ಬೆಂಗಳೂರು:ಕಾಂಗ್ರೆಸ್, ಚುನಾವಣಾ ಪೂರ್ವದಿಂದಲೇ ತನ್ನ 5 ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ರಚನೆ ಆದ ತಕ್ಷಣ ಜಾರಿ ಮಾಡುವುದಾಗಿ ಹೇಳುತ್ತಾ ಬಂದಿತ್ತು. ಅದರಲ್ಲಿ, ಶಕ್ತಿ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿದ್ದು, ಗೃಹಜ್ಯೋತಿ ಯೋಜನೆ ಜುಲೈ ತಿಂಗಳಿನಿಂದ ಜಾರಿಗೆ ಬಂದಿದೆ. ಗೃಹಲಕ್ಷ್ಮೀ ಯೋಜನೆಗೆ ಇನ್ನೂ ಅರ್ಜಿ ಸಲ್ಲಿಕೆ ನಡೆಯುತ್ತಿದೆ. ಯುವನಿಧಿ ಇನ್ನೂ ಜಾರಿಗೆ ಬರಬೇಕಿದೆ.
ಅನ್ನಭಾಗ್ಯ ಯೋಜನೆಯನ್ನು ಶುರು ಮಾಡಲು ಸರ್ಕಾರ ಉದ್ದೇಶಿಸಿತ್ತಾದರೂ ನಾನಾ ಕಾರಣಗಳು ಮುಂದೆ ಬಂದು ಅಕ್ಕಿ ಜನರಿಗೆ ತಲುಪಿಲ್ಲ. ಬದಲಾಗಿ, ನೇರವಾಗಿ ಜನರ ಖಾತೆಗೆ ಹಣ ಬರುವಂತೆ ಮಾಡಲಾಗುವುದು ಎನ್ನಲಾಗಿತ್ತು. ಇದೀಗ ಆ ಹಣ ಯಾವತ್ತು ಜನರ ಖಾತೆಗೆ ಬರಲಿದೆ ಎನ್ನುವ ವಿಚಾರವನ್ನು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಬಿಚ್ಚಿಟ್ಟಿದ್ದಾರೆ.
ಗ್ಯಾರಂಟಿ ಅನ್ನಭಾಗ್ಯ ಯೋಜನೆ 5 ಕೆಜಿ ಅಕ್ಕಿ ಬದಲಿಗೆ ಬಿಪಿಎಲ್ ಕಾರ್ಡ್​ದಾರರಿಗೆ ಹಣ ನೀಡುವ ಹಿನ್ನಲೆ ಈ ತಿಂಗಳ 10ರ ಸಂಜೆ 05 ಗಂಟೆಗೆ ಹಣ ಹಾಕುವುದಕ್ಕೆ ಸಿಎಂ ಚಾಲನೆ ನೀಡಲಿದ್ದಾರೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ದೇವನಹಳ್ಳಿಯಲ್ಲಿ ಮಾತನಾಡಿದ ಮುನಿಯಪ್ಪ “ನೇರವಾಗಿ ಅವರವರ ಖಾತೆಗಳಿಗೆ 15 ದಿನಗಳಲ್ಲಿ ಹಣ ಹಾಕುತ್ತೇವೆ. ಒಟ್ಟು 1 ಕೋಟಿ 29 ಲಕ್ಷ ಕಾರ್ಡ್​ಗಳಿದ್ದು, 4 ಕೋಟಿ 41 ಲಕ್ಷ ಜನರಿಗೆ 800 ಕೋಟಿ ರೂ.ವರೆಗೂ ಹಣ ಬೇಕಾಗಲಿದೆ. ತೆಲಂಗಾಣ ಛತ್ತಿಸ್​ಘಡದವರು ಅಕ್ಕಿ ನೀಡಲು ಒಪ್ಪಿದ್ದು ಸಂಪರ್ಕದಲ್ಲಿದ್ದಾರೆ. ಅವರಿಂದ ನಾವು ಅಕ್ಕಿಯನ್ನು ಖರೀದಿ ಮಾಡಿ ಆದಷ್ಟು ಬೇಗ ವಿತರಣೆ ಮಾಡುತ್ತೇವೆ” ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − nineteen =
Remember me
