ಬೆಂಗಳೂರು:ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ, ಇತ್ತೀಚೆಗೆ ಅಗಲಿದ ಪ್ರೊ.ಎಂ.ಎ. ಹೆಗಡೆ ಅವರ ಕುರಿತು ಅವರ ಸಹೋದರ ಹಾಗೂ ವಿಜಯವಾಣಿಯ ಸುದ್ದಿ ಸಂಪಾದಕ ರಾಜಶೇಖರ ಜೋಗಿನ್ಮನೆ ಅವರು ಬರೆದಿರುವ ಕೃತಿ ‘ಅಣ್ಣ ಮಹಾಬಲ’ ಇಂದು (ಏ.9) ಲೋಕಾರ್ಪಣೆ ಆಗಲಿದೆ.
ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಅವರು ಉತ್ತರಕನ್ನಡ ಜಿಲ್ಲೆಯ ಶಿರಸಿಯ ರೋಟರಿ ಆಸ್ಪತ್ರೆ ಪಕ್ಕದ ರೋಟರಿ ಸೆಂಟ್ರಲ್​ ಹಾಲ್​ನಲ್ಲಿ ಸಂಜೆ 4.30 ನಡೆಯಲಿರುವ ಸಮಾರಂಭದಲ್ಲಿ ಈ ಕೃತಿಯನ್ನು ಲೋಕಾರ್ಪಣೆ ಮಾಡಲಿರುವರು. ಸೆಲ್ಕೋ ಸಂಸ್ಥೆಯ ಸಿಇಒ ಹಾಗೂ ಯಕ್ಷಗಾನ ಕಲಾವಿದ ಮೋಹನ ಭಾಸ್ಕರ ಹೆಗಡೆ ಅತಿಥಿಯಾಗಿ ಪಾಲ್ಗೊಳ್ಳುವರು. ಹಿರಿಯ ಸಾಹಿತಿ, ಕವಿ ಶ್ರೀ ಸುಬ್ರಾಯ ಮತ್ತಿಹಳ್ಳಿ ಕೃತಿಯ ಕುರಿತು ಮಾತನಾಡುವರು. ಶಿರಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಉಪಸ್ಥಿತರಿರುವರು.

ಈ ನಾಡು ಕಂಡ ಅಪರೂಪದ ವ್ಯಕ್ತಿತ್ವ ಪ್ರೊ.ಎಂ. ಎ. ಹೆಗಡೆ. ಇವರು ಯಕ್ಷಗಾನ ತಜ್ಞರಾಗಿ, ಸಂಸ್ಕೃತ ವಿದ್ವಾಂಸರಾಗಿ, ಸಾಹಿತಿಯಾಗಿ, ಯಕ್ಷಕವಿಯಾಗಿ ತಮ್ಮ ಬಹುಮುಖಿ ಪಾಂಡಿತ್ಯದಿಂದಾಗಿ ಹೆಸರಾಗಿದ್ದವರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಅಧ್ಯಕ್ಷರಿಗೆ ಸರ್ಕಾರ ನೀಡುವ ಗೌರವಧನವನ್ನು ಸ್ವಂತಕ್ಕೆ ಬಳಸದೆ ಕಲೆಗಾಗಿಯೇ ವ್ಯಯಿಸಿ ಆದರ್ಶ ಮೆರೆದವರು.
ಇವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮಾತ್ರವಲ್ಲ, ಅದ್ವೈತ ವೇದಾಂತ, ಭಾರತೀಯ ದರ್ಶನ ಕ್ಷೇತ್ರಕ್ಕೆ ನೀಡಿದ ಕೊಡುಗೆಯೂ ಗಮನಾರ್ಹವೇ. ಯಕ್ಷಕವಿಯೂ ಆಗಿ ಪ್ರಸಿದ್ಧರಾಗಿದ್ದ ಇವರು ನೇರ ಮಾತು, ಸರಳ ವ್ಯಕ್ತಿತ್ವ ಹಾಗೂ ದಿಟ್ಟ ನಡೆಯಿಂದ ಸ್ವಚ್ಛ ಬದುಕು ಬಾಳಿದವರು. ಇವರ ನಿಧನರಾಗಿ ಒಂದು ವರ್ಷವಾಗುತ್ತಿರುವ ಸಂದರ್ಭದಲ್ಲಿ ಇವರ ಬದುಕಿನ ಪ್ರಮುಖ ಘಟ್ಟಗಳನ್ನು ಈ ಪುಸ್ತಕದಲ್ಲಿ ಇವರ ಸಹೋದರ ರಾಜಶೇಖರ ಹೆಗಡೆ ದಾಖಲಿಸಿದ್ದಾರೆ.
ಬೆಂಗಳೂರಿನ ಪದ್ಮಾವತಿ ಮತ್ತು ಹಾಸ್ಯ ಸಾಹಿತಿ ಎನ್. ರಾಮನಾಥ್ ಅವರ ತೇಜು ಪಬ್ಲಿಕೇಷನ್ಸ್ ಈ ಪುಸ್ತಕವನ್ನು ಪ್ರಕಟಿಸಿದೆ. ಹೆಗಡೆಯವರ ಜೀವನದ ಅಪರೂಪದ ವಿವರಗಳು, ಅವರೊಂದಿಗೆ ಒಡನಾಡಿದವರ ನೆನಪುಗಳು, ಅವರ ಕೃತಿಗಳ ಕುರಿತಾದ ಅಭಿಪ್ರಾಯಗಳು, ಅವರ ಚಿಂತನೆಯ ಮಾದರಿಗಳು ಎಲ್ಲವನ್ನೂ ಈ ಪುಸ್ತಕದಲ್ಲಿ ದಾಖಲಿಸಲು ಯತ್ನಿಸಿದ್ದೇನೆ. ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಶಿರಸಿಯ ಶಬರ ಸಂಸ್ಥೆಯ ಸಹಕಾರ ಇದೆ.

ಇನ್ನು ಎಲ್ಲರಿಗೂ ಲಭ್ಯ ಕೋವಿಡ್ ಬೂಸ್ಟರ್​ ಡೋಸ್​: ಯಾವತ್ತಿನಿಂದ ಶುರು?

ಇಬ್ಬರು ಮಾಜಿ ಸಿಎಂ, ಕುಂ.ವೀ. ಸೇರಿ 61ಕ್ಕೂ ಅಧಿಕ ಸಾಹಿತಿಗಳಿಗೆ ಕೊಲೆ ಬೆದರಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 19 =
Remember me
