| ಹರೀಶ್ ಬೇಲೂರು ಬೆಂಗಳೂರುಅನ್ನಭಾಗ್ಯ ಯೋಜನೆಯಡಿ ಬಿಪಿಎಲ್, ಅಂತ್ಯೋದಯ ಕಾರ್ಡ್​ದಾರರ ಖಾತೆಗೆ ಆಗಸ್ಟ್ ತಿಂಗಳಿನ 2ನೇ ಕಂತು ಹಣ ಜಮೆ ಮಾಡಲಾಗುತ್ತಿದ್ದು, ರಾಜ್ಯಾದ್ಯಂತ 1.03 ಕೋಟಿ ಕಾರ್ಡ್​ಗಳ 3.69 ಕೋಟಿ ಫಲಾನುಭವಿಗಳಿಗೆ 606 ಕೋಟಿ ರೂ. ಜಮೆಯಾಗಲಿದೆ.
ಜುಲೈನಲ್ಲಿ 97,27,160 ಕಾರ್ಡ್​ಗಳ 3.45 ಕೋಟಿ ಫಲಾನುಭವಿಗಳಿಗೆ 566 ಕೋಟಿ ರೂ. ಹಾಕಲಾಗಿತ್ತು. ಆಗಸ್ಟ್​ನಲ್ಲಿ 25 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಹಣ ಜಮೆ ಮಾಡಲಾಗಿದ್ದು, ಒಟ್ಟು ಶೇ.87 ಫಲಾನುಭವಿಗಳಿಗೆ ಯೋಜನೆಯಡಿ ಹಣ ಸಿಗುತ್ತಿದೆ.
ಕುಟುಂಬದ ಮುಖ್ಯಸ್ಥರನ್ನು ಆಯ್ಕೆ ಮಾಡದಿರುವುದು, ಬ್ಯಾಂಕ್ ಖಾತೆ ಇಲ್ಲದಿರುವುದು, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡದಿರುವುದು ಹಾಗೂ ರೇಷನ್ ಕಾರ್ಡ್​ಗೆ ಇಕೆವೈಸಿ ಮಾಡಿಸದಿರುವುದು ಸೇರಿ ಇತರ ಕಾರಣಗಳಿಂದ ಅಂದಾಜು 22 ಲಕ್ಷ ಬಿಪಿಎಲ್ ಕಾರ್ಡ್​ಗಳು ಯೋಜನೆಯಿಂದ ಹೊರಗುಳಿದಿದ್ದವು. ಈ ಪೈಕಿ 7 ಲಕ್ಷ ಕಾರ್ಡ್​ಗಳ ಸಮಸ್ಯೆಗಳು ಆಹಾರ ಇಲಾಖೆಯ ಮುತುವರ್ಜಿಯಿಂದ ಬಗೆಹರಿದಿದ್ದು, ಆಗಸ್ಟ್​ನಲ್ಲಿ 25 ಲಕ್ಷಕ್ಕೂ ಅಧಿಕ ಹೊಸ ಫಲಾನುಭವಿಗಳಿಗೆ ಸೌಲಭ್ಯ ಸಿಕ್ಕಿದೆ. ಉಳಿದ 15 ಲಕ್ಷ ಕಾರ್ಡ್​ಗಳ ಸಮಸ್ಯೆಯನ್ನು ಸೆಪ್ಟೆಂಬರ್ ವೇಳೆಗೆ ಬಗೆಹರಿಸಲು ಇಲಾಖೆ ಮುಂದಾಗಿದೆ.
8.72 ಲಕ್ಷ ಕಾರ್ಡ್​ಗಿಲ್ಲ ಹಣ: ರಾಜ್ಯ ಸರ್ಕಾರ ಹೊರಡಿಸಿದ್ದ ಕೆಲ ನಿಬಂಧನೆಗಳಿಂದ ಒಟ್ಟು 8.72 ಲಕ್ಷ ಕಾರ್ಡ್​ಗಳಿಗೆ ಹಣ ಸಿಗದಂತಾಗಿದೆ. ಮೂರು ತಿಂಗಳಿಂದ ರೇಷನ್ ತೆಗೆದುಕೊಳ್ಳದ ಕಾರ್ಡ್​ದಾರರು ನಗದು ವರ್ಗಾವಣೆ ಸೌಲಭ್ಯದಿಂದ ಅನರ್ಹರು ಎಂದು ಈಗಾಗಲೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಈ ಹಿನ್ನೆಲೆ 5.32 ಲಕ್ಷ ಬಿಪಿಎಲ್ ಕಾರ್ಡ್​ಗಳು ಯೋಜನೆಯಿಂದ ಹೊರಗುಳಿದಿವೆ. ಅದೇರೀತಿ, ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರನ್ನು ಹೊಂದಿರುವ 3.40 ಲಕ್ಷ ಅಂತ್ಯೋದಯ ಕಾರ್ಡ್ ದಾರರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 1.28 ಕೋಟಿ ಬಿಪಿಎಲ್ ಕಾರ್ಡ್​ಗಳಿವೆ.
ಅನ್ನಭಾಗ್ಯ ಯೋಜನೆಯಡಿ 1.28 ಕೋಟಿ ಕಾರ್ಡ್​ದಾರರ ಖಾತೆಗಳಿಗೆ ವಾರದಲ್ಲಿ ಆಗಸ್ಟ್ ತಿಂಗಳ ಹಣ ಬಿಡುಗಡೆ ಮಾಡಲಾಗುವುದು. ಈಗಾಗಲೆ ಜುಲೈ ತಿಂಗಳ ಹಣ ಬಿಡುಗಡೆ ಮಾಡಲಾಗಿದೆ.
| ಕೆ.ಎಚ್. ಮುನಿಯಪ್ಪ, ಆಹಾರ ಸಚಿವ
ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್​ಐಸಿ), ಇ-ಆಡಳಿತ ಹಾಗೂ ಖಜಾನೆ ಇಲಾಖೆ ಸಹಯೋಗದಲ್ಲಿ ಆಹಾರ ಇಲಾಖೆ ವತಿಯಿಂದ ಡಿಬಿಟಿ ಮುಖೇನ ಕಾರ್ಡ್​ದಾರರಿಗೆ ಯಶಸ್ವಿಯಾಗಿ 2ನೇ ಕಂತು ಹಣ ಹಾಕಲಾಗುತ್ತಿದೆ. ವಿವಿಧ ತಾಂತ್ರಿಕ ಸಮಸ್ಯೆ ಬಗೆಹರಿದ ಪರಿಣಾಮ ಆಗಸ್ಟ್​ನಲ್ಲಿ ಹೊಸದಾಗಿ 25 ಲಕ್ಷ ಫಲಾನುಭವಿಗಳನ್ನು ಯೋಜನೆಗೆ ಸೇರಿಸಲಾಗಿದೆ. ಸೆಪ್ಟೆಂಬರ್ ವೇಳೆಗೆ ಉಳಿದ ಕಾರ್ಡ್​ಗಳ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ.
| ಕನಗವಲ್ಲಿ, ಆಹಾರ ಇಲಾಖೆ ಆಯುಕ್ತೆ
ರಿಯಲ್​ ಸ್ಟಾರ್ ಉಪೇಂದ್ರ ಹೇಳಿದ್ದರಲ್ಲಿ ‘ಸತ್ಯ’ ಇದ್ಯಾ?: ‘ಯು-ಐ’ ಮೂಡಿಸಿದ ಪ್ರಶ್ನೆ!

Photo Gallery | ನಿಲುಕಿದ ನಕ್ಷತ್ರ: ರಾಜಧಾನಿಯಲ್ಲಿ ರಜಿನಿಕಾಂತ್ ಮುಕ್ತ ಸಂಚಾರ, ಅಭಿಮಾನಿಗಳಲ್ಲಿ ಸಂಚಲನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + nine =
Remember me
