ಬೆಂಗಳೂರು:ಸರ್ಕಾರ ರಚನೆಯ ಒಂದೊಂದೇ ಸವಾಲನ್ನು ಎದುರಿಸಿ ಬಂದ ಕಾಂಗ್ರೆಸ್ ಮುಖ್ಯ ನಾಯಕರು ಈಗ ಗ್ಯಾರಂಟಿ ಜಾರಿಗೆ ಪ್ರಯತ್ನ ಆರಂಭಿಸಿದ್ದಾರೆ. ಇದರ ಬೆನ್ನಿಗೆ ವಿಧಾನ ಪರಿಷತ್ ಚುನಾವಣೆಯನ್ನು ಜಾಣತನದಿಂದ ನಿಭಾಯಿಸುವ ಪರಿಸ್ಥಿತಿ ಎದುರಿಸಬೇಕಾಗಿದೆ.
75 ಸದಸ್ಯ ಬಲ ವಿಧಾನ ಪರಿಷತ್​ನಲ್ಲಿ ಎಂಟು ಸ್ಥಾನಗಳು ಖಾಲಿ ಇವೆ. ಈ ಪೈಕಿ ಮೂರು ಸ್ಥಾನಗಳನ್ನು ವಿಧಾನಸಭೆ ಸದಸ್ಯ ಬಲದ ಆಧಾರದಲ್ಲಿ ಆಯ್ಕೆಯಾಗಬೇಕು. ಇನ್ನು ಮೂರು ಸ್ಥಾನಗಳನ್ನು ಸರ್ಕಾರ ನಾಮ ನಿರ್ದೇಶನ ಮಾಡಲಿದೆ. ಉಳಿದ ಎರಡು ಸ್ಥಾನಗಳ ಪೈಕಿ ಒಂದು ಪದವೀಧರ ಕ್ಷೇತ್ರ ಹಾಗೂ ಇನ್ನೊಂದು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಾಗುತ್ತದೆ.
ವಿಜಯವಾಣಿಗೆ ಲಭ್ಯವಾದ ಮಾಹಿತಿ ಪ್ರಕಾರ ಚುನಾವಣಾ ಆಯೋಗವು ಮೂರು ಸ್ಥಾನಗಳಿಗೆ ಚುನಾವಣೆ ನಡೆಸಲು ಅಗತ್ಯ ಮಾಹಿತಿ ತರಿಸಿಕೊಂಡಿದೆ. ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ನಡೆಯುವ ಚುನಾವಣೆಗೆ ಚುನಾವಣಾಧಿಕಾರಿಯನ್ನು ನಿಯೋಜಿಸಲು ಅಧಿಕಾರಿಗಳು ಹಾಗೂ ಚುನಾವಣೆ ನಡೆಯುವ ಸ್ಥಳದ ಬಗ್ಗೆ ಮಾಹಿತಿ ತರಿಸಿಕೊಂಡಿದೆ. ಈ ಮೂರು ಕ್ಷೇತ್ರಗಳಿಗೆ ಜೂನ್ ಮೊದಲ ವಾರದಲ್ಲೇ ಅಧಿಸೂಚನೆ ಹೊರಡುವ ಸಾಧ್ಯತೆ ಇದ್ದು, ಬಳಿಕ 15 ದಿನಗಳಲ್ಲಿ ಪ್ರಕ್ರಿಯೆ ನಡೆಯುವುದು.
ಮೂರು ನಾಮ ನಿರ್ದೇಶನ ಸ್ಥಾನ ಭರ್ತಿ ಮಾಡಿಕೊಳ್ಳುವ ಅವಕಾಶವನ್ನು ಸರ್ಕಾರ ಮುಕ್ತವಾಗಿಟ್ಟುಕೊಳ್ಳಬಹುದು. ಆದರೆ, ಸರ್ಕಾರ ತಡ ಮಾಡುವ ಉದ್ದೇಶ ಹೊಂದಿಲ್ಲ. ವಿಧಾನ ಪರಿಷತ್​ನಲ್ಲಿ ಆದಷ್ಟು ಬೇಗ ತನ್ನ ಬಲ ಹೆಚ್ಚಿಸಿಕೊಳ್ಳಲು ಜೂನ್ ಅಂತ್ಯದೊಳಗೆ ಆ ಸ್ಥಾನವನ್ನೂ ಭರ್ತಿ ಮಾಡಿಕೊಳ್ಳಲು ಬಯಸಿದೆ. ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಕೊಂಚ ತಡವಾಗಬಹುದು.
ಆಯ್ಕೆಗೆ ಪೈಪೋಟಿ:ನಾಮ ನಿರ್ದೇಶನ ಹಾಗೂ ವಿಧಾನ ಸಭೆಯಿಂದ ವಿಧಾನ ಪರಿಷತ್​ಗೆ ನಡೆಯುವ ಚುನಾವಣೆಯಲ್ಲಿ ತಮ್ಮ ಆಪ್ತರನ್ನು ಆಯ್ಕೆ ಮಾಡಲು ಮೂರು ಬಣ ಪೈಪೋಟಿ ನಡೆಸುವುದು ನಿಶ್ಚಿತ ಎಂಬ ವಾತಾವರಣವಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸಹಜವಾಗಿ ತಮ್ಮ ಆಪ್ತರಿಗೆ ಅವಕಾಶ ಕೊಡಿಸಲು ಪ್ರಯತ್ನ ನಡೆಸುವರು.
ವಿಧಾನಸಭೆ ಚುನಾವಣೆ ವೇಳೆ ಟಿಕೆಟ್ ಆಕಾಂಕ್ಷಿಗಳಿಂದ ಪ್ರಬಲ ಪೈಪೋಟಿ ಇದ್ದ ಕಡೆಗಳಲ್ಲಿ ಮನವರಿಕೆ ಮಾಡುವ ವೇಳೆ, ಪರಿಷತ್​ನಲ್ಲಿ ಅವಕಾಶ ಕೊಡಿಸುವಾಗ ತಮ್ಮನ್ನು ಪರಿಗಣಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸ್ಪಷ್ಟ ಭರವಸೆ ನೀಡಿದ್ದಾರೆ. ಒಂದು ಅಂದಾಜಿನ ಪ್ರಕಾರ 20ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳಿಗೆ ಈ ರೀತಿ ಭರವಸೆ ನೀಡಿದ್ದಾರೆ. ಈಗ ಅವರೆಲ್ಲ ಅವಕಾಶಕ್ಕಾಗಿ ಮುಗಿಬೀಳುವುದು ಸಹಜ.
ಇನ್ನೊಂದೆಡೆ ಪಕ್ಷದಲ್ಲಿರುವ ಮಾಜಿ ಸಚಿವರು (ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದವರು), ಪಕ್ಷದ ಜತೆ ಗುರುತಿಸಿಕೊಂಡ ಕಲಾವಿದರು, ಸಾಮಾಜಿಕ ಕಾರ್ಯಕರ್ತರೂ ಸಹ ಆಸೆಗಣ್ಣಿನಿಂದ ನೋಡುತ್ತಿದ್ದಾರೆ. ಮಾಹಿತಿಗಳ ಪ್ರಕಾರ ವಿಧಾನಸಭೆಯಿಂದ ಪರಿಷತ್​ಗೆ ನಡೆಯುವ ಚುನಾವಣೆ ಯಲ್ಲಿ ಒಂದು ಸ್ಥಾನ ಬಿಜೆಪಿಗೆ ಹಾಗೂ ಎರಡು ಸ್ಥಾನ ಕಾಂಗ್ರೆಸ್​ಗೆ ಸಿಗಲಿದೆ.
1. ಬಿಜೆಪಿಯಿಂದ ಆಯ್ಕೆಯಾಗಿದ್ದ ಲಕ್ಷ್ಮಣ ಸವದಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು.
2. 2024ರ ಜೂನ್​ವರೆಗೂ ಸದಸ್ಯತ್ವದ ಅವಕಾಶ ಹೊಂದಿದ್ದ ಬಾಬುರಾವ್ ಚಿಂಚನಸೂರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು.
3. ಆರ್. ಶಂಕರ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿ ಅನರ್ಹಗೊಂಡ ಬಳಿಕ ಬಿಜೆಪಿ ಸರ್ಕಾರ ಅವರನ್ನು ಪರಿಷತ್​ಗೆ ಆಯ್ಕೆ ಮಾಡಿತ್ತು. 2026ರ ಜೂನ್ ವರೆಗೂ ಅವರ ಅವಧಿ ಇತ್ತು.
1. ಕಾಂಗ್ರೆಸ್​ನ ಹಿರಿಯ ನಾಯಕ ಮೋಹನ್ ಕುಮಾರ್ ಕೊಂಡಜ್ಜಿ ಅವಧಿ ಮೇ 17ರಂದು ಮುಕ್ತಾಯವಾಗಿದೆ.
2. ಪಿ.ಆರ್.ರಮೇಶ್ ವಿಧಾನ ಪರಿಷತ್ ಸದಸ್ಯತ್ವ ಅವಧಿ ಇದೇ ಮೇ 17ರಂದು ಕೊನೆಗೊಂಡಿದೆ.
6. ಹಿರಿಯ ಮುಖಂಡ ಸಿ.ಎಂ.ಲಿಂಗಪ್ಪ ಸದಸ್ಯತ್ವ 2023 ಜೂನ್ 8ರಂದು ಕೊನೆಗೊಳ್ಳಲಿದೆ.
1. ಆಯನೂರು ಮಂಜುನಾಥ್ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರಿ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು.
2. ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪುಟ್ಟಣ್ಣ ಕಾಂಗ್ರೆಸ್ ಸೇರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + fifteen =
Remember me
