ಬೆಂಗಳೂರು:ಅಕ್ರಮವಾಗಿ ರಾಜಕಾಲುವೆ ಮೇಲೆ ನಟ ದರ್ಶನ್‌ ಅವರ ಮನೆ ನಿರ್ಮಿಸಿದ ಹಿನ್ನೆಲೆಯಲ್ಲಿ ಮನೆ ಒತ್ತುವರಿ ತೆರವು ಮಾಡಲು ರಾಜ್ಯ ಸರ್ಕಾರ ಸೂಚಿಸಿದೆ. ಮನೆ ತೆರವಿಗೆ ಪಾಲಿಕೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರದಿಂದ ಮೌಕಿಕ ಸೂಚನೆ ಸಿಕ್ಕಿದೆ ಎನ್ನಲಾಗಿದ್ದು, ಯಾರೇ ಒತ್ತುವರಿ ಮಾಡಿ ಸ್ಟೇ ತಂದಿದ್ದರೂ ಕಾನೂನಿನ ಪ್ರಕಾರ ತೆರವು ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಆರ್​ಆರ್​ ನಗರದಲ್ಲಿರುವ ನಟ ದರ್ಶನ್​ ಅವರ ಮನೆ ರಾಜಕಾಲುವೆ ‌ಮೇಲೆ ಇದೆ. ರಾಜಕಾಲುವೆ ಒತ್ತುವರಿ ಆದರೂ ದರ್ಶನ್ ಮನೆಯನ್ನ ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್​ ಕಾನೂನಿನ ಪ್ರಕಾರ ಮನೆ ತೆರವು ಮಾಡಲು ಸೂಚನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್​, ಯಾರೇ ಒತ್ತುವರಿ ಮಾಡಿ ತಡೆಯಾಜ್ಞೆ ತಂದಿರಬಹುದು. ನಾವು ಕಾನೂನಿನ ಪ್ರಕಾರ ಒತ್ತುವರಿ ಜಾಗವನ್ನು ತೆರವು ಮಾಡುತ್ತೇವೆ. ಯಾರೇ ಆದರೂ ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನೇ ಮಾಡುತ್ತೇವೆ. ನೀನು, ನಾನು ಯಾರೇ ಸ್ಟೇ ತಂದಿದ್ರು ತೆರವು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಆಟಗಾರರ ನಡುವೆ ಒಗ್ಗಟ್ಟಿಲ್ಲದಿರುವುದೇ ಸೋಲಿಗೆ ಕಾರಣವಾಯ್ತು; ಶಾಕಿಂಗ್​ ಹೇಳಿಕೆ ಕೊಟ್ಟ ಗ್ಯಾರಿ ಕರ್ಸ್ಟನ್​ರಾಜಧಾನಿಯಲ್ಲಿ 2016ರಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾದಾಗ ರಾಜ ಕಾಲುವೆಗಳ ಮೇಲೆ ನಿರ್ಮಾಣವಾಗಿರುವ ಕಟ್ಟಡಗಳನ್ನು ತೆರವುಗೊಳಿಸಲು ಅಂದಿನ ಸಿದ್ದರಾಮಯ್ಯ ಸರ್ಕಾರ ಬಿಬಿಎಂಪಿಗೆ ಸೂಚನೆ ನೀಡಿತ್ತು. ಆಗ ಆರ್‌.ಆರ್‌. ನಗರದ ದರ್ಶನ್‌ ಅವರ ನಿವಾಸ ಕೂಡ ರಾಜ ಕಾಲುವೆಯ ಬಫರ್‌ ಜೋನ್‌ ಮೇಲೆ ನಿರ್ಮಿಸಿರುವುದು ತಿಳಿದುಬಂದಿತ್ತು.
ಐಡಿಯಲ್‌ ಹೋಮ್ಸ್‌, ದರ್ಶನ್‌, ಶಾಮನೂರು ಅವರ ಆಸ್ಪತ್ರೆ ಸೇರಿ ಹಲವು ಕಟ್ಟಡಗಳನ್ನು ತೆರವುಗೊಳಿಸುವಂತೆ ನೋಟಿಸ್‌ ನೀಡಲಾಗಿತ್ತು. ನೋಟಿಸ್‌ ನೀಡಿದ್ದರಿಂದ ದರ್ಶನ್‌ ಮತ್ತಿತರರು ಸಿವಿಲ್‌ ನ್ಯಾಯಾಲಯದಿಂದ ತಡೆಯಾಜ್ಞೆ ತಂದು, ಬಳಿಕ 2016 ಅಕ್ಟೋಬರ್‌ನಲ್ಲಿ ತೆರವು ಮಾಡದಂತೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಹೀಗಾಗಿ ಅಂದು ಒತ್ತುವರಿ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ದರ್ಶನ್‌ ಇದೀಗ ಬಂಧನವಾಗಿರುವ ಹಿನ್ನೆಲೆಯಲ್ಲಿ ಮನೆ ಒತ್ತುವರಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಮೊದಲ ರಾತ್ರಿಯಲ್ಲಿ ಮಲ್ಲಿಗೆ ಹೂವು ಕೇವಲ ಮೂಡ್‌ಗೆ ಮಾತ್ರವಲ್ಲ.. ಈ ಪರಿಮಳದಿಂದ ಇರುವ ಪ್ರಯೋಜನ ನಿಮಗೆ ತಿಳಿದಿದೆಯೇ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
