ಬೆಂಗಳೂರು:ಶಕ್ತಿ ಯೋಜನೆ ವಿಚಾರದಲ್ಲಿ ‘ಧರ್ಮಾಸ್ತ್ರ’ ಪ್ರಯೋಗ ನಡೆದ ಬೆನ್ನಿಗೇ ಇದೀಗ ಅನ್ನಭಾಗ್ಯ ವಿಷಯ ದೇವರ ಮುಂದೆ ಪ್ರಮಾಣ ಮಾಡುವ ಮಟ್ಟಕ್ಕೆ ತಲುಪಿದೆ. ಕಾಂಗ್ರೆಸ್​ನವರು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂಬುದಾಗಿ ಮಾಜಿ ಸಚಿವ ಮುನಿರತ್ನ ಸವಾಲು ಹಾಕಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಅಕ್ಕಿ ರಾಜಕೀಯ ಸದ್ಯದಲ್ಲೇ ಇನ್ನೊಂದು ಮಜಲಿಗೆ ತಲುಪುವ ಲಕ್ಷಣ ಗೋಚರಿಸಿದೆ. ಅದಕ್ಕೆ ಮುನಿರತ್ನ ಅವರ ಈ ಹೇಳಿಕೆ ಪುಷ್ಟಿ ಕೊಡುವಂತಿದೆ.
ಇದನ್ನೂ ಓದಿ:ಮೊದಲ ಗ್ಯಾರಂಟಿಗೀಗ ಧಾರ್ಮಿಕ ‘ಶಕ್ತಿ’; ಬಿಜೆಪಿ ವಿರುದ್ಧ ಕಾಂಗ್ರೆಸ್ ಧರ್ಮಾಸ್ತ್ರ!
ಕಾಂಗ್ರೆಸ್​ನವರು ಮಾತಿಗೆ ಮುಂಚೆ ಪ್ರಮಾಣ ಮಾಡುತ್ತಾರೆ. ಅವರನ್ನು ನಾವು ಧರ್ಮಸ್ಥಳಕ್ಕೆ ಕರೆಯುತ್ತೇವೆ, ಅವರು ಅಲ್ಲಿಗೆ ಬಂದು ಪ್ರಮಾಣ ಮಾಡಲಿ. ಅವರು ಧರ್ಮಸ್ಥಳಕ್ಕೆ ಬಂದು ‘ನಾವೇ ಹತ್ತು ಕೆ.ಜಿ. ಅಕ್ಕಿ ಕೊಡುತ್ತಿದ್ದೇವೆ’ ಎಂದು ಪ್ರಮಾಣ ಮಾಡಬೇಕು ಎಂದು ಮುನಿರತ್ನ ಸವಾಲು ಹಾಕಿದ್ದಾರೆ.
ಇದನ್ನೂ ಓದಿ:ಮಹಿಳೆಯರ ‘ಶಕ್ತಿ’ಗೆ ಕಿತ್ತು ಹೋಯ್ತು ಇನ್ನೊಂದು ಬಸ್ ಡೋರ್!
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಆಗಿದೆ. ಮೋದಿಯವರು ಕೊಡುವ ಐದು ಕೆ.ಜಿ. ಅಕ್ಕಿಗೆ ಇವರ ಫೋಟೋ ಅಂಟಿಸಿಕೊಂಡು ಓಡಾಡುತ್ತಾರೆ. ಅದರ ಬದಲು ಇವರೇ 10 ಕೆ.ಜಿ. ಕೊಡುತ್ತೇವೆ ಅಂತ ಹೇಳಲಿ, ನಾನು ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಮುನಿರತ್ನ ಹೇಳಿದ್ದಾರೆ. ಪ್ರತಿ ಮನೆಯ ಮಹಿಳೆಗೆ 2 ಸಾವಿರ ರೂ. ಕೊಡುವ ವಿಚಾರವಾಗಿಯೂ ಕಾಂಗ್ರೆಸ್​ನವರು ಜಗಳ ತಂದಿಟ್ಟಿದ್ದಾರೆ ಎಂದೂ ಮುನಿರತ್ನ ಆರೋಪಿಸಿದ್ದಾರೆ.
ವಾಸ್ತು ಸರಿ ಇಲ್ಲವೆಂದು ಮುಚ್ಚಿದ್ದ ದ್ವಾರವನ್ನು ತೆರೆಸಿ ಸಿಎಂ ಕಚೇರಿಗೆ ಪ್ರವೇಶಿಸಿದ ಸಿದ್ದರಾಮಯ್ಯ!

ಸಿದ್ದರಾಮಯ್ಯ ಮತಾಂತರದ ರಾಯಭಾರಿ, ಸಿದ್ದರಾಮಯ್ಯ ಟಿಪ್ಪುವಿನ ರಾಯಭಾರಿ: ಆರ್.ಅಶೋಕ್ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
