ಮಂಗಳೂರು: ಶರವೇಗದ ಓಟದ ಮೂಲಕ ಸಂಚಲನ ಸೃಷ್ಟಿಸಿರುವ ತುಳುನಾಡಿನ ಕಂಬಳ ಹೀರೋ ಶ್ರೀನಿವಾಸ ಗೌಡ ದಾಖಲೆಯನ್ನು ಮುರಿಯುವ ಮೂಲಕ ಭಾರತದಲ್ಲಿ ಮತ್ತೋರ್ವ ಉಸೇನ್ ಬೋಲ್ಟ್ ಉದ್ಭವಿಸಿದ್ದಾನೆ! 100 ಮೀಟರ್ ದೂರವನ್ನು 9.55 ಸೆಕೆಂಡ್​ಗಳಲ್ಲಿ ತಲುಪಿದ್ದ ಮಿಜರಾರು ಶ್ರೀನಿವಾಸ ಗೌಡ ಅವರ ದಾಖಲೆಯನ್ನು ಪುಡಿಗಟ್ಟಿರುವ ಬಜಗೋಳಿಯ ಜೋಗಿಬೆಟ್ಟು ನಿಶಾಂತ್ ಶೆಟ್ಟಿ 9.52 ಸೆಕೆಂಡ್​ಗಳಲ್ಲೇ ಈ ಸಾಧನೆ ಮಾಡಿದ್ದಾರೆ. ಫೆ.15, 16ರಂದು ನಡೆದ ವೇಣೂರು ಕಂಬಳ ಈ ಹೊಸ ದಾಖಲೆಗೆ ಸಾಕ್ಷಿಯಾಗಿದೆ. ದ್ವಿತೀಯ ಪಿಯುಸಿವರೆಗೆ ಓದಿರುವ ನಿಶಾಂತ್ ವೃತ್ತಿಯಲ್ಲಿ ಕೃಷಿಕ. ತಂದೆ ಕಂಬಳ ಓಟಗಾರನಾಗಿದ್ದರಿಂದ ಅವರಿಂದಲೇ ಮೊದಲ ತರಬೇತಿ ಪಡೆದಿದ್ದರು. ಬಳಿಕ ಗುಣಪಾಲ ಕಡಂಬ ನೇತೃತ್ವದ ಕಂಬಳ ಅಕಾಡೆಮಿಯಲ್ಲಿ ಪರಿಪೂರ್ಣ ತರಬೇತಿ ಸಿಕ್ಕಿತ್ತು. 6 ವರ್ಷಗಳಿಂದ ಹಗ್ಗ ಹಿರಿಯ ವಿಭಾಗದಲ್ಲಿ ಕೋಣಗಳನ್ನು ಓಡಿಸುತ್ತಿರುವ ಇವರು, ಇದುವರೆಗೆ 40 ಪದಕಗಳನ್ನು ಗೆದ್ದಿದ್ದಾರೆ. ಈ ಸಾಲಿನಲ್ಲಿ ಒಂದು ಚಿನ್ನ, ಮೂರು ಬೆಳ್ಳಿ ಪದಕ ಲಭಿಸಿವೆ.
ಎರಡು ದಾಖಲೆಗಳು
ವೇಣೂರು ಕಂಬಳದಲ್ಲಿ ಶ್ರೀನಿವಾಸ ಗೌಡ 143 ಮೀ. ಉದ್ದದ ಕೆರೆಯಲ್ಲಿ 13.68 ಸೆಕೆಂಡ್​ಗಳಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ಕೋಣಗಳನ್ನು ಓಡಿಸಿದ್ದರು. ಅಂದರೆ ಇದನ್ನು 100 ಮೀ.ಗೆ ಲೆಕ್ಕಿಸಿದಾಗ 9.55 ಸೆಕೆಂಡ್ ಎಂದಾಗುತ್ತದೆ.
143 ಮೀಟರ್ ಉದ್ದದ ಕಂಬಳ ಕೆರೆಯಲ್ಲಿ ನಿಶಾಂತ್ ಹಿರಿಯ ವಿಭಾಗದ ಸೆಮಿಫೈನಲ್​ನಲ್ಲಿ ಪಾಲ್ಗೊಂಡು ಕೋಣಗಳನ್ನು 13.61 ಸೆಕೆಂಡ್​ಗಳಲ್ಲಿ ಓಡಿಸಿದ್ದರು. ಆದರೆ ಇದೇ ಫಲಿತಾಂಶ ಫೈನಲ್​ನಲ್ಲಿ ಪುನರಾವರ್ತಿ ಸಲು ಕೋಣಗಳು ಸಹಕರಿಸದ ಕಾರಣ ಸಾಧ್ಯವಾಗಿಲ್ಲ.
ನನ್ನ ಓಟ ದಾಖಲೆ ಎಂದು ತೀರ್ಪಗಾರರು ತಿಳಿಸಿದ್ದಾರೆ. ಆದರೆ ಇದಕ್ಕಿಂತಲೂ ವೇಗವಾಗಿ ಕೆಲವೊಮ್ಮೆ ಓಡಿರುತ್ತೇವೆ, ಅದರ ದಾಖಲೆ ಆಗಿಲ್ಲ. ಕಂಬಳದ ಓಟವನ್ನು ಟ್ರ್ಯಾಕ್ ಓಟಕ್ಕೆ, ಉಸೇನ್ ಬೋಲ್ಟ್​ಗೆ ಹೋಲಿಸುವುದು ಸರಿಯಲ್ಲ. ನಮಗೆ ಇದೇ ಫಲಿತಾಂಶವನ್ನು ಟ್ರ್ಯಾಕ್​ನಲ್ಲಿ ಸಾಬೀತುಪಡಿಸಲು ಸಾಧ್ಯವಿಲ್ಲ.
| ಬಜಗೋಳಿ ನಿಶಾಂತ್ ಶೆಟ್ಟಿ ಕಂಬಳ ಓಟಗಾರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
