ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆ ನಿಮಿತ್ತ ಭಾನುವಾರ ಕರ್ನಾಟಕ ಪ್ರವಾಸ ಕೈಗೊಂಡಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ KMFನ ಡೈರಿ ಉತ್ಪನ್ನಗಳನ್ನು ಸವಿದು ನಂದಿನಿ ನಮ್ಮ ಕರ್ನಾಟಕದ ಹೆಮ್ಮೆ ಎಂದು ಟ್ವೀಟ್​ ಮಾಡಿದ್ದರು.
ಇನ್ನು ರಾಹುಲ್​ ಗಾಂಧಿ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ನಾಯಕ ಅಣ್ಣಾಮಲೈ ಕಾಂಗ್ರೆಸ್​ ನಾಯಕನ ಕಾಲೆಳೆದಿದ್ಧಾರೆ.
ರಾಹುಲ್​ ಗಾಂಧಿ ಅವರು KMFನ ಉತ್ಪನ್ನಗಳನ್ನು ಬೆಸ್ಟ್​ ಎಂದು ಭಾವಿಸಿರುವುದು ಸಂತಸ ತಂದಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ.
ನಾನು ಈ ಮೂಲಕ ರಾಹುಲ್​ ಗಾಂಧಿ ಅವರಲ್ಲಿ ಕೇಳಿಕೊಳ್ಳುವೇನೆಂದರೆ ಕೇರಳದಲ್ಲಿ ನಂದಿನಿ ಉತ್ಪನ್ನಗಳ ಸುಗಮ ಮಾರಾಟಕ್ಕಾಗಿ ಕೂಡಲೇ ರಾಹುಲ್​ ಗಾಂಧಿ ಅವರು ಮಧ್ಯಪ್ರವೇಶಿಸಬೇಕು. ಇಲ್ಲದಿದ್ದರೆ ಇದು ಚುನಾವಣೆಯ ಸಮಯದಲ್ಲಿ ಮತ್ತೊಂದು ಗಿಮಿಕ್​ ಆಗುತ್ತದೆ.
Glad that Rahul Gandhi thinks Nandini is the best. There is no doubt about it.I request him to intervene in Kerala for smooth sale of Nandini. If not, this will be yet another gimmick.Waiting for Rahul Gandhi to make a public announcement in Kerala for free access to Nandini.https://t.co/x5X6VCLNuz
ಕೇರಳದಲ್ಲಿ ನಂದಿನಿ ಉತ್ಪನ್ನಗಳ ಮಾರಾಟವನ್ನು ರಾಹುಲ್​ ಗಾಂಧಿ ಘೋಷಿಸಲಿದ್ಧಾರೆ ಎಂದು ನಾನು ಭಾವಿಸಿದ್ದೇನೆ ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್​ ಮಾಡಿದ್ಧಾರೆ.
ಇದನ್ನೂ ಓದಿ:ರಾಜಕೀಯ ವ್ಯವಸಾಯ ಇದ್ದಂತೆ, ಉತ್ತಮ ಬೆಳೆಗೆ ಕಾಯಬೇಕು ಅಷ್ಟೇ: ಡಿ.ಕೆ.ಶಿವಕುಮಾರ್​
ಇನ್ನು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ರಾಹುಲ್​ ಗಾಂಧಿ ಟ್ವೀಟ್​ಗೆ ಪ್ರತಿಕ್ರಿಯಿಸಿ ಸರ್​ ನಿಮ್ಮ ಪೂರ್ವಜರ ಹೆಸರನ್ನು ಸುತ್ತುವರೆದಿರುವ ಬ್ರ್ಯಾಂಡ್​ಗಳಿಗಿಂತ ತಮಿಳುನಾಡಿನ ಅವಿನ್​ ಹಾಗೂ ಕರ್ನಾಟಕ ನಂದಿನಿ ಅಂತರಾಷ್ಟ್ರೀಯ ಉತ್ಪನ್ನಗಳಾಗಿ ರೂಪಾಂತರಗೊಳ್ಳುತ್ತಿವೆ.
ಮೋದಿ ಅವರ ಆತ್ಮನಿರ್ಭರ ಭಾರತದಲ್ಲಿ ಈ ಉತ್ಪನ್ನಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದು ದಯವಿಟ್ಟು ಇದನ್ನು ಒಂದು ಸ್ಥಳಕ್ಕೆ ಸೀಮಿತಗೊಳಿಸಬೇಡಿ ಎಂದು ರಾಹುಲ್​ ಗಾಂಧಿ ಟ್ವೀಟ್​ಗೆ ಪ್ರತಿಕ್ರಿಯಿಸಿದ್ಧಾರೆ.
Sir, unlike your forefathers who built brands surrounding their names, Modi avl’s India is seeing a surge of regional brands like Aavin in TN & Nandini in Karnataka.In Atma Nirbhar Bharat all of these brands are being transformed into international brands.https://t.co/vzKJfT6bND
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
