ಬೆಂಗಳೂರು:ಮುಂಬರುವ ಬಿಬಿಎಂಪಿ ಸಾರ್ವತ್ರಿಕ ಚುನಾವಣೆಗೆ ವಾರ್ಡ್‌ವಾರು ಮತದಾರ ಪಟ್ಟಿ ತಯಾರಿಸಲು ಅಧಿಕಾರಿಗಳಿಗೆ ರಾಜ್ಯ ಚುನಾವಣಾ ಆಯೋಗ ಶುಕ್ರವಾರ ಸೂಚನೆ ನೀಡಿದ್ದು, ಸೆ.22ಕ್ಕೆ ಅಂತಿಮ ಮತದಾರ ಪಟ್ಟಿಯನ್ನು ಪ್ರಕಟಿಸಬೇಕು. ಪಟ್ಟಿಯಲ್ಲಿ ಯಾವುದೇ ದೋಷಗಳು ಇರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ನ್ಯೂನ್ಯತೆ ಕಂಡುಬಂದರೆ ಸಂಬಂಧ ಪಟ್ಟ ವಲಯದ ಜಿಲ್ಲಾ ಚುನಾವಣಾಧಿಕಾರಿಗಳನ್ನೇ ಹೊಣೆಯಾಗಿಸುವುದಾಗಿ ಆಯೋಗ ಎಚ್ಚರಿಕೆ ನೀಡಿದೆ.
2022ರ ಜನವರಿಯಲ್ಲಿ ಪ್ರಕಟಿಸಿದ ವಿಧಾನಸಭಾ ಕ್ಷೇತ್ರವಾರು ಪರಿಷ್ಕೃತ ಮತದಾರರ ಪಟ್ಟಿ ಆಧರಿಸಿ ಪಾಲಿಕೆಯ 243 ವಾರ್ಡ್‌ಗಳ ಮತದಾರ ಪಟ್ಟಿ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಆ.25ಕ್ಕೆ ಕರಡು ಮತದಾರ ಪಟ್ಟಿ ಪ್ರಕಟಿಸಬೇಕು. ಆ ಪಟ್ಟಿಗೆ ಸೆ.2ರವರೆಗೆ ಆಕ್ಷೇಪಣೆಗೆ ಆಹ್ವಾನಿಸಬೇಕು. ನಂತರ ಪರಿಷ್ಕರಿಸಿ ಸೆ.22 ಅಂತಿಮ ಪಟ್ಟಿ ಸಿದ್ಧಪಡಿಸುವಂತೆ ಸೂಚಿಸಿದೆ.
ವಾರ್ಡ್‌ವಾರು ಪಟ್ಟಿ ತಯಾರಿಸುವಾಗ ಪ್ರತಿ ವಾರ್ಡ್ ವ್ಯಾಪ್ತಿಯಲ್ಲಿ ಬರುವ ವಿಭಜನೆಯಾಗಿರುವ ವಿಧಾನಸಭಾ ಮತದಾರರ ಪಟ್ಟಿಯ ಭಾಗಗಳನ್ನು ಹಾಗೇ ಉಳಿಸಿಕೊಂಡು ವಾರ್ಡ್‌ನ ಮತದಾರ ಪಟ್ಟಿ ಮುದ್ರಿಸಬೇಕು. ಈ ಭಾಗಕ್ಕೆ ನಿಗದಿಪಡಿಸಿರುವ ಮತಗಟ್ಟೆಯನ್ನು ಬಿಬಿಎಂಪಿ ಚುನಾವಣೆಗೂ ನಿಗದಿಪಡಿಸಬೇಕು. ಪ್ರತಿ ಮತಗಟ್ಟೆಯಲ್ಲಿ ಕನಿಷ್ಟ 300 ರಿಂದ ಗರಿಷ್ಠ 1,400 ಮತದಾರರ ಸಂಖ್ಯೆ ಮೀರದಂತೆ ಎಚ್ಚರ ವಹಿಸಬೇಕು.
ವಿಶೇಷ ವೀಕ್ಷಕರಾಗಿ ನೇಮಕ:ಬಿಬಿಎಂಪಿಯ ಎಂಟು ವಲಯ ಆಯುಕ್ತರನ್ನು ಮತದಾರಪಟ್ಟಿ ತಯಾರಿಕೆ ಸಂಬಂಧ ವಿಶೇಷ ವೀಕ್ಷಕರಾಗಿ ನೇಮಿಸಲಾಗಿದೆ. ಅವರು ತಮ್ಮ ವ್ಯಾಪ್ತಿಯ ವಾರ್ಡುಗಳ ಮತದಾರ ಪಟ್ಟಿ ತಯಾರಿಸಲು ಆಯೋಗ ನೀಡಿರುವ ಸೂಚನೆಯಂತೆ ಮತದಾರ ನೋಂದಣಿ ಅಧಿಕಾರಿ, ಮತದಾರ ಪಟ್ಟಿ ಸಿದ್ಧಪಡಿಸಿರುವುದನ್ನು ಪರಿಶೀಲಿಸಿ ಆಯೋಗಕ್ಕೆ ವರದಿ ನೀಡಬೇಕು. ವಲಯ ಆಯುಕ್ತರು ಶೇ.5 ರಷ್ಟು ಪರಿಶೀಲಿಸಬೇಕು. ಅಧಿಕಾರಿಗಳು ಮತದಾರ ಪಟ್ಟಿ ತಯಾರಿಕೆಯಲ್ಲಿ ಯಾವುದೇ ತಪ್ಪುಗಳು ಆಗದಂತೆ ವಾರ್ಡ್‌ಗಳ ಗಡಿ ರೇಖೆಗೆ ಅನುಗುಣವಾಗಿ ಪಟ್ಟಿ ಸಿದ್ಧಪಡಿಸಬೇಕು. ಯಾವುದೆ ಕಾರಣಕ್ಕೂ ಬಿಬಿಎಂಪಿ ಹೊರವಲಯದ ಮತದಾರ ಹೆಸರು ಸೇರ್ಪಡೆ ಆಗದಂತೆ ಹಾಗೂ ಬಿಬಿಎಂಪಿ ವ್ಯಾಪ್ತಿಯ ಮತದಾರರು ಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕು.
* ಮತದಾರರ ಗುರುತಿನ ಚೀಟಿ ಸಿದ್ಧಪಡೆಸುವ ಕುರಿತು ಬಿಬಿಎಂಪಿ ಸಿಬ್ಬಂದಿಗೆ ಜು.30, 31ಕ್ಕೆ ತರಬೇತಿ.* ಮನೆ ಮನೆ ಭೇಟಿ ನೀಡಿ ಮತದಾರರ ಗುರುತು – ಆ.1 ರಿಂದ 5* ಮಾಹಿತಿ ಕ್ರಮಬದ್ಧ ಜೋಡಣೆ, ಕ್ರೂಢೀಕರಣ ಆ.6-8* ಪುನರಾವರ್ತನೆಯಾದ/ಕೈಬಿಟ್ಟ ಮತದಾರರ ಪರಿಶೀಲನೆ – ಆ.9,10* ವಾರ್ಡ್‌ವಾರು ಮತದಾರರ ಪಟ್ಟಿ ಮೊದಲ ಪರಿಶೀಲನೆ ಪಟ್ಟಿ ತಯಾರಿ- ಆ.12-14* ಪರಿಶೀಲನೆ ಪಟ್ಟಿಯೊಂದಿಗೆ ವಾರ್ಡ್‌ವಾರು ಮತದಾರರ ಪಟ್ಟಿ ತಾಳೆ – ಆ.16,17* ಮತದಾರರ ಪಟ್ಟಿ ಮುದ್ರಣಕ್ಕೆ ಅನುಮೋದನೆ ಪಡೆಯುವುದು – ಆ.19* ಮತದಾರರ ಕರಡುಪಟ್ಟಿ ಪ್ರಕಟಿಸುವುದು – ಆ.25* ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನ – ಸೆ.2* ಆಕ್ಷೇಪಣೆಗಳನ್ನು ಅಂತಿಮಗೊಳಿಸುವುದು – ಸೆ.3-7* ಮತದಾರರ ಪಟ್ಟಿ ಅಂತಿಮ ಪರಿಶೀಲನಾ ಪಟ್ಟಿ – ಸೆ.8-11* ಅಂತಿಮವಾಗಿ ಮತದಾರರಪಟ್ಟಿ ಪರಿಶೀಲನೆ – ಸೆ.12-15* ಮತದಾರರಪಟ್ಟಿ ಮದ್ರಣಕ್ಕೆ ಅನಮೋದನೆ – ಸೆ.16* ಅಂತಿಮ ಮತದಾರರಪಟ್ಟಿ ಬಿಡುಗಡೆ – ಸೆ.22
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 5 =
Remember me
