ಕೋಲಾರ:ಇತ್ತೀಚೆಗೆ ಬೆಂಗೂಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ನಾಗದೇವರ ಮೂರ್ತಿ ಧ್ವಂಸಗೊಳಿಸಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿತ್ತು. ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ನಡೆದಿದ್ದು, ಇನ್ನೊಂದು ದೇವರ ವಿಗ್ರಹವನ್ನು ಧ್ವಂಸ ಮಾಡಲಾಗಿದೆ.
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ದ್ಯಾಪಸಂದ್ರ ಗ್ರಾಮದ ಬಳಿ ಈ ಘಟನೆ ನಡೆದಿದೆ. ದ್ಯಾಪಸಂದ್ರದ ಉದ್ದೇಕಲ್ಲುಗುಟ್ಟದ ಬಳಿ ಇದ್ದ ಮುನೇಶ್ವರಸ್ವಾಮಿ ದೇವಾಲಯದಲ್ಲಿನ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.
ಇದನ್ನೂ ಓದಿ:ನಾಗದೇವರ ಮೂರ್ತಿ ಧ್ವಂಸಗೊಳಿಸಿದ ಕಿಡಿಗೇಡಿಗಳು!; 30 ವರ್ಷಗಳಿಂದ ಪೂಜೆ ನಡೆಯುತ್ತಿದ್ದ ಸ್ಥಳದಲ್ಲಿ ನಡೆದ ಕೃತ್ಯ
ಧ್ವಂಸಗೊಳಿಸಲಾದ ವಿಗ್ರಹವನ್ನು ದೇವಾಲಯದಿಂದ ಹೊರಗೆ ಎಸೆದ ಕಿಡಿಗೇಡಿಗಳು, ವಿಗ್ರಹವಿದ್ದ ಜಾಗದಲ್ಲಿ ಕೋಲಿನಿಂದ ಶಿಲುಬೆಯಾಕೃತಿ ರಚನೆ ಮಾಡಿದ್ದಾರೆ. ಕಿಡಿಗೇಡಿಗಳ ಕೃತ್ಯಕ್ಕೆ ದ್ಯಾಪಸಂದ್ರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಮಾಲೂರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾಲ ಕೊಟ್ಟು ಪ್ರಾಣ ಕಳ್ಕೊಂಡ ವೃದ್ಧೆ; ವಾಪಸ್ ಕೊಡಬೇಕಾಗುತ್ತೆ ಅಂತ ಕೊಂದೇ ಬಿಟ್ರು!

ಪುರುಷರೇ ‘ಸೋ ಸ್ವೀಟ್​’, ಮಹಿಳೆಯರಲ್ಲ..!; ಇಲ್ಲಿದೆ ಅಂಕಿ-ಅಂಶ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 13 =
Remember me
