಉಜ್ವಲ ಭವಿಷ್ಯಕ್ಕಾಗಿ‘ಪ್ರಾರ್ಥನೆ ನಡಿಗೆ’,ನಮ್ಮ ಖಾನಾಪುರಕ್ಕಾಗಿ..
From today; Padyatra with family from Bengaluru to Thirupathi with Prayers to Lord for Progressive Khanapur..🙏pic.twitter.com/qHpoHNomno
— Dr Anjali Nimbalkar (@DrAnjaliTai)January 11, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + five =
Remember me
